ಉಪೇಂದ್ರ ನಿರ್ದೇಶನದ ಹೊಸ ಸಿನಿಮಾಕ್ಕೆ ಹೆಸರೇ ಇಲ್ಲ!

ಉಪೇಂದ್ರ ಮತ್ತೆ ನಿರ್ದೇಶನದ ಟೋಪಿ ಧರಿಸಿದ್ದಾರೆ. ಸಿನಿಮಾ ಒಂದನ್ನು ತಾವು ನಿರ್ದೇಶನ ಮಾಡುತ್ತಿರುವುದಾಗಿ ಉಪೇಂದ್ರ ಈಗಾಗಲೇ ಘೋಷಿಸಿದ್ದರು. ಸಿನಿಮಾದ ಪೋಸ್ಟರ್‌ ಅನ್ನು ತಮ್ಮ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದರು. ಆದರೆ ಈ ನಡುವೆಯೇ ಪೋಸ್ಟರ್‌ ಲೀಕ್ ಆಗಿದೆ.

ಉಪೇಂದ್ರ ನಿರ್ದೇಶಿಸಲಿರುವ ಹೊಸ ಸಿನಿಮಾದ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಶೇಷವೆಂದರೆ ಉಪೇಂದ್ರ ನಿರ್ದೇಶಿಸುತ್ತಿರುವ ಸಿನಿಮಾಕ್ಕೆ ಹೆಸರೇ ಇಲ್ಲ!

Upendra Directing New Movie, Poster Leaked

ಹೌದು, ಉಪೇಂದ್ರ ನಿರ್ದೇಶಿಸುತ್ತಿರುವ ಹೆಸರಿಲ್ಲ ಬದಲಿಗೆ ಸಿಂಬಲ್ ಅಷ್ಟೇ ಇದೆ. ನಾಮ (ಎರಡು ಬಿಳಿ ಒಂದು ಕೆಂಪು) ಚಿತ್ರವಷ್ಟೆ ಪೋಸ್ಟರ್‌ ಮೇಲಿದೆ. ಈ ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆಯನ್ನು ಉಪೇಂದ್ರ ಮಾಡಲಿದ್ದಾರೆ.

ಸಿನಿಮಾದ ಪೋಸ್ಟರ್‌ನಲ್ಲಿ ಹೆಸರಿನ ಬದಲಿಗೆ ತಿರುಪತಿ ನಾಮವಷ್ಟೆ ಕಾಣುತ್ತಿದೆ. ಆದರೆ ಆ ನಾಮವು ಇಂಗ್ಲೀಷ್‌ನ ಯು (U) ಎಂದು ಅರ್ಥೈಸಿಕೊಳ್ಳಬಹುದು. ಮಧ್ಯದಲ್ಲಿ ಕೆಂಪು ಬಣ್ಣದ ನಾಮವನ್ನು ಇಂಗ್ಲೀಷ್‌ನ ಐ (I) ಎಂದು ಅರ್ಥೈಸಿಕೊಳ್ಳಬಹುದು. ಸಿನಿಮಾದ ಪೋಸ್ಟರ್‌ ಅನ್ನು ಉಪೇಂದ್ರ ಅವರೇ ಡೀಕೋಡ್ ಮಾಡಿ ಹೇಳಬೇಕಷ್ಟೆ.

ಉಪೇಂದ್ರ ಈ ಮೊದಲು ಹತ್ತು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ, ಇದು ಅವರ ನಿರ್ದೇಶನದ ಹನ್ನೊಂದನೇ ಸಿನಿಮಾ. 2015 ರಲ್ಲಿ ಬಿಡುಗಡೆ ಆಗಿದ್ದ 'ಉಪ್ಪಿ 2' ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ಕೊನೆಯ ಸಿನಿಮಾ ಆಗಿತ್ತು. ಆ ಸಿನಿಮಾದಲ್ಲಿ ಕ್ರಿಸ್ಟೀನಾ ಅಕ್ವೀನಾ ನಾಯಕಿಯಾಗಿ ನಟಿಸಿದ್ದರು. ಸಿನಿಮಾವನ್ನು ಪ್ರಿಯಾಂಕಾ ಉಪೇಂದ್ರ ನಿರ್ಮಾಣ ಮಾಡಿದ್ದರು.

ಉಪೇಂದ್ರ ನಿರ್ದೇಶನದ ಸಿನಿಮಾಗಳಿಗೆ ಅದರದ್ದೇ ಆದ ಬಹುದೊಡ್ಡ ಅಭಿಮಾನಿ ವರ್ಗವಿದೆ. ಸಾಮಾನ್ಯ ಸಿನಿಮಾಗಳಿಗಿಂತಲೂ ಬಹಳ ಭಿನ್ನವಾಗಿ ಅವರು ಸಿನಿಮಾ ಹೆಣೆಯುತ್ತಾರೆ. ನಟನಾಗುವ ಮೊದಲು ನಿರ್ದೇಶಕನಾಗಿಯೇ ಉಪೇಂದ್ರ ಛಾಪು ಮೂಡಿಸಿದವರು. ಉಪೇಂದ್ರ ನಿರ್ದೇಶನ ಮಾಡಬೇಕೆಂದು ಬಹು ವರ್ಷಗಳಿಂದಲೂ ಅವರ ಅಭಿಮಾನಿಗಳು, ಸಿನಿ ಪ್ರೇಮಿಗಳು ಒತ್ತಾಯ ಮಾಡುತ್ತಲೇ ಇದ್ದರು. ಕೆಲವು ದಿನಗಳ ಹಿಂದಷ್ಟೆ ತಾವು ಸಿನಿಮಾ ನಿರ್ದೇಶನ ಮಾಡುವುದಾಗಿಯೂ ಕೊರೊನಾ ಕಾರಣಕ್ಕೆ ಯೋಜನೆ ಮುಂದಕ್ಕೆ ಹೋಗಿರುವುದಾಗಿಯೂ ಹೇಳಿದ್ದರು. ಆದರೆ ಈಗ ಸಿನಿಮಾ ಖಾತ್ರಿಯಾಗಿದೆ. ಈ ಸಿನಿಮಾವನ್ನು ಉಪೇಂದ್ರ ಅವರೇ ನಿರ್ಮಾಣ ಮಾಡಲಿದ್ದಾರೆ.

ಉಪೇಂದ್ರ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ 'ಗಣಿ' ಬಿಡುಗಡೆಗೆ ರೆಡಿಯಾಗಿದೆ. ಕನ್ನಡದಲ್ಲಿ ಆರ್.ಚಂದ್ರು ನಿರ್ದೇಶಿಸುತ್ತಿರುವ 'ಕಬ್ಜ' ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. 'ಲಗಾಮ್' ಸಿನಿಮಾದಲ್ಲಿಯೂ ಉಪೇಂದ್ರ ನಟಿಸುತ್ತಿದ್ದು ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿ. 'ಹೋಮ್ ಮಿನಿಸ್ಟರ್', 'ತ್ರಿಶೂಲಂ', 'ಬುದ್ಧಿವಂತ 2' ಸಿನಿಮಾಗಳಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ.

1992 ರಲ್ಲಿ ಬಿಡುಗಡೆ ಆದ 'ತರ್ಲೆ ನನ್ ಮಗ' ಸಿನಿಮಾದ ಮೂಲಕ ನಿರ್ದೇಶಕರಾದ ಉಪೇಂದ್ರ, ಆ ಬಳಿಕ ಕುಮಾರ್ ಗೋವಿಂದ್ ನಟಿಸಿದ 'ಶ್', ಶಿವರಾಜ್ ಕುಮಾರ್ ನಟಿಸಿದ ಆಲ್‌ ಟೈಮ್ ಸೂಪರ್ ಹಿಟ್ ಸಿನಿಮಾ 'ಓಂ', ಅಂಬರೀಶ್ ನಟಿಸಿದ 'ಆಪರೇಷನ್ ಅಂತ', ತೆಲಗಿನ 'ಓಂಕಾರ', ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದ 'ಸ್ವಸ್ಥಿಕ್', ತಾವೇ ನಾಯಕ ನಟನಾಗಿ ನಟಿಸಿದ 'ಏ', 'ಉಪೇಂದ್ರ' ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಆ ನಂತರ ಹತ್ತು ವರ್ಷ ನಿರ್ದೇಶನದಿಂದ ದೂರ ಉಳಿದ ಉಪೇಂದ್ರ 2010 ರಲ್ಲಿ ಬಿಡುಗಡೆ ಆದ 'ಸೂಪರ್' ಸಿನಿಮಾ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದರು. ನಂತರ 2015 ರಲ್ಲಿ 'ಉಪ್ಪಿ 2' ಸಿನಿಮಾ ನಿರ್ದೇಶನ ಮಾಡಿದರು.

More from Filmibeat

English summary
Upendra directing new movie. Movie's poster leaked on social media. Movie has no name it has symbol only.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X