»   » ಉಪೇಂದ್ರ ಅವರಿಗೋಸ್ಕರ ಈ ಹುಚ್ಚು ಅಭಿಮಾನಿ ಏನೆಲ್ಲಾ ಮಾಡಿದ್ದಾನೆ ನೋಡಿ....

ಉಪೇಂದ್ರ ಅವರಿಗೋಸ್ಕರ ಈ ಹುಚ್ಚು ಅಭಿಮಾನಿ ಏನೆಲ್ಲಾ ಮಾಡಿದ್ದಾನೆ ನೋಡಿ....

Posted By:
Subscribe to Filmibeat Kannada

ಉಪೇಂದ್ರ ತಮ್ಮ 'ಉಪ್ಪಿ 2' ಸಿನಿಮಾದ ಹಾಡಿನಲ್ಲಿ ನನ್ನ ಫ್ಯಾನ್ಸ್ 'ಹುಚ್ಚು ಸ್ವಾಭಿಮಾನಿಗಳು' ಅಂತ ಹೇಳಿದ್ದಾರೆ. ಅದೇ ಮಾತು ಈಗ ಸಾಬೀತು ಆಗಿದೆ. ಉಪೇಂದ್ರ ಅವರ ಹುಚ್ಚು ಅಭಿಮಾನಿ ಅವರಿಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಕೇಳಿ ಸ್ವತಃ ಉಪೇಂದ್ರ ಅವರೇ ಶಾಕ್ ಆಗಿದ್ದಾರೆ.

ಉಪೇಂದ್ರ ದಂಪತಿ ಬಗ್ಗೆ ಕಾಮೆಂಟ್ ಮಾಡಿದ ರಾಗಿಣಿ

ಲೋಹಿತ್ ಎಂಬ ಯುವಕ ಉಪೇಂದ್ರ ಅವರ ದೊಡ್ಡ ಭಕ್ತ. ಇತ್ತೀಚಿಗಷ್ಟೆ ಆತನಿಗೆ ಉಪ್ಪಿ ಅವರನ್ನು ನೋಡುವ ಭಾಗ್ಯ ಕೂಡ ಸಿಕ್ಕಿದೆ. ಆಗ ಉಪೇಂದ್ರ ಅವರ ಬಳಿ ಕೈ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದ ಈ ಹುಡುಗ ನಂತರ ಅದರ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಜೊತೆಗೆ ಸಕ್ಕರೆ ಕಾಯಿಲೆ ಇರುವ ಈ ಯುವಕ ಡಾಕ್ಟರ್ ಎಷ್ಟು ಹೇಳಿದರೂ ಅದನ್ನು ತಲೆಕೆಡಿಸಿಕೊಳ್ಳದೆ ತನ್ನ ಎದೆ ಮೇಲೆ ಉಪ್ಪಿ ಮುಖದ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

ಭೀಮನ ಅಮಾವಾಸ್ಯೆ: ಪತಿಯ ಪೂಜೆ ಮಾಡಿದ ಪ್ರಿಯಾಂಕಾ ಉಪೇಂದ್ರ

Upendra Crazy Fan gets tattooed Upendra's autograph on his hand

ಒಮ್ಮೆ ತನ್ನ ಕಾರಿನಲ್ಲಿ ಉಪೇಂದ್ರ ಅವರ ಚಿತ್ರವನ್ನು ತೆಗೆದು ಹಾಕಿ ಅಂತ ಕಂಪನಿಯವರು ಹೇಳಿದಾಗ ಆ ಕೆಲಸವನ್ನೇ ಬಿಟ್ಟು ಬಂದಿದ್ದಾನೆ ಈ ಅಭಿಮಾನಿ. ಇನ್ನೂ ತನ್ನ ಹುಟ್ಟುಹಬ್ಬದಂದು ಉಪೇಂದ್ರ ಅವರನ್ನು ಭೇಟಿ ಮಾಡುವುದಕ್ಕೆ ಆಗಲಿಲ್ಲ ಎಂದು ಇನ್ನು ಮುಂದೆ ತನ್ನ ಹುಟ್ಟುಹಬ್ಬದ ಆಚರಣೆಯನ್ನೇ ನಿಲ್ಲಿಸಿದ್ದಾನೆ. ಅಷ್ಟೆ ಅಲ್ಲದೆ 'ನಾನು ಸತ್ತರೆ ನಮ್ಮ ಬಾಸ್ ಉಪ್ಪಿ ಅವರನ್ನು ಕರೆಸಿ' ಅಂತ ಈ ಹುಡುಗ ಎಲ್ಲರಿಗೂ ಹೇಳಿದ್ದಾನಂತೆ.

English summary
Upendra Crazy Fan gets tattooed Upendra's autograph on his hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada