For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರಗೆ ಪತ್ನಿಯಿಂದ ದುಬಾರಿ ಬರ್ತ್‌ಡೇ ಗಿಫ್ಟ್

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಅವರ 43ನೇ ಹುಟ್ಟುಹಬ್ಬಕ್ಕೆ ಅವರ ಮುದ್ದಿನ ಮಡದಿ ಪ್ರಿಯಾಂಕಾ ಉಪೇಂದ್ರ ಅವರು ಈ ಬಾರಿ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. ಉಪ್ಪಿಗೆ ಹುಟ್ಟುಹಬ್ಬ ಉಡುಗೊರೆಯಾಗಿ ಐಶಾರಾಮಿ ಜಾಗ್ವಾರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಪ್ರಿಯಾಂಕಾ.

  ಕ್ಲಾರೆಟ್ ಬಣ್ಣದ ಕಾರಿನ ಆನ್ ರೋಡ್ ಮುಂಬೈ ದರ ಸರಿಸುಮಾರು ರು.1,28,99,372. ಈಗಾಗಲೆ ಈ ಕಾರಿನಲ್ಲಿ ಉಪೇಂದ್ರ ತಮ್ಮ ಮಡದಿ ಮಕ್ಕಳು ಹಾಗೂ ತಂದೆ ತಾಯಿಯೊಂದಿಗೆ ಒಂದು ರೌಂಡ್ ಹೋಗಿಬಂದಿದ್ದಾರೆ. ಉಪೇಂದ್ರ 'ಸುಮ್ಮನೆ'ಯ ಮುಂದೆ ಅಂದದ ಕಾರನ್ನು ಅಭಿಮಾನಿಗಳು ಮಂಗಳವಾರ (ಸೆ.18) ಕಣ್ತುಂಬಿಕೊಳ್ಳಬಹುದು.

  ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಅವರ ಸ್ವಂತ ನಿರ್ಮಾಣ ಸಂಸ್ಥೆ ಉಪೇಂದ್ರ ಪ್ರೊಡಕ್ಷನ್ ಆರಂಭವಾಗುತ್ತಿದೆ. ಈ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಉಪೇಂದ್ರ ಅವರೇ ಆಕ್ಷನ್ ಕಟ್ ಹೇಳಲಿರುವುದು ವಿಶೇಷ.

  ಈ ಹಿಂದೆ ಇದೇ ರೀತಿ ಜಾಗ್ವಾರ್ ಕಾರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಸಿಕ್ಕಿತ್ತು. ಅವರ ಪತ್ನಿ ವಿಜಯಲಕ್ಷ್ಮಿ ಅವರು ಸರಿಸುಮಾರು ರು. 1.38 ಕೋಟಿ ಬೆಲೆಯ ಜಾಗ್ವಾರ್ ಎಕ್ಸ್ ಜೆಆರ್ ಕಾರನ್ನು ನೀಡಿದ್ದರು.

  ಈಗ ಉಪೇಂದ್ರ ಅವರ ಪತ್ನಿಯೂ ದರ್ಶನ್ ಅವರ ಪತ್ನಿಯನ್ನು ಕಾಪಿ ಹೊಡೆದರಾ? ಗೊತ್ತಿಲ್ಲ. ಒಟ್ಟಿನಲ್ಲಿ ಉಪೇಂದ್ರಗೆ ಎಕ್ಸ್ ಎಫ್ ಎಸ್ ಕಾರು ಉಡುಗೊರೆ ರೂಪದಲ್ಲಿ ಸಿಕ್ಕಿದೆ. ಕಾರಿನ ಮೇಲೆ ಈ ನಂಬರ್ ಕಂಡಿದೆ KA-51 TR-1329-12/13. (ಒನ್ ಇಂಡಿಯಾ ಕನ್ನಡ)

  English summary
  Kannada actor Real Star Upendra gets Jaguar XF costliest car as birthday gift from his wife Priyanka Upendra. The car on road price in Mumbai is 1,28,99,372. The actor is celebrating his 43rd birthday on 18th Sept, 2012 at his JP Nagar residence with his fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X