»   » ರಿಯಲ್ ಸ್ಟಾರ್ ಉಪೇಂದ್ರ 'ರಿಯಲ್ ಅಭಿಮಾನಿ'ಯ ಪವರ್ ಇದು

ರಿಯಲ್ ಸ್ಟಾರ್ ಉಪೇಂದ್ರ 'ರಿಯಲ್ ಅಭಿಮಾನಿ'ಯ ಪವರ್ ಇದು

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳೇ ಹಾಗೆ... ಅವರು ಥೇಟ್ ಉಪೇಂದ್ರ ಹಾಗೆ ಸಿಕ್ಕಾಪಟ್ಟೆ ಡಿಫರೆಂಟ್. ತಮ್ಮ ಬಾಸ್ ಗಾಗಿ ಏನು ಬೇಕಾದರೂ ಮಾಡುವ ಹುಚ್ಚು ಸ್ವಾಭಿಮಾನಿಗಳು ಅವರು. ಇದೀಗ ಆ ರೀತಿಯ ಒಬ್ಬ ಅಪ್ಪಟ ಅಭಿಮಾನಿಯ ಪವರ್ ಕಂಡು ಸ್ವತಃ ಉಪೇಂದ್ರ ಅವರೇ ಬೆರಗಾಗಿದ್ದಾರೆ.

ಉಪೇಂದ್ರ ಅವರಿಗೋಸ್ಕರ ಈ ಹುಚ್ಚು ಅಭಿಮಾನಿ ಏನೆಲ್ಲಾ ಮಾಡಿದ್ದಾನೆ ನೋಡಿ....

ಲೋಹಿತ್ ಎಂಬ ಅಭಿಮಾನಿಗೆ ಉಪೇಂದ್ರ ಅವರು ಸೋತಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಉಪ್ಪಿ ''ನನ್ನ ಪ್ರೀತಿಯ ಲೋಹಿತ್, ನಾನೇ ನಿನ್ನ ಬಳಿ ಬಂದು, ನಿನ್ನನ್ನು ಭೇಟಿ ಮಾಡುತ್ತೇನೆ. ನಿನ್ನ ಫೋನ್ ನಂಬರ್ ಕೊಡು'' ಅಂತ ಹೇಳಿದ್ದಾರೆ.

Upendra decides to meet his crazy fan

ಅಂದಹಾಗೆ, ಲೋಹಿತ್ ಎಂಬ ಅಪ್ಪಟ ಅಭಿಮಾನಿಗೆ ಸಕ್ಕರೆ ಕಾಯಿಲೆ ಇದ್ದರೂ ಉಪ್ಪಿ ಟ್ಯಾಟೂ ಹಾಕಿಸಿಕೊಂಡಿದ್ದ. ಜೊತೆಗೆ ಮಾಡುವ ಕೆಲಸ ಬಿಟ್ಟು, ಉಪ್ಪಿಗಾಗಿ ತನ್ನ ಹುಟ್ಟುಹಬ್ಬದ ಆಚರಣೆಯನ್ನೇ ನಿಲ್ಲಿಸಿ, 'ನಾನು ಸತ್ತರೆ ನಮ್ಮ ಬಾಸ್ ಉಪ್ಪಿ ಅವರನ್ನು ಕರೆಸಿ' ಅಂತ ಎಲ್ಲರಿಗೂ ಹೇಳಿದ್ದ. ಇಂತಹ ಅಭಿಮಾನಿಯ ಬಗ್ಗೆ ತಿಳಿದ ಕೂಡಲೇ ಉಪ್ಪಿ ತಾವೇ ಆತನನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

Upendra decides to meet his crazy fan
English summary
Kannada Actor Upendra has decided to meet his crazy fan
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada