»   » ಪುನೀತ್, ಯಶ್ ರನ್ನು ಶ್ಲಾಘಿಸಿದ ರಿಯಲ್ ಸ್ಟಾರ್ ಉಪೇಂದ್ರ

ಪುನೀತ್, ಯಶ್ ರನ್ನು ಶ್ಲಾಘಿಸಿದ ರಿಯಲ್ ಸ್ಟಾರ್ ಉಪೇಂದ್ರ

Posted By:
Subscribe to Filmibeat Kannada

ಚಂದನವನ ಸೈಲೆಂಟಾಗೆ ಇದ್ರು ಫೇಸ್ ಬುಕ್, ಟ್ವಿಟರ್ ಗಳಲ್ಲಿ ಹಾಕುವ ಕೆಲವೊಂದು ಸಣ್ಣ ಸಣ್ಣ ಹೇಳಿಕೆಗಳು ಸ್ಟಾರ್ ವಾರ್ ಗೆ ಕಾರಣವಾಗಿಬಿಡುತ್ತವೆ. ಇತ್ತೀಚೆಗಂತೂ ಬಿಗ್ ಸ್ಟಾರ್ ಗಳ ಯಾವುದಾದರೂ ಸಿನಿಮಾ ಒಟ್ಟೊಟ್ಟಿಗೆ ರಿಲೀಸ್ ಆದ್ರೆ, ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮತ್ತು ಚಿತ್ರದ ಟ್ರೈಲರ್, ಹಾಡುಗಳು ಹೆಚ್ಚು ವೀಕ್ಷಿಸಲ್ಪಟ್ಟರು ಅವರು ವರ್ಸಸ್ ಇವರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಉದ್ದುದ್ದ ಬರೆಯುವುದು ಕಾಮನ್ ಆಗಿಬಿಟ್ಟಿದೆ.

ಆದ್ರೆ ಯಾರು ಏನೇ ಹೇಳಲಿ ಏನೇ ಬರೆಯಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಇರುವ ಸೂಪರ್ ಸ್ಟಾರ್ ಅಂದ್ರೆ ಅವರೇ ನಮ್ಮ ರಿಯಲ್ ಸ್ಟಾರ್ ಉಪೇಂದ್ರ.

ಗಾಂಧಿನಗರದಲ್ಲಿ ಸಣ್ಣ-ಪುಟ್ಟ ವಿಷಯಗಳಾದ್ರು ಅದನ್ನೇ ಸ್ಟಾರ್ ವಾರ್ ಎನ್ನುವುದು. ಅವರನ್ನು ಕಂಡರೆ ಇವರಿಗೆ ಆಗುವುದಿಲ್ಲ. ಈ ನಟರನ್ನು ಕಂಡರೆ ಅವರಿಗೆ ಆಗುವುದಿಲ್ಲ ಮಾತುಗಳು ಕೇಳಿಬರುತ್ತಿರುತ್ತವೆ. ಅಂತಹ ವಿಚಾರಗಳಿಂದ ದೂರ ಉಳಿದು ಎಲ್ಲರಿಗಿಂತ ಯಾವಾಗಲು ಡಿಫರೆಂಟ್ ಆಗಿಯೇ ಇರುವ ಉಪೇಂದ್ರ ರವರು ರಾಕಿಂಗ್ ಸ್ಟಾರ್ ಯಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಪ್ಪಿ ಮೆಚ್ಚಿದ ಆ ವಿಚಾರಗಳೇನು? ತಿಳಿದುಕೊಳ್ಳಲು ಮುಂದೆ ಓದಿ...

ಉಪ್ಪಿ ಮೆಚ್ಚಿದ ಯಶ್ ಮತ್ತು ಪುನೀತ್

ರಿಯಲ್ ಸ್ಟಾರ್ ಉಪೇಂದ್ರ ಯಾವಾಗಲು ರಿಯಾಲಿಟಿಗೆ ಹೆಚ್ಚು ಮಹತ್ವ ನೀಡುವವರು. ಅದಕ್ಕೆ ಸಾಕ್ಷಿ ಅವರು ನಿರ್ದೇಶನ ಮಾಡುವ ಸಿನಿಮಾಗಳು. ಅದೇ ಸೂಪರ್ ಸ್ಟಾರ್ ಈಗ ನಟ ಯಶ್ ರೈತರಿಗಾಗಿ ಮಾಡುತ್ತಿರುವ ಒಳ್ಳೇ ಕಾರ್ಯಗಳು ಮತ್ತು ಪುನೀತ್ ರಾಜ್ ಕುಮಾರ್ ಬಗ್ಗೆ ಇತರೆ ಸಿನಿಮಾ ರಂಗದವರು ಮಾತನಾಡಿರುವ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಮೋಟ್ ಮಾಡಿಕೊಂಡಿದ್ದಾರೆ.

ಯಶ್ ಶ್ಲಾಘನೀಯ ಕೆಲಸಕ್ಕೆ ಮನಸೋತ ಉಪ್ಪಿ

ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕ ಪಂಡಿತ್ ಜಾನುವಾರುಗಳ ಮೇವು ಸಮಸ್ಯೆಗೆ ಮುಂದಾಗಿರುವುದು, ಉತ್ತರ ಕರ್ನಾಟಕದ ಬರಪೀಡಿತ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ, ಕೆರೆ ಹೂಳು ತೆಗೆಸುವ ಮಹತ್ತರ ಕಾರ್ಯಗಳನ್ನು ಮಾಡುತ್ತಿರುವುದಕ್ಕೆ ಉಪೇಂದ್ರ ರವರು ಮೆಚ್ಚುಗೆ ವ್ಯಕ್ತಪಡಿಸಿ ಅವರ ಕಾರ್ಯಗಳನ್ನು ತಮ್ಮ ಸಾಮಾಜಿಕ ಜಾಲತಾಣ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.[ಯಶ್ 'ಯಶೋಮಾರ್ಗ'ದಿಂದ ಮತ್ತೊಂದು ಶ್ಲಾಘನೀಯ ಕೆಲಸ]

ಉಪ್ಪಿ ಶೇರ್ ಮಾಡಿದ ಪೋಸ್ಟ್ ನಲ್ಲಿ ಇದ್ದಿದ್ದೇನು?

"ಮಹದೇಶ್ವರ ಬೆಟ್ಟದ ತಪ್ಪಲಿನ ಪ್ರದೇಶಗಳು ಮತ್ತು ಕೊಳ್ಳೇಗಾಲ ತಾಲ್ಲೂಕಿನ ತಳಮಟ್ಟದ ಹಳ್ಳಿಗಳಲ್ಲಿ ಜಾನುವಾರುಗಳು ಮೇವು ಸಮಸ್ಯೆಯಿಂದ ನರಳುತ್ತಿದ್ದವು. ಈ ಪ್ರದೇಶದ ಜಾನುವಾರುಗಳಿಗೆ ಗೋಶಾಲೆಯಲ್ಲಿ ನೀಡುತ್ತಿದ್ದ ಮೇವು ಸಾಕಾಗದ ಕಾರಣ ನಟ ಯಶ್ ದಿನನಿತ್ಯ ತಮ್ಮ ಹಣದಿಂದ ಮೇವು ಸರಬರಾಜು ಮಾಡಲು ಆರಂಭಿಸಿರುವ' ಬಗ್ಗೆ ಮಾಹಿತಿ ಇದೆ.

ಪುನೀತ್ ಹೊಗಳಿದಕ್ಕೆ ಸಂತೋಷ ಪಟ್ಟ ಉಪೇಂದ್ರ

ಸಾಮಾನ್ಯವಾಗಿ ಇತರೆ ನಟರನ್ನು ಹೊಗಳಿದ ಬಗ್ಗೆ ಇನ್ನೊಬ್ಬ ನಟರು ಸಂತೋಷ ವ್ಯಕ್ತಪಡಿಸುವುದಿಲ್ಲ ಎಂದು ಹಲವರು ಗೊಣಗುವುದುಂಟು. ಆದರೆ ಉಪೇಂದ್ರ ರವರು ರಜಿನಿಕಾಂತ್, ಮೋಹನ್ ಲಾಲ್, ಮಹೇಶ್ ಬಾಬು, ಅನಿಲ್ ಕುಂಬ್ಳೆ, ಅಲ್ಲು ಅರ್ಜುನ್ ರಂತ ಖ್ಯಾತ ನಟರು ಪುನೀತ್ ರನ್ನು ಹೊಗಳಿರುವ ಬಗ್ಗೆ ಪ್ರಮೋಟ್ ಮಾಡಿದ್ದಾರೆ.

ಉಪ್ಪಿ ಪೇಜ್ ನಲ್ಲಿ ಪುನೀತ್ ಬಗ್ಗೆ ರಜಿನಿಕಾಂತ್ ಹೇಳಿದ ಮಾತು

ಕನ್ನಡಿಗ ಕಾಲಿವುಡ್ ಸೂಪರ್ ಸ್ಟಾರ್ ರಜಿನಿಕಾಂತ್ "ನಾನು ತಂಬಾ ಅನುಭವಿ ಕಲಾವಿದನಾಗಿ ನಟಿಸಲು 70-80 ಸಿನಿಮಾಆಕ್ಟ್ ಮಾಡಬೇಕಾಯಿತು. ಆದರೆ ಅಪ್ಪು(ಪುನೀತ್ ರಾಜ್ ಕುಮಾರ್) ತಮ್ಮ ಮೊದಲ ಸಿನಿಮಾದಿಂದಲೇ ಅನುಭವಿ ಕಲಾವಿದನಂತೆ ನಟಿಸಿದವರು. ಅವರ ಅಭಿನಯ ತುಂಬಾ ಆತ್ಮಸಾಕ್ಷಿಗೆ ಮೆಚ್ಚುವಂತದ್ದು" ಎಂದು ಹೇಳಿರುವ ಮಾತುಗಳಿವೆ.

ಪುನೀತ್ ಜೊತೆ ನಟಿಸಿ ಆಸೆ ಪೂರೈಸಿಕೊಂಡ ಮಾಲಿವುಡ್ ನಟ

ಇನ್ನೂ ಮಲಯಾಳಂ ನಟ ಮೋಹನ್ ಲಾಲ್ ರವರು "ಅಪ್ಪು ತೀರ ವಿನಯ ಪೂರಕ ವ್ಯಕ್ತಿತ್ವದವರು. ರಾಜ್ ಕುಮಾರ್ ಜೊತೆ ನಟಿಸಬೇಕು ಎಂದುಕೊಂಡಿದ್ದ ನನ್ನ ಆಸೆಯನ್ನು ಪುನೀತ್ ಸರ್ ಜೊತೆ ಅಭಿನಯಿಸಿ ತೀರಿಸಿಕೊಂಡೆ' ಎಂದು ಹೇಳಿದ್ದಾರೆ.

ಪ್ರಭುದೇವ್, ಮಹೇಶ್ ಬಾಬು, ಅಲ್ಲು ಅರ್ಜುನ್ ಹೇಳಿದ್ದೇನು?

"ಪುನೀತ್ ಸರ್ ದಕ್ಷಿಣ ಭಾರತದ ಬೆಸ್ಟ್ ಡ್ಯಾನ್ಸರ್" - ಪ್ರಭುದೇವ್, ನಟ

"ನಿಮ್ಮ ಕೆಲಸಗಳಿಗೆ ನಾನು ಯಾವಾಗಲು ಅಭಿಮಾನಿ" - ಮಹೇಶ್ ಬಾಬು, ತೆಲುಗು ನಟ

"ಪುನೀತ್ ಸರ್ ರೀತಿ ದಕ್ಷಿಣದಲ್ಲಿ ಯಾರು ಸಹ ಡ್ಯಾನ್ಸ್ ಮತ್ತು ಫೈಟ್ ಮಾಡೋಕೆ ಆಗುವುದಿಲ್ಲ. ಎಲ್ಲಾ ನಟರು ಒಟ್ಟಿಗೆ ಸೇರಿದಾಗ ಮೊದಲು ಡಿಸ್ ಕಸ್ ಮಾಡುವುದು ಪುನೀತ್ ಸರ್ ಜೊತೆ' - ಅಲ್ಲು ಅರ್ಜುನ್, ತೆಲುಗು ನಟ

English summary
Kannada Actor Upendra apreciated yash great task and puneeth praiseness.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada