»   » ಪದೇ ಪದೇ ಕೇಳಬೇಕೆನ್ನುವ ಉಪೇಂದ್ರ ರವರ ಡೈಲಾಗ್ ಗಳಿವು

ಪದೇ ಪದೇ ಕೇಳಬೇಕೆನ್ನುವ ಉಪೇಂದ್ರ ರವರ ಡೈಲಾಗ್ ಗಳಿವು

Posted By:
Subscribe to Filmibeat Kannada

ಕನ್ನಡ ಸಿನಿ ಪ್ರಿಯರಿಗೆ ರಿಯಲ್ ಸ್ಟಾರ್ ಉಪೇಂದ್ರ ಇಷ್ಟವಾಗುವುದೇ ಅವರ 'ರಿಯಲಿಸ್ಟಿಕ್' ಡೈಲಾಗ್ಸ್ ಮೂಲಕ. ''ನಾನು ಪಾಪಿ, ಲೋಫರ್, ವರ್ಸ್ಟ್ ನನ್ ಮಗ....'' ಅಂತ ತಮ್ಮನ್ನ ತಾವು ಬೈಕೊಂಡು ಸಮಾಜದ ಡೊಂಕನ್ನು ತೆರೆಮೇಲೆ ಉಪ್ಪಿ ಬೆಟ್ಟು ಮಾಡಿ ತೋರಿಸ್ತಿದ್ರೆ, ಪ್ರೇಕ್ಷಕರಿಂದ ಶಿಳ್ಳೆ-ಚಪ್ಪಾಳೆ ಸುರಿಮಳೆ.

ಇದೇ ಕಾರಣಕ್ಕೆ, ಉಪೇಂದ್ರ ರವರ ಬಾಯಿಂದ ಬಂದ ಡೈಲಾಗ್ ಗಳು ಪದೇ ಪದೇ ಕೇಳಬೇಕು ಎನಿಸುತ್ತದೆ. 'ರಕ್ತ ಕಣ್ಣೀರು', 'ಸೂಪರ್', 'ಎ' ಸೇರಿದಂತೆ ಉಪೇಂದ್ರ ಅಭಿನಯದ ಹಲವು ಚಿತ್ರಗಳ ಡೈಲಾಗ್ ಇಂದಿಗೂ ಫೇಮಸ್.

ಇಂದು (ಸೆಪ್ಟೆಂಬರ್ 18) ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಉಪ್ಪಿ ಹುಟ್ಟುಹಬ್ಬದ ಪ್ರಯುಕ್ತ, ಅವರ ಜನಪ್ರಿಯ ಡೈಲಾಗ್ ಗಳನ್ನ ಇಲ್ಲಿ ನೀಡಲಾಗಿದೆ.

'ಸೂಪರ್' ಡೈಲಾಗ್

ಅಪ್ಪ....ಇನ್ನೊಂದೇ ಒಂದು ಡೈಲಾಗ್ ಈ ದೇಶದ ಬಗ್ಗೆ ಮಾತನಾಡಿದ್ರೆ, ಇಲ್ಲೇ ಇಲ್ಲೇ ನನ್ನ ಹೆಣ ನೋಡ್ಬೇಕಾಗುತ್ತೆ. ಏನಂದುಕೊಂಡಿದ್ದೀಯಾ ಈ ದೇಶನಾ? ಏನಂದುಕೊಂಡಿದ್ದೀಯಾ ಈ ಜನಗಳನ್ನ? ಇದುವರೆಗೂ ಈ ದೇಶನಾ, ಈ ಜನರನ್ನ ಪ್ರೀತಿಸ್ತಾ ಇದ್ದೆ ಅಷ್ಟೆ. ಈಗ ಈ ದೇಶ, ಜನರನ್ನ ಪೂಜಿಸುತ್ತೇನೆ. ಇವರು ನನ್ನ ಪ್ರಾಣಕ್ಕಿಂತ ಹೆಚ್ಚು ಇನ್ಮೇಲೆ. ಈ ದೇಶನಾ ಅದ್ಯಾವುದೋ ಸ್ಟುಪಿಡ್ ಇಂಗ್ಲೆಂಡ್ ಗೆ ಹೋಲಿಸ್ತಿಯಾ? ಇದೇ ತರಹ ರೌಡಿಗಳು ಇಂಗ್ಲೆಂಡ್ ನಲ್ಲಿ ಮನೆಗಳಿಗೆ ಹೋಗಿ ಗಲಾಟೆ ಮಾಡಿದಿದ್ರೆ, ಅಕ್ಕಪಕ್ಕದ ಮನೆಯವರು ರಾದ್ಧಾಂತ ಮಾಡಿರೋರು. ಅದೇ ನೋಡು ಈ ದೇಶದ ಸತ್‌ಪ್ರಜೆಗಳು ಹೇಗೆ ನಿಂತಿದ್ದಾರೆ ನೋಡು, ಇದು ಶಾಂತಿ-ಸೌಹಾರ್ದತೆ ಅಂದ್ರೆ. ಇಂತಹ ಜನಗಳು ನಿನಗೆ ಯಾವ ದೇಶದಲ್ಲಿ ಸಿಕ್ತಾರೆ?

'ರಕ್ತ ಕಣ್ಣೀರು' ಚಿತ್ರದ ಜನಪ್ರಿಯ ಡೈಲಾಗ್

ಪ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು, ಟೀಚರ್ಸ್ ಇಲ್ದಿರೋ ಸ್ಕೂಲ್ಸು, ಲೀಡರ್ಸ್ ಇಲ್ದಿರೋ ಪಾರ್ಟೀಸ್, ಪ್ಲಾನಿಂಗ್ ಇಲ್ದಿರೋ ಫ್ಯಾಮಿಲೀಸು, ಒಬ್ಬೊಬ್ಬನಿಗೆ ಡಜನ್ ಡಜನ್ ಮಕ್ಳು, ಅದ್ರಲ್ಲಿ ಅರ್ಧ ಪುಕ್ಲು, ಇನ್ನರ್ಧ ತಿಕ್ಲು ತಿಕ್ಲು...

ಕೈ ಕತ್ತರಿಸಿ ಕೊಡು....

ನೀನು ಈಗ ತಿರುಪತಿಗೆ ಹೋಗಿ ಮುಡಿ ಕೊಡ್ತೀಯಲ್ಲಾ, ಮತ್ತೆ ಅದು ಬೆಳಿಯುತ್ತೆ, ವಾಪಸ್ ಬರುತ್ತೆ ಅಂತ ಕೊಡ್ತೀಯಾ. ಬೆಳೆಯದೇ ಇದಿದ್ರೆ ಕೊಡ್ತಿದ್ಯಾ? ದೇವರು ಮೇಲೆ ಭಕ್ತಿ ಇದ್ರೆ, ನಿನ್ನ ಕಣ್ಣು ಕಿತ್ತು ಕೊಡು. ಕೈ ಕತ್ತರಿಸಿ ಕೊಡು. ಕಾಲು ಕಟ್ ಮಾಡಿ ಕೊಡು. ದೇವರಿಗೆ ಮುಡಿ ಕೊಡ್ತಾನಂತೆ, ದೇವರನ್ನೇನೋ ಅಂದ್ಕೊಂಡ್ಬಿಟ್ಟಿದ್ದಾನೆ ಇವನು. ಈಡಿಯೆಟ್...ಗೆಟ್ ಔಟ್.

'ಎ' ಚಿತ್ರದ ಡೈಲಾಗ್

ಏನು ತಮಾಷೆ ಮಾಡ್ತಿದ್ದೀಯಾ..ಏನು ಆಟಾಡ್ತಾ ಕೂತಿದ್ದೀಯಾ ಇಲ್ಲಿ? ಇಡೀ ದೇಶ ಬೆಂಕಿ ಹತ್ತಿ ಉರಿತಾಯಿದೆ. ಬಡ ಜನರ ಹೊಟ್ಟೆ ಉರೀತಾಯಿದೆ. ಕೆಟ್ಟವರ ಹೊಟ್ಟೆ ಊದ್ತಾಯಿದೆ. ನೀನು ಮಜಾ ತಗೊಂಡು ಕೂತಿದ್ದೀಯಾ ಇಲ್ಲಿ? ಯಾಕ್ ಗಣೇಶ ನೀನು ಸರ್ವಶಕ್ತ ತಾನೆ? ಕೆಟ್ಟವರನ್ನೆಲ್ಲಾ ಸಾಯಿಸಿಬಿಡು. ಒಳ್ಳೆಯವರನ್ನೆಲ್ಲಾ ಚೆನ್ನಾಗಿಡು. ತಾಕತ್ ಇದ್ರೆ ಹೋಗಿ ಸಾಯಿಸಿ ಬಾ...ಆಗಲ್ಲ ಅಲ್ವಾ?

ಡೋಂಟ್ ಟಾಕ್ ಸಿಂಗಲ್ ವರ್ಡ್ ಎಬೌಟ್ ಮೈ ಕಂಟ್ರಿ

ಡೋಂಟ್ ಟಚ್ ಮಿ...ನನ್ನ ಈ ದೇಹ ಮುಟ್ಟೋ ಅರ್ಹತೆ ಇರೋದು ಆ ಚಾಂದಿನಿ ಒಬ್ಬಳಿಗೆ...ಶಟ್ ಅಪ್ ಯು ಡರ್ಟಿ ಫಾರಿನ್ ಗರ್ಲ್, ಡೋಂಟ್ ಟಾಕ್ ಸಿಂಗಲ್ ವರ್ಡ್ ಎಬೌಟ್ ಮೈ ಕಂಟ್ರಿ..ವಾಟ್ ಯು ನೋ ಎಬೌಟ್ ಮೈ ಲವ್ ಟುವರ್ಡ್ಸ್ ಚಾಂದಿನಿ ಐ ಸೇ...ಫಸ್ಟ್ ಆಫ್ ಆಲ್ ಡು ಯು ನೋ ವಾಟ್ ಲವ್ ಈಸ್...ಚಾಂದಿನಿ ವಾಸ್ ಏಂಜಲ್ ಹೂ ಟಾಟ್ ಮೀ ವಾಟ್ ಲವ್ ಈಸ್...

English summary
Kannada Actor Real Star Upendra celebrates his 48th Birthday today (September 18th). On this occasion, here is a collection of popular dialogues of Upendra. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada