ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ 5 ಲಕ್ಷ ಚೆಕ್ ಹಸ್ತಾಂತರಿಸಿದ ಉಪೇಂದ್ರ
Recommended Video
ಉತ್ತರ ಕರ್ನಾಟಕದಲ್ಲಿ ಉಂಟಾದ ಭಾರಿ ಪ್ರವಾಹದಿಂದ ಅಲ್ಲಿನ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸಾವಿರಾರು ಜನರು ಮನೆ, ಆಸ್ತಿ-ಪಾಸ್ತಿ ಎಲ್ಲವೂ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಉಳಿಯಬೇಕಾಯಿತು.
ಉತ್ತರ ಕರ್ನಾಟಕ ಭಾಗದ ಜನರಿಗೆ ನೆರವಾದ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಅಗತ್ಯವಸ್ತುಗಳನ್ನ ಪೂರೈಸಿದೆ. ಅಭಿಮಾನಿ ಸಂಘಗಳು ಮತ್ತು ಕೆಲವು ಕಲಾವಿದರು ಖುದ್ದು ಅಲ್ಲಿಗೆ ಭೇಟಿ ನೀಡಿ ಸಹಾಯ ಮಾಡಿದ್ದರು.
ಈ ಮಧ್ಯೆ ನಟ-ನಿರ್ದೇಶಕ ಮತ್ತು ಪ್ರಜಾಕಾರಣಿ ಉಪೇಂದ್ರ ಅವರು ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ 5 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಹಾಗಾಗಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಉಪೇಂದ್ರ 5 ಲಕ್ಷದ ಚೆಕ್ ಸಿಎಂಗೆ ಹಸ್ತಾಂತರಿಸಿದ್ದಾರೆ.

ಉಪೇಂದ್ರ ಅವರಷ್ಟೆ ಅಲ್ಲ, ಇತ್ತೀಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಸಿಎಂ ಪರಿಹಾರ ನಿಧಿಗೆ 5 ಲಕ್ಷ ನೀಡಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ 25 ಲಕ್ಷ ರೂಪಾಯಿ ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ನೀಡಿದ್ದಾರೆ. ಜೊತೆಗೆ ತೆಲುಗು ನಟ ಸಂಪೂರ್ಣೇಶ್ ಬಾಬು 2 ಲಕ್ಷ ನೀಡಿದ್ದರೆ, ತಮಿಳು ನಟ ಸೂರ್ಯ ಮತ್ತು ಕಾರ್ತಿ ಕೇರಳ ಮತ್ತು ಕರ್ನಾಟಕಕ್ಕೆ ತಲಾ 5 ಲಕ್ಷ ನೀಡಿದ್ದಾರೆ.


Click it and Unblock the Notifications











