For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ' ಕಲೆಕ್ಷನ್ ಬಗ್ಗೆ ರಿಯಲ್ ಸ್ಟಾರ್ ಮೆಚ್ಚುಗೆ

  By Suneel
  |

  ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರು ಮತ್ತೊಬ್ಬ ಸ್ಟಾರ್ ನಟರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ಕುಳಿತು ನೋಡುವುದೇ ಒಂದು ದೊಡ್ಡ ಸಂತೋಷದ ವಿಷಯ. ಇನ್ನು ಚಿತ್ರ ನೋಡಿದರೂ ಸಹ ಕಲೆಕ್ಷನ್ ಬಗ್ಗೆ ಮಾತನಾಡುವುದು ತೀರ ಅಪರೂಪ.[ಪುನೀತ್, ಯಶ್ ರನ್ನು ಶ್ಲಾಘಿಸಿದ ರಿಯಲ್ ಸ್ಟಾರ್ ಉಪೇಂದ್ರ]

  ಇತರೆ ನಟರ ಉತ್ತಮ ಬೆಳವಣಿಗೆ, ಉತ್ತಮ ಕೆಲಸಗಳನ್ನು ನೋಡಿ ಮನಪೂರಕವಾಗಿ ಸಂತೋಷ ವ್ಯಕ್ತಪಡಿಸುತ್ತಾರೆ ರಿಯಲ್ ಸ್ಟಾರ್ ಉಪೇಂದ್ರ. ಅದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ತಾನೆ ಯಶ್ ಸಾಮಾಜಿಕ ಕಾರ್ಯಗಳನ್ನು ಮತ್ತು ಇತರೆ ಚಿತ್ರರಂಗದ ದೊಡ್ಡ ದೊಡ್ಡ ನಟರು ಪುನೀತ್ ರಾಜ್ ಕುಮಾರ್ ಅವರನ್ನು ಹೊಗಳಿದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಮೋಟ್ ಮಾಡಿಕೊಂಡಿದ್ದರು. ಈಗ 'ರಾಜಕುಮಾರ' ಕಲೆಕ್ಷನ್ ಬಗ್ಗೆ ಹೊಗಳಿದ್ದಾರೆ.

  ಅತ್ಯುತ್ತಮ ಚಿತ್ರಕಥೆ ಹೊಂದಿರುವ 'ರಾಜಕುಮಾರ' ಭರ್ಜರಿ ಪ್ರದರ್ಶನದೊಂದಿಗೆ ಆರನೇ ವಾರದತ್ತ ದಾಪುಗಾಲಿರಿಸಿದೆ. ಚಿತ್ರದ ಯಶಸ್ವಿ ಬಗ್ಗೆ ಸಂತೋಷ ಪಟ್ಟಿರುವ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಕಲೆಕ್ಷನ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ "ನಮ್ಮ ಅಪ್ಪು ರವರ 'ರಾಜಕುಮಾರ' 50 ಕೋಟಿ ರೂ ಗಳಿಸುವತ್ತ ಸಾಗುತ್ತಿದೆ. ಹೆಮ್ಮೆ ಪಡಿ" ಎಂದು ಟ್ವೀಟ್ ಮಾಡಿದ್ದಾರೆ.

  ಅಂದಹಾಗೆ ಪುನೀತ್ ರಾಜ್ ಕುಮಾರ್ ಗೆ ಪ್ರಿಯಾ ಆನಂದ್ ರವರು ಜೊತೆಯಾಗಿರುವ 'ರಾಜಕುಮಾರ' ಚಿತ್ರ ಮಾರ್ಚ್ 24 ರಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಗಲ್ಫ್ ದೇಶಗಳಲ್ಲಿಯೂ ಚಿತ್ರ ಬಿಡುಗಡೆಯಾಗಿದೆ.['ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!]

  'ರಾಜಕುಮಾರ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತವಿದೆ. ಉಳಿದಂತೆ ಪ್ರಕಾಶ್ ರೈ, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ತಮಿಳು ನಟ ಶರತ್ ಕುಮಾರ್, ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.

  English summary
  Real Star Upendra appreciated Puneeth Rajkumara starrer 'Raajakumara' film collection

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X