For Quick Alerts
  ALLOW NOTIFICATIONS  
  For Daily Alerts

  Upendra : ಉಪೇಂದ್ರ ನಿರ್ದೇಶನದ ಹೊಚ್ಚ ಹೊಸ ಸಿನಿಮಾ ಶೂಟಿಂಗ್ ಯಾವಾಗ?

  |

  ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮಾಡುತ್ತಾರೆ ಅಂದ್ರೆ, ಸ್ಯಾಂಡಲ್‌ವುಡ್ ಅಲರ್ಟ್ ಆಗುತ್ತೆ. ಉಪ್ಪಿ ಸಿನಿಮಾದ ಹವಾ ಹಾಗಿರುತ್ತೆ. ಇನ್ನು ಸಿನಿಮಾ ಅನೌನ್ಸ್ ಆದ್ಮೇಲೆ ಅಭಿಮಾನಿಗಳು ಸುಮ್ಮನಿರೋದಿಲ್ಲ. ಉಪ್ಪಿ ನಿರ್ದೇಶನದ ಸಿನಿಮಾ ಯಾವಾಗ ಶುರುವಾಗುತ್ತೆ ಅಂತ ಎದುರು ನೋಡುತ್ತಲೇ ಇರುತ್ತಾರೆ.

  ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ಎಲ್ಲರೂ ಶೂಟಿಂಗ್ ಯಾವಾಗ? ಅಂತ ಎದುರು ನೋಡುತ್ತಿರುವಾಗಲೇ ಸಿನಿಮಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಉಪೇಂದ್ರ ಸಿನಿಮಾ ಮಾಡುವ ಶೈಲಿಯೇ ಡಿಫ್ರೆಂಟ್. ಕಥೆ ಬಗ್ಗೆ, ಶೂಟಿಂಗ್ ಬಗ್ಗೆ, ರಿಲೀಸ್ ಬಗ್ಗೆ ಒಂದೇ ಒಂದು ಸುಳಿವನ್ನೂ ಬಿಟ್ಟುಕೊಡುವುದಿಲ್ಲ. ಆದ್ರೀಗ ಶೂಟಿಂಗ್ ಯಾವಾಗ ಶುರುವಾಗುತ್ತೆ ಅನ್ನುವುದನ್ನು ಫಸ್ಟ್ ನ್ಯೂಸ್ ವರದಿ ಮಾಡಿದೆ.

  'ಹೋಮ್ ಮಿನಿಸ್ಟರ್' ಉಪೇಂದ್ರ ಭೇಟಿಯಾದ ಕನ್ನಡ 'ಜೋಶ್‌' ಕ್ರಿಯೇಟರ್‌ಗಳು'ಹೋಮ್ ಮಿನಿಸ್ಟರ್' ಉಪೇಂದ್ರ ಭೇಟಿಯಾದ ಕನ್ನಡ 'ಜೋಶ್‌' ಕ್ರಿಯೇಟರ್‌ಗಳು

  ಜೂನ್ ತಿಂಗಳಲ್ಲಿ ಶುರುವಾಗುತ್ತಾ ಶೂಟಿಂಗ್

  ರಿಯಲ್‌ಸ್ಟಾರ್ ಉಪೇಂದ್ರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಬುದ್ಧಿವಂತ 2', 'ಲಗಾಮ್', 'ಕಬ್ಜ' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಕಡೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾದಲ್ಲೂ ಉಪೇಂದ್ರ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ತ್ರಿವಿಕ್ರಮ್ ನಿರ್ದೇಶನದ ಸಿನಿಮಾ ಉಪ್ಪಿ ನಟಿಸುತ್ತಾರೆ ಎಂದು ಗುಲ್ಲೆದ್ದಿದೆ. ಹೀಗಾಗಿ ಉಪೇಂದ್ರ ನಿರ್ದೇಶನದ ಸಿನಿಮಾ ಯಾವಾಗಾ ಸೆಟ್ಟೇರುತ್ತೆ ಅನ್ನುವುದೇ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ.

  ಆದ್ರೀಗ ಜೂನ್ ತಿಂಗಳಲ್ಲಿ ತಾವೇ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಶೂಟಿಂಗ್ ಆರಂಭಿಸಲು ಉಪೇಂದ್ರ ತೀರ್ಮಾನಿಸಿದ್ದಾರಂತೆ. ಇನ್ನೊಂದು ಕಡೆ ಆಷಾಢದಲ್ಲಿ ಶೂಟಿಂಗ್ ಶುರು ಎಂದೂ ಹೇಳಲಾಗಿದೆ. ಹೀಗಾಗಿ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳ ಮಧ್ಯೆದಲ್ಲಿ ಉಪೇಂದ್ರ ನಿರ್ದೇಶನದ ಸಿನಿಮಾ ಆರಂಭ ಆಗಬಹುದು.

  Upendra Dirctorial Movie Shooting Will Starts in June

  ಡಿಸೆಂಬರ್‌ಗೆ ರಿಲೀಸ್ ಆಗುತ್ತಂತೆ ಉಪ್ಪಿ ಸಿನಿಮಾ

  ಸ್ಯಾಂಡಲ್‌ವುಡ್‌ನಲ್ಲಿ ಅಂದ್ಕೊಂಡಂತೆ ಸಿನಿಮಾ ಶೂಟಿಂಗ್ ಆಗಲ್ಲ. ಆ ಸಿನಿಮಾ ರಿಲೀಸ್ ಕೂಡ ಆಗಲ್ಲ. ಆದರೆ, ಉಪೇಂದ್ರ ನೀಟ್ ಆಗಿ ಸಿನಿಮಾ ಶೂಟಿಂಗ್ ಪ್ಲ್ಯಾನ್ ಮಾಡಿದ್ದಾರಂತೆ. ಜೂನ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭ ಆದರೆ, ಡಿಸೆಂಬರ್ 23ಕ್ಕೆ ತಮ್ಮ ನಿರ್ದೇಶನದ ಸಿನಿಮಾವನ್ನು ಬಿಡುಗಡೆ ಮಾಡಲು ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅಷ್ಟು ಬೇಗ ಶೂಟಿಂಗ್ ಮುಗಿಸುತ್ತಾರಾ? ಅನ್ನುವ ಕುತೂಹಲವಿದೆ.

  Recommended Video

  Rocky bhai Yash Superb Answers to Mumbai Media | Watch with Kannada Subtitles | KGF 2 | Sanjay dutt

  ಉಪೇಂದ್ರ ಆರ್ ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ಬಹಳ ದಿನಗಳ ಶೂಟಿಂಗ್ ನಡೆಯುತ್ತಲೇ ಇದೆ. ಇದ್ಯಾವಾಗ ಶೂಟಿಂಗ್ ಮುಗಿಯುತ್ತೋ? ಯಾವಾಗ ರಿಲೀಸ್ ಆಗುತ್ತೋ ಅನ್ನೋದು ಇನ್ನೂಗೊತ್ತಿಲ್ಲ. ಐದಕ್ಕೂ ಹೆಚ್ಚು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ 'ಕಬ್ಜ' ಸ್ಯಾಂಡಲ್‌ವುಡ್‌ಗೆ ದೊಡ್ಡ ಮಿಸ್ಟರಿಯಾಗಿದೆ.

  English summary
  Upendra Dirctorial Movie Shooting Will Starts In June. Know More.
  Thursday, April 7, 2022, 9:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X