ಉಪೇಂದ್ರ ಹೊಸ ಸಿನಿಮಾ ರಹಸ್ಯ ಜೂನ್ 3ಕ್ಕೆ ರಿವೀಲ್!

ನಟ ಉಪೇಂದ್ರ ಮತ್ತೆ ನಿರ್ದೇಶನಕ ಟೋಪಿ ಧರಿಸಿದ್ದಾರೆ. ಕೆಲ ವರ್ಷ ನಿರ್ದೇಶನದಿಂದ ದೂರ ಉಳಿದಿದ್ದ ನಟ ಉಪೇಂದ್ರ ಈಗ ಮತ್ತೆ ನಿರ್ದೇಶಕನಾಗಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಉಪ್ಪಿ ಸಿನಿಮಾ ಮಾಡುವುದಾಗಿ ಈಗಾಲೇ ಘೋಷಿಸಿದರು. ಸಿನಿಮಾದ ಟೈಟಲ್ ಕೂಡ ರಿಲೀಸ್ ಆಗಿದೆ.

ಈ ಚಿತ್ರದ ಬಗ್ಗೆ ನಟ ಉಪೇಂದ್ರ ಆಗಲಿ, ಸಿನಿಮಾ ತಂಡ ಆಗಲಿ ಹೆಚ್ಚಿನದಾಗಿ ಏನನ್ನೂ ಹೇಳಿರಲಿಲ್ಲ. ಆದರೆ ಸಿನಿಮಾದ ಪೋಸ್ಟರ್ ಮೂಲಕ ಉಪ್ಪಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದರು. ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಮೂಲಕ ಉಪ್ಪಿ ಪ್ರಶ್ನೆಗಳ ಬೆಟ್ಟವನ್ನೇ ಹೊತ್ತು ಬಂದಿದ್ದಾರೆ.

ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸದ್ಯದಲ್ಲೇ ಸಿಗಲಿದೆ. ಈ ಬಗ್ಗೆ ಮತನಾಡಲು ಉಪೇಂದ್ರ ಸಜ್ಜಾಗಿದ್ದಾರೆ. ಜೂನ್‌ 3ರಂದು ಸಿನಿಮಾದ ಬಗ್ಗೆ ಮಾತನಾಡಲು ಚಿತ್ರತಂಡ ಹಾಜರಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಓದಿ...

ಜೂನ್ 3ಕ್ಕೆ ಉಪ್ಪಿ ಟೈಟಲ್ ರಹಸ್ಯ ರಿವೀಲ್!

ಜೂನ್ 3ಕ್ಕೆ ಉಪ್ಪಿ ಟೈಟಲ್ ರಹಸ್ಯ ರಿವೀಲ್!

ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಬಗ್ಗೆ ಸಿನಿಮಾ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಬಿಚ್ಚಿಡಲಿದೆ ಚಿತ್ರತಂಡ. ಜೂನ್ 3ಕ್ಕೆ ಸಿನಿಮಾವನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ ಸಿನಿಮಾ ತಂಡ. ಈ ಬಗ್ಗೆ ನಟ ಉಪೇಂದ್ರ ಹೇಳಿಕೊಂಡಿದ್ದಾರೆ. ಅಂದು ಸಿನಿಮಾದ ಅದ್ಧೂರಿ ಮುಹೂರ್ತ ನಡೆಯಲಿದೆ. ಬಹುಶಃ ಅಂದೇ ಸಿನಿಮಾದ ಟೈಟಲ್ ಬಗ್ಗೆ ರಹಸ್ಯ ಬಿಚ್ಚಿಡಲಿದ್ದಾರೆ ನಟ, ನಿರ್ದೇಶಕ ಉಪೇಂದ್ರ.

ಪೋಸ್ಟರ್‌ನಲ್ಲಿದೆ ಹಲವು ಹಿಂಟ್‌ಗಳು!

ಪೋಸ್ಟರ್‌ನಲ್ಲಿದೆ ಹಲವು ಹಿಂಟ್‌ಗಳು!

ಇನ್ನು ಈ ಚಿತ್ರದ ಮೊದಲ ಪೋಸ್ಟರ್ ಮಾತ್ರ ರಿಲೀಸ್ ಆಗಿದೆ. ಈ ಹಿಂದೆ ಪಂಗನಾಮ ಮತ್ತು U, I ರೀತಿಯಲ್ಲಿ ಕಾಣಿಸಿಕೊಂಡಿದ್ದ ಟೈಟಲ್ ಬದಲಾಗಿದೆ. ಕುದುರೆ ಲಾಳ ಚಿತ್ರದ ಟೈಟಲ್ ಆಗಿದೆ. ಕುದುರೆ ಲಾಳದ ನಡುವೆ ಅಗ್ನಿ ಜ್ವಾಲೆ ಇದೆ. ಕುದುರೆಯ ಕಾಲುಗಳಿಗೆ ಲಾಳ ಹಾಕುತ್ತಾರೆ. ಅಲ್ಲದೆ ಈ ಕುದುರೆ ಲಾಳದ ಬಗ್ಗೆ ಸಾಕಷ್ಟು ನಂಬಿಕೆಗಳು ಇವೆ. ಮನೆಯಲ್ಲಿ ಕುದುರೆ ಲಾಳ ಇಟ್ಟರೆ ಅದೃಷ್ಟ ಅಂತಲೂ ಹೇಳಲಾಗುತ್ತದೆ. ಇದೊಂದು ಮೂಡನಂಬಿಕೆ ಅಂತಲೂ ಹೇಳುತ್ತಾರೆ. ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿವೆ.

ಜೂನ್ 3ಕ್ಕೆ ಪಾತ್ರವರ್ಗದ ಬಗ್ಗೆ ಮಾಹಿತಿ!

ಜೂನ್ 3ಕ್ಕೆ ಪಾತ್ರವರ್ಗದ ಬಗ್ಗೆ ಮಾಹಿತಿ!

ಗ್ಯಾಪ್ ಬಳಿಕ ಬರುತ್ತಿರುವುದರಿಂದ ಉಪೇಂದ್ರ ಅವರು ಚಿತ್ರದಲ್ಲಿ ಹೊಸದೇನನ್ನೋ ಹೇಳಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಸದ್ಯ ಚಿತ್ರದಲ್ಲಿ ಉಪ್ಪಿ ನಟನೆ ಮಾತ್ರ ಖಚಿತ ಆಗಿದೆ. ಜೂನ್ 3ಕ್ಕೆ ಚಿತ್ರದಲ್ಲಿನ ಪಾತ್ರ ವರ್ಗದ ಬಗ್ಗೆ ಮಾಹಿತಿ ಸಿಗಲಿದೆ. ಇನ್ನು ಶೂಟಿಂಗ್ ಕೂಡ ಶುರುವಾಗಲಿದೆ. ಈ ಚಿತ್ರಕ್ಕೆ ಜಿ.ಮನೋಹರನ್ ಮತ್ತು ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಚಿತ್ರ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

ಉಪ್ಪಿ 2 ಬಳಿಕ ಬಂದ ಉಪ್ಪಿ!

ಉಪ್ಪಿ 2 ಬಳಿಕ ಬಂದ ಉಪ್ಪಿ!

ಇಲ್ಲಿ ತನಕ ಸುಮಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಇದು ಅವರ ನಿರ್ದೇಶನ 11ನೇ ಸಿನಿಮಾ. ಉಪೇಂದ್ರ ನಿರ್ದೇಶನದ 'ಉಪ್ಪಿ 2' ಸಿನಿಮಾ 2015ರಲ್ಲಿ ರಿಲೀಸ್ ಆಗಿತ್ತು. ಇದು ಅವರು ಅಭಿನಯಿಸಿ, ನಿರ್ದೇಶನದ ಕೊನೆಯ ಸಿನಿಮಾ. ಈ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಹಣ ಹೂಡಿದ್ದರು.

More from Filmibeat

English summary
Upendra Directional And Starrer New Movie Poster officially Launch On June 3rd, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X