For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟ ಉಪೇಂದ್ರ, ಯಾರ ಪರ ಪ್ರಚಾರ ಮಾಡಿದ್ರು?

  |

  ರಾಷ್ಟ್ರ ರಾಜಕಾರಣದಲ್ಲಿ ಮಂಡ್ಯ ಲೋಕಸಭೆ ಚುನಾವಣೆ ಇಡೀ ದೇಶದ ಗಮನ ಸೆಳೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಸ್ಪರ್ಧಿಸಿದ್ರೆ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸಿದ್ದಾರೆ.

  ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

  ಈಗಾಗಲೇ ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡ್ತಿದ್ದಾರೆ. ಇವರ ಜೊತೆ ಇನ್ನು ಕೆಲವು ತಾರೆಯರು ಮಂಡ್ಯ ಪ್ರಚಾರದಲ್ಲಿ ಭಾಗಿಯಾಗ್ತಾರೆ ಎನ್ನಲಾಗಿದೆ.

  ಮಂಡ್ಯ ಎಲೆಕ್ಷನ್ ಬಗ್ಗೆ ಕೇಳಿದ್ದಕ್ಕೆ ಉಪೇಂದ್ರ ಹೇಳೋದೆ ಬೇರೆ

  ಸುಮಲತಾ ಮತ್ತು ನಿಖಿಲ್ ಸ್ಪರ್ಧೆ ತೀರಾ ಕುತೂಹಲ ಕೆರಳಿಸಿರುವ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಈಗ ಮಂಡ್ಯ ಅಖಾಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಸುಮಲತಾ-ನಿಖಿಲ್ ಎನ್ನುತ್ತಿರುವ ಜನರ ಮಧ್ಯೆ ಪ್ರಜಾಕೀಯ ಎಂದು ಪ್ರಚಾರ ಆರಂಭಿಸಿದ್ದಾರೆ. ಅಷ್ಟಕ್ಕೂ, ಉಪ್ಪಿ ಪ್ರಚಾರ ಮಾಡಿದ್ದು ಯಾರ ಪರ? ಮುಂದೆ ಓದಿ....

  ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ಪತಯಾಚನೆ

  ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ಪತಯಾಚನೆ

  ಉಪೇಂದ್ರ ಅವರು ಸ್ಥಾಪಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸಿಪಿ ದಿವಾಕರ್ ಅವರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ದಿವಾಕರ್ ಅವರ ಪರ ಪ್ರಚಾರ ಮಾಡಲು ಉಪ್ಪಿ ಬೆಳಿಗ್ಗೆಯೇ ಮಂಡ್ಯಗೆ ಭೇಟಿ ನೀಡಿದರು.

  ಮೈಸೂರಿನಲ್ಲಿ ಚುನಾವಣಾ ಕಣಕ್ಕಿಳಿದ ಉಪೇಂದ್ರ ಪಕ್ಷದ ಅಭ್ಯರ್ಥಿ

  ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮತಭೇಟೆ

  ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮತಭೇಟೆ

  ಈಗಿನಿ ರಾಜಕೀಯ ವ್ಯವಸ್ಥೆಯನ್ನ ಬದಲಿಸಿ, ಪ್ರಜಾಕೀಯವನ್ನ ತರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ನಟ ಉಪೇಂದ್ರ ಅವರು ಎಲ್ಲೆಡೆ ಮತಯಾಚನೆ ಮಾಡುತ್ತಿದ್ದಾರೆ. ಮಂಡ್ಯದ ಪ್ರಮುಖ ನಗರಗಳಲ್ಲಿ ಜನರನ್ನ ಭೇಟಿ ಮಾಡಿ, ಉಪಿಪಿ ಅಭ್ಯರ್ಥಿಗೆ ವೋಟ್ ಮಾಡುವಂತೆ ಮನವಿ ಮಾಡ್ತಿದ್ದಾರೆ.

  ಗಡ್ಡಪ್ಪನನ್ನ ಭೇಟಿ ಮಾಡಿದ ಉಪೇಂದ್ರ

  ಗಡ್ಡಪ್ಪನನ್ನ ಭೇಟಿ ಮಾಡಿದ ಉಪೇಂದ್ರ

  ಮಂಡ್ಯದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದ ಉಪೇಂದ್ರ ಅವರಿಗೆ ಮಾರ್ಗ ಮಧ್ಯೆ ಹಿರಿಯ ನಟ ಗಡ್ಡಪ್ಪ ಕಾಣಿಸಿಕೊಂಡರು. ಈ ವೇಳೆ ಗಡ್ಡಪ್ಪ ಅವರನ್ನ ಭೇಟಿ ಮಾಡಿದ ಉಪೇಂದ್ರ, ತಮ್ಮ ಪಕ್ಷಕ್ಕೆ ವೋಟ್ ಮಾಡಿ ಎಂದು ಕೇಳಿಕೊಂಡರು.

  ನಿಖಿಲ್ ಗೆ ಮಾತ್ರವಲ್ಲ ಹರಿಪ್ರಿಯಾ, ಉಪೇಂದ್ರ ಚಿತ್ರಕ್ಕೂ ರಿಲೀಸ್ ಸಮಸ್ಯೆ

  ಪ್ರಚಾರದ ನಂತರ ಉಪ್ಪಿ ಹೇಳಿದ್ದೇನು?

  ಪ್ರಚಾರದ ನಂತರ ಉಪ್ಪಿ ಹೇಳಿದ್ದೇನು?

  ಇತ್ತೀಚೆಗೆ ರಾಜಕಾರಣ ವ್ಯಾಪಾರವಾಗಿಬಿಟ್ಟಿದೆ. ರಾಜಕಾರಣ ತೊಲಗಿಸಿ, ಪ್ರಜಾಕಾರಣ ತರುವ ಉದ್ದೇಶ ನಮ್ಮದು. ಜನರಿಗೆ ಕೆಲಸ ಮಾಡುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ನೀಡಿದ್ದೇವೆ. ಇನ್ನೂ 14 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಆಗಬೇಕಿದೆ. ರೋಡ್‌ ಶೋಗಳ ಮೇಲೆ ನಮಗೆ ನಂಬಿಕೆ ಇಲ್ಲ. ಮುಂದಿನ ಪೀಳಿಗೆಗಾದರೂ ಪ್ರಜಾಕಾರಣಬೇಕು. ವಿಚಾರವೇ ಪ್ರಚಾರವಾಗಬೇಕು. ಪ್ರಸ್ತುತ ರಾಜಕಾರಣ ಬಲಿಷ್ಠವಾದ ಜನರ ಕೈಯಲ್ಲಿದೆ. ಜಾತಿ, ಹಣ ರಾಜಕೀಯ ಹೋಗಲಾಡಿಸುವ ಪ್ರಯತ್ನ ನಮ್ಮದು ಎಂದು ತಿಳಿಸಿದರು.

  ಹಳ್ಳಿ ಭಾಗಕ್ಕೂ ರೀಚ್ ಆಗ್ಬೇಕು

  ಹಳ್ಳಿ ಭಾಗಕ್ಕೂ ರೀಚ್ ಆಗ್ಬೇಕು

  'ಹಣ, ಹೆಸರು, ಮಸಲ್ ಪವರ್ ಇರೋ ಬಳಿ ಅಧಿಕಾರ ಸಿಕ್ಕಿ ಹಾಕಿಕೊಂಡಿದೆ. ಜ್ಞಾನ, ಶ್ರಮದ ಮೂಲಕ ಅಧಿಕಾರ ಶಾಹಿಗಳ ವಿರುದ್ಧ ಚುನಾವಣೆ ನಡೆಸಬಹುದು. ಸಿನಿಮಾ ಹಾಗೂ ಪಕ್ಷದ ಮೂಲಕ ಜನರ ಮನಃಪರಿವರ್ತನೆ ಮಾಡುವುದಕ್ಕೆ ಹೋಗುತ್ತಿದ್ದೇನೆ. ಜನರ ಜಾಗೃತಿ ನಿರಂತರವಾಗಿಸಲೂ ಪ್ರಯತ್ನ ಮಾಡುತ್ತಿದ್ದೇನೆ. ರಾಜಕೀಯ ಇರೋದು ಬ್ಯುಸಿನೆಸ್, ದುಡ್ಡು ಹಾಕಿ ದುಡ್ಡು ತೆಗೆಯೋಕಾ?.... ಸಮಾಜ ಸೇವೆ ಅನ್ನೋದೆ ಇನ್ವೆಸ್ಟ್ ಮೆಂಟ್ ಆಗಿದೆ. ಲಕ್ಷಾಂತರ ಜನ ಸೇರಿಸಿ ಸಮಾರಂಭ ಮಾಡಿದರೇ ನಾನು ಭ್ರಷ್ಟನಾಗುತ್ತೇನೆ. ನಮ್ಮ ಕನಸ್ಸನ್ನು ಈಡೇರಿಸಲು ಈಗಾಗಲೇ ಪ್ರಯತ್ನ ಮಾಡುತ್ತಿದ್ದೇನೆ. ಹಳ್ಳಿ ಭಾಗಕ್ಕೂ ರೀಚ್ ಮಾಡೋಕೆ ಮುಂದಿನ ದಿನಗಳಲ್ಲಿ ಪ್ರಯತ್ನ ನಡೆಸುತ್ತೇವೆ' ಎಂದರು.

  English summary
  Kannada actor, uttama prajakiya party president upendra is Campaigning in mandya for UPP Candidate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X