Upendra Birthday: ತನ್ನ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಉಪೇಂದ್ರ!
ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ವರ್ಷದ ಹುಟ್ಟುಹಬ್ಬ ತುಂಬಾನೇ ವಿಶೇಷ. ಸೆಪ್ಟಂಬರ್ 18 ರಂದು ಅಂದರೆ ಈ ಸೋಮವಾರ ನಟ 56 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇದರ ಜೊತೆಗೆ ಅವರ ಬಹುನಿರೀಕ್ಷಿತ ಸಿನಿಮಾ ಯುಐ (UI) ಟೀಸರ್ ಕೂಡ ಬಿಡುಗಡೆಯಾಗಲಿದೆ. ಈ ಬಗ್ಗೆ ನಟ ಮಾಹಿತಿ ನೀಡಿದ್ದಾರೆ.
ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉಪೇಂದ್ರ ಉಡುಗೊರೆ ನೀಡುತ್ತಿದ್ದಾರೆ. ಗಣೇಶ ಹಬ್ಬದಂದು ತಮ್ಮ ಸಿನಿಮಾ ಟೀಸರ್ ಬಿಡುಗಡೆ ಮಾಡುವ ಜೊತೆಗೆ ಅಭಿಮಾನಿಗಳ ಜೊತೆಗೆ ಕಾಲ ಕಳೆಯಲಿದ್ದಾರೆ. ಫ್ಯಾನ್ಸ್ ಜೊತೆಗೆ ಕೇಕ್ ಕಟ್ ಮಾಡಿ ರಿಯಲ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್ ರಿಲೀಸ್!
ನಟ ಉಪೇಂದ್ರ ಅವರ ನಿರ್ದೇಶನದ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಂಬಿಕೆ. ಹೊಸ ಬಗೆಯ ಸಿನಿಮಾ, ಹೊಸ ವಿಷಯ ಮತ್ತು ವಿಭಿನ್ನವಾಗಿ ತೆರೆಯ ಮೇಲೆ ಅಳವಡಿಸುವ ಅವರ ವಿಚಾರಗಳು ಫ್ಯಾನ್ಸ್‌ಗೆ ಖುಷಿ ಕೊಡುತ್ತವೆ. ಈಗ ಅಭಿಮಾನಿಗಳು ಕಾಯುತ್ತಿರುವುದು ಅವರ ನಿರ್ದೇಶನದ ಯುಐ ಸಿನಿಮಾ ಬಗ್ಗೆ. ವಿಭಿನ್ನ ಪೋಸ್ಟರ್‌ನ ಈ ಸಿನಿಮಾ ಸಿನಿ ಪ್ರೇಮಿಗಳಲ್ಲಿ ಒಂದು ಕುತೂಹಲ ಮೂಡಿಸಿರುವುದಂತು ನಿಜ.
ಈ ಸಿನಿಮಾ ಬಗ್ಗೆ ನಟ ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ತಾವು ನಿರ್ದೇಶನ ಮಾಡುತ್ತಿರುವ ಯುಐ ಸಿನಿಮಾದ ಬಹುನಿರೀಕ್ಷಿತ ಟೀಸರ್ ಮಧ್ಯಾಹ್ನ 2 ಗಂಟೆಗೆ ಊರ್ವಶಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲಿಯೇ ಹುಟ್ಟುಹಬ್ಬದ ಸಂಭ್ರಮಾಚರಣೆ ಕೂಡ ನಡೆಯಲಿದೆ.
ಸೆಪ್ಟೆಂಬರ್ 18 ರಂದು ಹುಟ್ಟುಹಬ್ಬದ ದಿನ 17ರ ರಾತ್ರಿ ಅಥವಾ 18ರ ಬೆಳಗ್ಗೆ ಕತ್ರಿಗುಪ್ಪೆ ಮನೆಯಲ್ಲಾಗಲೀ ಸದಾಶಿವ ನಗರದ ಮನೆಯಲ್ಲಾಗಲೀ ಇರುವುದಿಲ್ಲ ಅಲ್ಲಿಗೆ ಬರಬೇಡಿ. ಎಲ್ಲರೂ ಸೀದಾ ಮಧ್ಯಾಹ್ನ 2 ಗಂಟೆಗೆ ಊರ್ವಶಿ ಥಿಯೇಟರ್ ಬಳಿ ಬನ್ನಿ. ಅಲ್ಲಿಯೇ ಮಧ್ಯಾಹ್ನ 2 ಗಂಟೆಯಿಂದ 8ರ ಗಂಟೆಯವರೆಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸೋಣ. ಸಂಜೆ 6:30ಕ್ಕೆ ಥಿಯೇಟರ್ ಒಳಗೆ ಟೀಸರ್ ನೋಡೋಣ ಎಂದು ಕರೆ ನೀಡಿದ್ದರು.

ಟೀಸರ್ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ
ಉಪೇಂದ್ರ ಅವರ ಯುಐ ಸಿನಿಮಾದ ಬಹುನಿರೀಕ್ಷಿತ ಟೀಸರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಬಿಡಯಗಡೆ ಮಾಡಲಿದ್ದಾರೆ. ಸೆಪ್ಟೆಂಬರ್ 18 ರಂದು ಸಂಜೆ 6.30ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಲಹರಿ ಫಿಲ್ಮ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆಯಾಗುತ್ತದೆ.
"ನಿಮ್ಮ ಉತ್ಸಾಹವನ್ನು ಉಳಿಸಿಕೊಳ್ಳಿ, ಏಕೆಂದರೆ ಅಭಿಮಾನಿಗಳ ದಿನದ ಪರವಾಗಿ ಇಂದು ಟೀಸರ್ ಅನ್ನು ಬಿಡಲಾಗುತ್ತಿದೆ.ಲಹರಿ ಫಿಲ್ಮ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಜೆ 6:30 ಕ್ಕೆ ಟೀಸರ್ ಬಿಡುಗಡೆ" ಎಂದು ಉಪೇಂದ್ರ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು, ಕೆಲಸ ದಿನಗಳ ಹಿಂದೆ 'UI' ಸಿನಿಮಾ ಟೀಸರ್ ರಿಲೀಸ್ ಬಗ್ಗೆ ತಂಡ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಿತ್ತು. ಅದರಲ್ಲಿ ಟೀಸರ್ ಬಿಡುಗಡೆ ಬಗ್ಗೆ ಉಪೇಂದ್ರ ಗೊಂದಲ ಸೃಷ್ಟಿಸಿದ್ದರು.
"ಒಂದು ನಿಮಿಷದಲ್ಲಿ ನಮ್ಮ ಸಿನಿಮಾ ಯಾವ ರೇಂಜಿಗಿದೆ ಅಂತ ತೋರಿಸುವಂತೆ ಇದ್ದರೆ 2 ಗಂಟೆ ಸಿನಿಮಾ ನಾನ್ಯಾಕೆ ಮಾಡಬೇಕು" ಎಂದು ಉಪೇಂದ್ರ ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಅವರನ್ನು ಕೇಳಿದ್ದರು. ಈಗ ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ. 'ತರ್ಲೆ ನನ್ಮಗ' ಸಿನಿಮಾ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅವರು, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಲವು ವರ್ಷಗಳ ಬಳಿಕ ಆಕ್ಷನ್ ಕಟ್ ಹೇಳುತ್ತಿದ್ದು, ಅಭಿಮಾನಿಗಳಲ್ಲಿ ಕಾತುರ ಹೆಚ್ಚಾಗಿದೆ.


Click it and Unblock the Notifications











