ತಮ್ಮ ರಾಶಿಫಲ ನೆನೆದು ಹಣೆಚಚ್ಚಿಕೊಂಡ ಉಪೇಂದ್ರ
ಶ್ರೀನಿವಾಸ ಮೂರ್ತಿ ಅವರ ಈ ಹೇಳಿಕೆಗೆ ಜಯಮೃತ್ಯುಂಜಯ ಶ್ರೀಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದಯವಿಟ್ಟು ಬಸವಣ್ಣ ಅವರಿಗೂ ಜನಿವಾರಕ್ಕೂ ಥಳುಕು ಹಾಕಬೇಡಿ. ಸಮಸ್ಯೆಯನ್ನು ತಿಳಿಗೊಳಿಸುವುದಕ್ಕಿಂತಲೂ ಇವರ ಮಾತುಗಳು ಬೆಂಕಿಗೆ ತುಪ್ಪ ಸುರಿಯುವಂತಿವೆ ಎಂಬ ಎಚ್ಚರಿಕೆಯನ್ನು ಕೊಟ್ಟರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಶ್ರೀನಿವಾಸ ಮೂರ್ತಿ ಅವರು, "ನಾನು ಜನಿವಾರ ಹಾಕುತ್ತೇನೆ. ಆದರೆ ಜನಿವಾರ ಹಾಕಿಕೊಂಡ ಎಷ್ಟೋ ಜನರು ತಪ್ಪು ಮಾಡುತ್ತಿದ್ದಾರೆ. ಆ ರೀತಿಯ ವ್ಯಕ್ತಿಗಳ ಬಗ್ಗ್ಗೆ ಮಾತನಾಡುತ್ತಿದ್ದೇನೆ ಅಷ್ಟೇ" ಎಂದರು.
ಕಡೆಗೆ ಈ ವಿವಾದಕ್ಕೆ ಉಪೇಂದ್ರ ಧುಮುಕಿದರು, "ನಾನು ಒಂದೇ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ಒಬ್ಬೇ ಒಬ್ಬರ ಮನಸ್ಸಿಗೆ ನೋವಾದರೂ ಸಹ ಈ ರೀತಿ ಶೀರ್ಷಿಕೆ ಇಟ್ಟು ಪಿಕ್ಚರ್ ಮಾಡಲಿಕ್ಕೆ ನಮಗೂ ಮನಸ್ಸಿಲ್ಲ. ನಮಗೆ ಗೊತ್ತಿಲ್ಲ. ಏನೋ ಒಂದು ಕಥೆ ಹೇಳಿದರು. ಆ ಕಥೆಗೂ ಬಸವಣ್ಣ ಅವರಿಗೂ ಸಂಬಂಧವೇ ಇಲ್ಲ.ಈ ಶೀರ್ಷಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ನಾವು ಬದಲಾಯಿಸಿಕೊಳ್ಳುತ್ತೇವೆ. ನಾನು ಡೈರೆಕ್ಟರ್ ಹಾಗೂ ನಿರ್ಮಾಪಕರ ಜೊತೆ ಮಾತನಾಡಿ ಟೈಟಲ್ ಬದಲಾವಣೆಗೆ ಸೂಚಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು.
ಈ ಹಿಂದೆ ಯಮನ ಬಗ್ಗೆ ಭಾರತದಲ್ಲಿ ತುಂಬಾ ಚಿತ್ರಗಳು ಬಂದಿವೆ. ಕನ್ನಡದಲ್ಲಿ ನಾವು ಒಂದು ಚಿತ್ರ ಮಾಡಿದೆವು. ಅದು ಕಠಾರಿವೀರ ಸುರಸುಂದರಾಂಗಿ ಚಿತ್ರ. ಕೆಲವರು 'ನಾರದ ವಿಜಯ', 'ಯಮಲೋಕದಲ್ಲಿ ವೀರಪ್ಪನ್' ಎಂಬ ಚಿತ್ರಗಳನ್ನು ಮಾಡಿದರು. ಆ ಚಿತ್ರಗಳ ಬಗ್ಗೆ ಯಾರೂ ಮಾತನಾಡಲಿಲ್ಲ. ಕಠಾರಿವೀರ ಚಿತ್ರದ ಬಗ್ಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸಿದರು.
ಅದೇನು ಮಾಡ್ತೀರಾ ನನ್ನ ರಾಶಿಫಲನೇ ಆ ರೀತಿ ಇದೆಯೇನೋ ಎನ್ನಿಸುತ್ತದೆ ಎಂದು ನಗುತ್ತಾ ಹೇಳಿದರು. ಅದಕ್ಕೇ ಇರಬೇಕು ಬೇರೆ ಯಾವ ಹೆಸರು ಬೇಡ ಎಂದು 'ಉಪೇಂದ್ರ' ಹೆಸರಲ್ಲೇ ಚಿತ್ರ ಮಾಡಿದೆ ಎಂಬ ಮಾತನ್ನು ಒಪ್ಪಿಕೊಂಡರು. ಈ ರೀತಿಯ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರನ್ನಿಟ್ಟು ಆ ಮೂಲಕ ಒಳ್ಳೆಯದನ್ನೇ ಹೇಳಲು ಹೊರಡುತ್ತೇವೆಯೇ ಹೊರತು ಕೆಟ್ಟದು ಹೇಳಲು ಯಾರಿಗಾದರೂ ಈ ಜಗತ್ತಿನಲ್ಲಿ ಗುಂಡಿಗೆ ಇದೆಯೇ? ಎಂದು ಪ್ರಶ್ನಿಸಿದರು.
'ಬಸವಣ್ಣ' ಅವರ ವಚನಗಳನ್ನು ಕೇಳುತ್ತಾ ಬೆಳೆದವರು ನಾವೆಲ್ಲಾ. ಇಡೀ ಪ್ರಚಂಚಕ್ಕೇ ಗೊತ್ತಿರುವ ವ್ಯಕ್ತಿ ಬಸವಣ್ಣ. ಅವರ ಬಗ್ಗೆ ನಾವು ಕೆಟ್ಟ ಚಿತ್ರ ತೆಗೆಯಲು ಹೇಗೆ ಮನಸ್ಸು ಬರುತ್ತದೆ. ಒಂದು ವೇಳೆ ಎಲ್ಲರ ಮನಸ್ಸಿಗೆ ನೋವಾಗುತ್ತದೆ ಎನ್ನುವುದಾದರೆ ಶೀರ್ಷಿಕೆ ಬದಲಾಯಿಸೋಣ ಬಿಡಿ ಎಂದು ಹೇಳಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟರು.


Click it and Unblock the Notifications












