For Quick Alerts
  ALLOW NOTIFICATIONS  
  For Daily Alerts

  'ಕಬ್ಜ' ಟೀಸರ್ 'ಕೆಜಿಎಫ್' ರೀತಿ ಇದೆ ಎಂದವರಿಗೆ ಉಪೇಂದ್ರ ಖಡಕ್ ಉತ್ತರ

  |

  ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಟೀಸರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಯಿತು. ಟೀಸರ್ ಏನೋ ಚೆನ್ನಾಗಿತ್ತು, ಆದರೆ ಟೀಸರ್‌ ಬಹುತೇಕ 'ಕೆಜಿಎಫ್' ಸಿನಿಮಾವನ್ನೇ ಹೋಲುತ್ತಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

  ತಮ್ಮ ಸಿನಿಮಾವನ್ನು 'ಕೆಜಿಎಫ್' ಜೊತೆಗೆ ಹೋಲಿಕೆ ಮಾಡುವವರ ಬಗ್ಗೆ ನಟ ಉಪೇಂದ್ರ ಮಾತನಾಡಿದ್ದು, ''ಕೆಜಿಎಫ್' ಸಿನಿಮಾ ಬಂದಾಗ ಎಲ್ಲರೂ ಹೇಳುತ್ತಿದ್ದರು, ನೋಡಿ, 'ಕೆಜಿಎಫ್' ನೋಡಿ ಕಲಿಯಿರಿ ಎಂದರು, 'ಕೆಜಿಎಫ್' ರೀತಿ ಸಿನಿಮಾ ಮಾಡಿದರೆ, ಅಯ್ಯೋ 'ಕೆಜಿಎಫ್' ಥರ ಮಾಡಿದ್ದಾರೆ ಎಂದು ಟೀಕಿಸುತ್ತಾರೆ'' ಎಂದು ನಕ್ಕರು ಉಪ್ಪಿ.

  ಇನ್ನೊಂದು ಉದಾಹರಣೆಯೊಂದಿಗೆ ಟೀಕಾಕಾರರ ಮನಸ್ಥಿತಿ ವಿವರಿಸಿದ ಉಪೇಂದ್ರ, ''ಕೆಲವರಿರುತ್ತಾರೆ ಅವರಿಗೆ ಎಲ್ಲದಕ್ಕೂ ಬೈಯ್ಯುವ ಕಾಯಿಲೆ. ಚಳಿಗಾಲದಲ್ಲಿ ಅಯ್ಯೋ ಚಳಿ ಹೆಚ್ಚು, ಬಿಸಿಲು ಬರಲಿ ಎನ್ನುತ್ತಾರೆ. ಬೇಸಿಗೆ ಬಂದರೆ ಅಯ್ಯೋ ಬಿಸಿ, ಬೇಸಗೆ ಯಾವಾಗ ಮುಗಿಯುತ್ತೊ ಎನ್ನುತ್ತಾರೆ. ಮಳೆಗಾಲ ಬಂದರೆ, ಛೇ ಜಿಟಿ-ಜಿಟಿ ಮಳೆ, ಇದ್ಯಾವಾಗ ಮುಗಿಯುತ್ತೋ ಎನ್ನುತ್ತಾರೆ. ಒಟ್ಟಿನಲ್ಲಿ ಬೈಯ್ಯುತ್ತಲೇ ಇರುವುದು ಅವರ ಜಾಯಮಾನ'' ಎಂದರು.

  ''ಕೆಲವರು ಏನು ಮಾಡಿದರೂ ತಪ್ಪೆನ್ನುತ್ತಾರೆ, ಟೀಕಿಸುತ್ತಿರುತ್ತಾರೆ ಅಂಥಹವರಿಗೆ ಏನೂ ಮಾಡಲಾಗುವುದಿಲ್ಲ. ನಮ್ಮ ಕೆಲಸ ನಾವು ಮಾಡುತ್ತಾ ಮುಂದೆ ಸಾಗಬೇಕು'' ಎಂದರು ಉಪ್ಪಿ.

  ಉಪೇಂದ್ರ ನಟನೆಯ 'ಕಬ್ಜ' ಸಿನಿಮಾದ ಟೀಸರ್ ಅವರ ಹುಟ್ಟುಹಬ್ಬದ ಹಿಂದಿನ ದಿನ ಬಿಡುಗಡೆ ಆಗಿದ್ದು, ಯೂಟ್ಯೂಬ್‌ನಲ್ಲಿ ಮೂರು ದಿನಗಳ ಕಾಲ ಟಾಪ್ ಟ್ರೆಂಡಿಂಗ್‌ನಲ್ಲಿತ್ತು. ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಟೀಸರ್ ಗಳಿಸಿತು.

  'ಕಬ್ಜ' ಸಿನಿಮಾವು 1960-70 ರ ದಶಕದ ಕತೆ ಹೊಂದಿದೆ. ಸಿನಿಮಾದಲ್ಲಿ ಉಪೇಂದ್ರ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ನಟ ಸುದೀಪ್ ಸಹ ಇದ್ದು, ಫವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಸುದೀಪ್ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಶ್ರಿಯಾ ಶಿರಿನ್ ಸಿನಿಮಾದ ನಾಯಕಿ.

  English summary
  Upendra answers to those who said Kabza movie is just like KGF. He said some people always complaint about everything.
  Wednesday, September 21, 2022, 10:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X