ಮತ್ತೆ ತೆಲುಗಿನತ್ತ ಹೊರಟ ಉಪೇಂದ್ರ: ಇದೇ ನೋಡಿ ಮುಂದಿನ ಸಿನಿಮಾ

ಕನ್ನಡ ನಟ, ನಿರ್ದೇಶಕ ಉಪೇಂದ್ರ ಕನ್ನಡಕ್ಕೆ ಮಾತ್ರವಲ್ಲ ನೆರೆಯ ತೆಲುಗು ಸಿನಿರಂಗದಲ್ಲೂ ಚಿರ ಪರಿಚಿತ ನಟ. ಹಲವು ಸಿನಿಮಾಗಳನ್ನು ಉಪೇಂದ್ರ ಅವರು ತೆಲುಗಿನಲ್ಲಿ ಮಾಡಿದ್ದಾರೆ.

Recommended Video

ಶೈನ್ ಜೊತೆ ಹೋಳಿ ಹಬ್ಬದಲ್ಲಿ ಮಿಂದೆದ್ದ ಮೇಘಾ ಶೆಟ್ಟಿ | Shine Shetty | Megha Shetty | Filmibeat Kannada

'ರಾ', ಕನ್ಯಾದಾನಂ, ಟಾಸ್, ಸತ್ಯಂ, ಸನ್ ಆಫ್ ಸತ್ಯಮೂರ್ತಿ ಸೇರಿ ಇನ್ನೂ ಕೆಲವು ತೆಲುಗು ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದಾರೆ. ಅಷ್ಟೆ ಅಲ್ಲದೆ ಅವರ ಅನೇಕ ಕನ್ನಡ ಸಿನಿಮಾಗಳು ತೆಲುಗು ಗೆ ಡಬ್ ಆಗಿ ಹಿಟ್ ಆಗಿವೆ.

ನಟ ಉಪೇಂದ್ರ ಅವರು ಅಲ್ಲು ಅರ್ಜುನ್ ಅಭಿನಯದ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು ಅವರ ಕೊನೆಯ ತೆಲುಗು ಸಿನಿಮಾ ಆಗಿತ್ತು. ಈಗ ಮತ್ತೊಂದು ತೆಲುಗು ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ.

ವರುಣ್ ತೇಜ್ ಸಿನಿಮಾದಲ್ಲಿ ಉಪೇಂದ್ರ

ವರುಣ್ ತೇಜ್ ಸಿನಿಮಾದಲ್ಲಿ ಉಪೇಂದ್ರ

ಮೆಗಾಸ್ಟಾರ್ ಕುಟುಂಬ ಉದಯೋನ್ಮುಖ ನಟ ವರುಣ್ ತೇಜ್ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುವುದು ಬಹುತೇಕ ಖಾತ್ರಿಯಾಗಿದೆ. ವರುಣ್ ತೇಜ್ ಅವರ ಮುಂದಿನ ಸಿನಿಮಾದಲ್ಲಿ ಉಪೇಂದ್ರ ಗೆ ಉತ್ತಮ ಪಾತ್ರವಿದೆಯಂತೆ.

ಹಲವು ಆಫರ್‌ಗಳು ತೆಲುಗಿನಿಂದ ಬಂದಿದ್ದವು

ಹಲವು ಆಫರ್‌ಗಳು ತೆಲುಗಿನಿಂದ ಬಂದಿದ್ದವು

ಸನ್ ಆಫ್ ಸತ್ಯಮೂರ್ತಿ ಬಳಿಕ ಉಪೇಂದ್ರ ಅವರಿಗೆ ಹಲವು ಆಫರ್‌ಗಳು ತೆಲುಗು ಸಿನಿ ಉದ್ಯಮದಿಂದ ಬಂದಿತಂತೆ. ಆದರೆ ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರವೇ ಇದ್ದಿದ್ದರಿಂದ ಉಪೇಂದ್ರ ಸಿನಿಮಾಗಳನ್ನು ನಿರಾಕರಿಸಿದರಂತೆ.

ಇದರಲ್ಲಿ ಉಪೇಂದ್ರ ವಿಲನ್ ಅಲ್ಲ

ಇದರಲ್ಲಿ ಉಪೇಂದ್ರ ವಿಲನ್ ಅಲ್ಲ

ಆದರೆ ವರುಣ್ ತೇಜ್ ನಟನೆಯ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇಲ್ಲದ ಪಾತ್ರ ದೊರೆತಿದ್ದರಿಂದ ಹಾಗೂ ಪಾತ್ರವು ಉಪೇಂದ್ರ ಅವರ ವ್ಯಕ್ತಿತ್ವಕ್ಕೆ ಹೆಚ್ಚು ಹೊಂದಿಕೆ ಆಗುವ ಕಾರಣದಿಂದ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಸಿನಿಮಾವನ್ನು ಕಿರಣ್ ಕೊರ್ರಪಾಟಿ ನಿರ್ದೇಶಿಸುತ್ತಿದ್ದು, ಸಿನಿಮಾಕ್ಕೆ ಬಾಕ್ಸರ್ ಎಂದು ಹೆಸರಿಡಲಾಗಿದೆ.

ಸಿನಿಮಾ-ರಾಜಕೀಯ ಎರಡರಲ್ಲೂ ಬ್ಯುಸಿ

ಸಿನಿಮಾ-ರಾಜಕೀಯ ಎರಡರಲ್ಲೂ ಬ್ಯುಸಿ

ಉಪೇಂದ್ರ ಅವರು ಸಿನಿಮಾ, ರಾಜಕೀಯ ಎರಡೂ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಬ್ಜ, ಬುದ್ಧಿವಂತ 2 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗಲೇ ಲಾಕ್‌ಡೌನ್ ಆದ ಕಾರಣ ಚಿತ್ರೀಕರಣ ಸ್ತಬ್ಧವಾಗಿದೆ. ಲಾಕ್‌ಡೌನ್ ಅಂತ್ಯದ ಬಳಿಕ ಉಪೇಂದ್ರ ಅಭಿನಯದ ಎರಡು ಸಿನಿಮಾಗಳು ಒಂದರಹಿಂದೊಂದು ಬಿಡುಗಡೆ ಆಗಲಿವೆ.

More from Filmibeat

English summary
Kannada actor, director Upendra acting with telugu hero Varun Tej in his next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X