Big News: ಅಲ್ಲು ಅರ್ಜುನ್ 'ಪುಷ್ಪ' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ!

ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಪುಷ್ಪ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡ್ತಿದೆ. ರೌಡಿಸಂ ಕಥೆಯಾಧರಿತ ಚಿತ್ರ ಎಂದು ಹೇಳಲಾಗುತ್ತಿದ್ದು, ಅಲ್ಲು ಅರ್ಜುನ್ ಫಸ್ಟ್ ಲುಕ್ ಸಹ ಧೂಳೆಬ್ಬಿಸುತ್ತಿದೆ.

Recommended Video

Superstar ಚಿತ್ರದ ನಾಯಕ Niranjan , ಚಿಕ್ಕಪ್ಪ Upendraಗೆ ಧನ್ಯವಾದ ತಿಳಿಸಿದ್ದು ಹೀಗೆ | Filmibeat Kannada

ಈ ಸಿನಿಮಾ ಕರ್ನಾಟಕದ ಪಾಲಿಗೆ ಸರ್ಪ್ರೈಸ್ ಆಗುವ ಎಲ್ಲ ಸೂಚನೆ ಸಿಗುತ್ತಿದೆ. ಯಾಕಂದ್ರೆ, ರಿಯಲ್ ಸ್ಟಾರ್ ಉಪೇಂದ್ರ ಅವರಗೆ ಪುಷ್ಪ ಸಿನಿಮಾದ ಆಫರ್ ಬಂದಿದೆಯಂತೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವಂತೆ ಕೇಳಲಾಗಿದೆ. ಈ ವಿಚಾರವನ್ನು ಸ್ವತಃ ಉಪೇಂದ್ರ ಹೇಳಿದ್ದಾರೆ.

ಉಪೇಂದ್ರ ಅವರಿಗೂ ಮುಂಚೆ ಮತ್ತೊಬ್ಬ ಕನ್ನಡ ನಟನ ಹೆಸರು ಈ ಚಿತ್ರದಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಚಿತ್ರತಂಡವೇ ನೀಡಬೇಕಿದೆ. ಇನ್ನು 'ಸೂಪರ್ ಸ್ಟಾರ್' ಚಿತ್ರದ ಟೈಟಲ್ ಅನಾವರಣ ಮಾಡಿದ ಉಪೇಂದ್ರ, ಪುಷ್ಪ ಸಿನಿಮಾದ ಆಓರ್ ಕುರಿತು ಬಹಿರಂಗಪಡಿಸಿದ್ದಾರೆ. ಏನಂದ್ರು? ಮುಂದೆ ಓದಿ...

ಪುಷ್ಪ ಆಫರ್ ಬಂದಿರುವುದು ನಿಜಾ!

ಪುಷ್ಪ ಆಫರ್ ಬಂದಿರುವುದು ನಿಜಾ!

ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸುವಂತೆ ಉಪೇಂದ್ರ ಅವರನ್ನ ಕೇಳಲಾಗಿದೆ. ಇದುವರೆಗೂ ಉಪ್ಪಿ ಈ ಬಗ್ಗೆ ಒಲವು ತೋರಿಸಿಲ್ಲ. ಸದ್ಯದ ಮಾಹಿತಿ ಪ್ರಕಾರ, ಉಪೇಂದ್ರ ಪುಷ್ಪ ಚಿತ್ರವನ್ನು ಒಪ್ಪಿಕೊಂಡಿಲ್ಲ. ಆದರೆ, ಇನ್ನೊಂದು ತೆಲುಗು ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ.

ಪಾತ್ರ ಇಷ್ಟ ಆದ್ರೆ ಮಾತ್ರ ಮಾಡೋದು

ಪಾತ್ರ ಇಷ್ಟ ಆದ್ರೆ ಮಾತ್ರ ಮಾಡೋದು

''ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾ ಆಫರ್ ಬರುತ್ತೆ. ಮೊದಲಿನಿಂದಲೂ ಅವಕಾಶ ಬರುತ್ತಲೇ ಇದೆ. ಪುಷ್ಪ ಚಿತ್ರಕ್ಕೂ ಕೇಳ್ತಿದ್ದಾರೆ. ಆದರೆ, ಎಲ್ಲ ಚಿತ್ರವನ್ನು ನಾನು ಮಾಡಲ್ಲ. ನನಗೆ ಅದು ಇಷ್ಟ ಆಗ್ಬೇಕು, ಏನೋ ಇದೆ ಅನಿಸುಬೇಕು. ಸನ್ ಆಫ್ ಸತ್ಯಮೂರ್ತಿಯ ಆ ಕ್ಯಾರೆಕ್ಟರ್ ಇಷ್ಟ ಆಯ್ತು. ಬಾಕ್ಸರ್ ಅಂತ ಇನ್ನೊಂದು ಸಿನಿಮಾ ಮಾಡ್ತಿದ್ದೀನಿ. ಐದು ಅಥವಾ ಹತ್ತು ನಿಮಿಷ ಬರುತ್ತೆ, ವಿಶೇಷ ಪಾತ್ರ'' ಎಂದು ಹೇಳಿದರು.

'ಪುಷ್ಪ' ಚಿತ್ರದಲ್ಲಿ ಧನಂಜಯ್ ಹೆಸರು!

'ಪುಷ್ಪ' ಚಿತ್ರದಲ್ಲಿ ಧನಂಜಯ್ ಹೆಸರು!

ಪುಷ್ಪ ಚಿತ್ರದ ಪ್ರಮುಖ ಪಾತ್ರಕ್ಕೆ ಧನಂಜಯ್ ಅವರ ಹೆಸರು ಸಹ ಕೇಳಿ ಬಂದಿದೆ. ಮೂಲಗಳ ಪ್ರಕಾರ, ಮಾತುಕತೆ ಸಹ ಆಗಿದೆ ಎನ್ನಲಾಗಿದೆ. ಈಗಾಗಲೇ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ತೆಲುಗು ಸಿನಿಮಾ 'ಭೈರವಗೀತಾ'ದಲ್ಲಿ ಧನಂಜಯ್ ನಟಿಸಿದ್ದಾರೆ. ಒಂದು ವೇಳೆ ಪುಷ್ಪ ಚಿತ್ರವೂ ಓಕೆ ಆದರೆ ಟಾಲಿವುಡ್‌ನಲ್ಲಿ ಡಾಲಿಯ ಹವಾ ಇನ್ನೂ ಸ್ವಲ್ಪ ಜೋರಾಗಲಿದೆ.

ಸಂಭಾವನೆ ವಿಚಾರಕ್ಕೆ ಭಾರಿ ಸುದ್ದಿ!

ಸಂಭಾವನೆ ವಿಚಾರಕ್ಕೆ ಭಾರಿ ಸುದ್ದಿ!

ಪುಷ್ಪ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸುಕುಮಾರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸುನೀಲ್ ಶೆಟ್ಟಿ, ಬಾಬಿ ಸಿಂಹ, ರಾಜ್ ದೀಪಕ್ ಶೆಟ್ಟಿಯ ಹೆಸರುಗಳು ಸಹ ಸದ್ದು ಮಾಡ್ತಿದೆ. ಕನ್ನಡ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಸುಕುಮಾರ್ ಈ ಚಿತ್ರಕ್ಕಾಗಿ 20 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
According to latest buzz, Kannada super star Upendra will be part in allu arjun's Pushpa movie. now, Upendra has clarified about this news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X