twitter
    For Quick Alerts
    ALLOW NOTIFICATIONS  
    For Daily Alerts

    ''ಪ್ಯಾನ್ ಇಂಡಿಯಾ ಎಂದೋ ಆಗಿದೆ'' ಉಪ್ಪಿ, ವಿಜಿ, ಸೂರಿ

    |

    'ಪ್ಯಾನ್ ಇಂಡಿಯಾ' ಎನ್ನುವುದು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಪದೇ ಪದೇ ಕೇಳಿ ಬರುತ್ತಿರುವ ಪದ. 'ಕೆಜಿಎಫ್' ಸಿನಿಮಾ ಬರುವವರೆಗೆ ಇಂಡಸ್ಟ್ರಿಯಲ್ಲಿ ಇದ್ದ ಕೆಲವರಿಗೆ ಮಾತ್ರ ತಿಳಿದಿದ್ದ ಈ ಪದ ಈಗ ಸಾಮಾನ್ಯ ಪ್ರೇಕ್ಷಕರ ಬಾಯಲ್ಲೂ ಹರಿದಾಡುತ್ತಿದೆ.

    ಕನ್ನಡದ ಅನೇಕ ಮೇಕರ್ ಗಳು ಈಗ ಪ್ಯಾನ್ ಇಂಡಿಯಾ ಸಿನಿಮಾ ಪ್ಲಾನ್ ಮಾಡುತ್ತಿದ್ದಾರೆ. ಸ್ಟಾರ್ ನಟರ ಸಿನಮಾಗಳು ಬೇರೆ ಬೇರೆ ಭಾಷೆಯಲ್ಲಿಯೂ ತರುವ ತಯಾರಿ ಜೋರಾಗಿ ನಡೆಯುತ್ತಿದೆ.

    ಪ್ಯಾನ್ ಇಂಡಿಯಾ ಮಾಡೋರು ಎರಡು ವಿಷಯದಲ್ಲಿ ರೆಡಿ ಇರಬೇಕು: ಸುದೀಪ್ಪ್ಯಾನ್ ಇಂಡಿಯಾ ಮಾಡೋರು ಎರಡು ವಿಷಯದಲ್ಲಿ ರೆಡಿ ಇರಬೇಕು: ಸುದೀಪ್

    ಅಂದಹಾಗೆ, ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ನಟ ದುನಿಯಾ ವಿಜಯ್, ನಿರ್ದೇಶಕ ಆರ್ ಚಂದ್ರು, ದುನಿಯಾ ಸೂರಿ ಸಹ ಮಾತನಾಡಿದ್ದಾರೆ. ಇತ್ತೀಚಿಗಿನ ಬೇರೆ ಬೇರೆ ಸಂದರ್ಶನಗಳಲ್ಲಿ ಪ್ಯಾನ್ ಇಂಡಿಯಾ ಬಗ್ಗೆ ಹೇಳಿಕೆ ನೀಡಿರುವ ಅವರು ಇದು ಕನ್ನಡಕ್ಕೆ ಹೊಸತೇನಲ್ಲ.. ಇಲ್ಲಿ ಯಾವತ್ತೋ ಪ್ಯಾನ್ ಇಂಡಿಯಾ ಪ್ರಯೋಗಗಳು ನಡೆದಿದೆ ಎಂದಿದ್ದಾರೆ.

    ಶೋ ಮ್ಯಾನ್ ರವಿಚಂದ್ರನ್

    ಶೋ ಮ್ಯಾನ್ ರವಿಚಂದ್ರನ್

    ನಿರ್ದೇಶಕ ಸೂರಿ ತಮ್ಮ ಇತ್ತೀಚಿಗಿನ ಸಂದರ್ಶನದಲ್ಲಿ ಪ್ಯಾನ್ ಇಂಡಿಯಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡದಲ್ಲಿ ಎಂದೋ ಬಂದಿವೆ. ರವಿಚಂದ್ರನ್ ಅಂದೇ ಪ್ಯಾನ್ ಇಂಡಿಯಾ ಸಾಹಸ ಮಾಡಿದ್ದರು ಎಂದಿದ್ದರೆ. 'ಶಾಂತಿ ಕ್ರಾಂತಿ' ಸಿನಿಮಾ ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ನಾಲ್ಕು ಭಾಷೆಗಳಲ್ಲಿ ನಿರ್ಮಾಣ ಆಗಿತ್ತು.

    ಒಳ್ಳೆಯ ಕಥೆ, ಮೇಕಿಂಗ್ ಇದ್ದರೆ ಅದೇ ಪ್ಯಾನ್ ಇಂಡಿಯಾ

    ಒಳ್ಳೆಯ ಕಥೆ, ಮೇಕಿಂಗ್ ಇದ್ದರೆ ಅದೇ ಪ್ಯಾನ್ ಇಂಡಿಯಾ

    ನಿರ್ದೇಶಕ ಆರ್ ಚಂದ್ರು 'ಕಬ್ಜ' ಸಿನಿಮಾವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡುತ್ತಿದ್ದಾರೆ. ಏಳು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ ರಾಜ್ ಕುಮಾರ್, ವಿಷ್ಣುವರ್ಧನ್ ಎಂದೋ ಪ್ಯಾನ್ ಸಿನಿಮಾ ಮಾಡಿದ್ದರು. ಒಳ್ಳೆಯ ಕಥೆ, ಒಳ್ಳೆಯ ಮೇಕಿಂಗ್ ಇದ್ದರೆ ಎಂದಿಗೂ ಪ್ಯಾನ್ ಇಂಡಿಯಾನೇ ಎಂದಿದ್ದಾರೆ.

    'ಪ್ಯಾನ್ ಇಂಡಿಯಾ' ಪರಿಕಲ್ಪನೆಯಿಂದ ಬದಲಾಗುತ್ತದೆ ಕಲಾವಿದರ ಆಯ್ಕೆ'ಪ್ಯಾನ್ ಇಂಡಿಯಾ' ಪರಿಕಲ್ಪನೆಯಿಂದ ಬದಲಾಗುತ್ತದೆ ಕಲಾವಿದರ ಆಯ್ಕೆ

    ಉಪೇಂದ್ರ ಎಂದೋ ಮಾಡಿದ್ದರು

    ಉಪೇಂದ್ರ ಎಂದೋ ಮಾಡಿದ್ದರು

    ನಟ ದುನಿಯಾ ವಿಜಯ್ ಹುಟ್ಟುಹಬ್ಬದ ದಿನ ಉಪೇಂದ್ರ 'ಸಲಗ' ಟೀಸರ್ ಬಿಡುಗಡೆ ಮಾಡಿದರು. ಈ ವೇಳೆ ಉಪೇಂದ್ರ ಬಗ್ಗೆ ಮಾತನಾಡಿದ ದುನಿಯಾ ವಿಜಯ್ ಅವರು ಅಂಡರ್ ವರ್ಲ್ಡ್ ಸಿನಿಮಾಗಳ ಗಾಡ್ ಫಾದರ್. ಅವರು ಎಂದೋ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು ಎಂದರು. ಉಪೇಂದ್ರ ಅವರ 'ಓಂ', 'ಎ' 'ಉಪೇಂದ್ರ', 'ಸೂಪರ್' ಬೇರೆ ಬೇರೆ ಭಾಷೆಯಲ್ಲಿಯೂ ನಿರ್ಮಾಣ ಆಗಿತ್ತು.

    ಮೊದಲ ಪ್ಯಾನ್ ಇಂಡಿಯಾ ಚಿತ್ರ

    ಮೊದಲ ಪ್ಯಾನ್ ಇಂಡಿಯಾ ಚಿತ್ರ

    ಡಾ ರಾಜ್ ಕುಮಾರ್ ಹಾಗೂ ಉದಯ್ ಕುಮಾರ್ ನಟನೆಯ 'ಮಹಿಷಾಸುರ ಮರ್ಧಿನಿ' ಸಿನಿಮಾ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಚಿತ್ರ. 1959ರಲ್ಲಿ ಬಿಡುಗಡೆಯಾದ ಈ ಚಿತ್ರ 8 ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಬಿ ಎಸ್ ರಂಗ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದರು.

    ಒಂದೇ ವರ್ಷದಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸುದೀಪ್ಒಂದೇ ವರ್ಷದಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸುದೀಪ್

    English summary
    Upendra, Duniya Vijay and Suri spoke about pan India movies.
    Tuesday, January 21, 2020, 15:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X