For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರಗೆ ಕಲ್ಲು ಎಸೆದವರಾರು?

  By Harshitha
  |

  ರೀಲ್ ನಲ್ಲೂ, ರಿಯಲ್ ನಲ್ಲೂ ಉಪ್ಪಿ ಸದಾ ರಿಯಲ್. ಇದೇ ಕಾರಣಕ್ಕೆ 'ರಿಯಲ್ ಸ್ಟಾರ್' ಅಂತ ಕರೆಸಿಕೊಳ್ಳುವ ಉಪೇಂದ್ರ, ಇದ್ದಿದ್ದನ್ನ ಇದ್ದ ಹಾಗೆ ತೆರೆಮೇಲೆ ತೋರಿಸುವ ಚಾಣಾಕ್ಷ. ಇಂಥ ಉಪ್ಪಿ ಇತ್ತೀಚೆಗಷ್ಟೇ ತಮ್ಮ ಮೇಲೆ ಬಂದೆರಗಿದ ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿದ್ದಾರೆ.

  ಏನಾದ್ರೂ ಸ್ವಲ್ಪ ಹೆಚ್ಚು-ಕಮ್ಮಿ ಆಗಿದ್ರೆ, ಉಪೇಂದ್ರ ಇಷ್ಟೊತ್ತಿಗೆ ಆಸ್ಪತ್ರೆಯಲ್ಲಿ ಆಡ್ಮಿಟ್ ಆಗಿರ್ಬೇಕಾಗಿತ್ತು. ಆದ್ರೆ, ಅಷ್ಟರಲ್ಲಿ ಅದೃಷ್ಟವಶಾತ್ ಸಣ್ಣ-ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. 'ಐ ಆಮ್ ಗಾಡ್, ಗಾಡ್ ಈಸ್ ಗ್ರೇಟ್' ಅಂತಿದ್ದ ಉಪ್ಪಿಗೆ, ಅದೇ ದೇವರೇ ಕಾಪಾಡಿರ್ಬೇಕು.

  ಅಸಲಿಗೆ ಆಗಿದ್ದು ಇಷ್ಟೇ, ಉಪೇಂದ್ರ ತಮ್ಮ ನಿರ್ದೇಶನದಲ್ಲಿ ರೆಡಿಯಾಗುತ್ತಿರುವ 'ಉಪ್ಪಿ-2' ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿದ್ದರು. ನಂದಿ ಬೆಟ್ಟದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಉಪ್ಪಿ-2 ಚಿತ್ರಕ್ಕೆ ನಟನೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿರುವುದರಿಂದ ಶಾಟ್ ಗೆ ಉಪ್ಪಿ ರೆಡಿಯಾಗುತ್ತಿದ್ದರು. [ರಿಯಲ್ ಸ್ಟಾರ್ 'ಉಪ್ಪಿ 2' ಎಕ್ಸ್ ಕ್ಲೂಸೀವ್ ಚಿತ್ರಗಳು]

  ಅಷ್ಟರಲ್ಲೇ ಬೆಟ್ಟದ ಮೇಲಿಂದ ದುಪ್ಪನೆ ದೊಡ್ಡ ಕಲ್ಲೊಂದು ಉಪ್ಪಿ ಭುಜದ ಮೇಲೆ ಬಿತ್ತು. ಏನಾಯ್ತು ಅಂತ ಕಣ್ಮುಚ್ಚಿ ಬಿಡುವಷ್ಟರಲ್ಲೇ ಉಪ್ಪಿ ಬೆನ್ನಿಗೆ ಏಟಾಗಿತ್ತು. ನಿಂತಲ್ಲೇ ಕುಸಿದ ಉಪ್ಪಿಗೆ, ಸ್ಥಳದಲ್ಲೇ ಇದ್ದವರು ಶುಶ್ರೂಷೆ ಮಾಡಿದರು.

  ನಡೆಯುವುದಕ್ಕೆ ಆಗದೆ ಇರುವಷ್ಟು ನೋವುಂಟು ಆದ್ರೂ, ಶೂಟಿಂಗ್ ನಿಲ್ಲಬಾರದು ಅನ್ನುವ ಕಾರಣಕ್ಕೆ ಉಪೇಂದ್ರ, ಎಣ್ಣೆ ಹಚ್ಚಿ ಮಸಾಜ್ ಮಾಡಿಸಿಕೊಂಡರು. ತದನಂತರ ಕೆಲ ಕಾಲ ರೆಸ್ಟ್ ಮಾಡಿ ಶೂಟಿಂಗ್ ಗೆ ಮತ್ತೆ ಹಾಜರಾದರು. [ಉಪೇಂದ್ರ ಮಾನವೀಯತೆಯ ಮತ್ತೊಂದು ಮುಖ]

  ದೊಡ್ಡ ಕಲ್ಲು ಉಪ್ಪಿ ಬೆನ್ನಿಗೆ ಬೀಳುವ ಬದಲು ತಲೆಗೆ ಬಿದ್ದಿದ್ರೆ, ಗತಿ ಏನು? ಆಗಷ್ಟೇ ಕುಳಿತಲ್ಲಿಂದ ಎದ್ದ ಉಪ್ಪಿ ಹೆಜ್ಜೆ ಇಡುವುದಕ್ಕೂ ಮುನ್ನವೇ ದೊಡ್ಡ ಕಲ್ಲು ಬೆನ್ನಿಗೆ ಬಿತ್ತು. ಅದಕ್ಕೂ ಮೊದಲು ಉಪ್ಪಿಗೆ ಹಿಡಿದಿದ್ದ ಛತ್ರಿಗೆ ಹೊಡೆದು, ನಂತ್ರ ದೊಡ್ಡ ಕಲ್ಲು ಬಿನ್ನಿಗೆ ಬಿದ್ದಿದೆ. ಉಪ್ಪಿ ಬೆನ್ನಿಗೆ ಕಲ್ಲು ಬಿದ್ದ ರಭಸಕ್ಕೆ ಪಕ್ಕದಲ್ಲೇ ಇದ್ದ ಫೋಟೋಗ್ರಾಫರ್ ಕಣ್ಣಿಗೂ ಪೆಟ್ಟಾಗಿದೆ.

  ಹಾಗಾದ್ರೆ ಉಪ್ಪಿಗೆ ಆ ದೊಡ್ಡ ಕಲ್ಲೆಸೆದವರು ಯಾರು? ಈ ಪ್ರಶ್ನೆಗೆ ಚಿತ್ರತಂಡ ಕೊಟ್ಟಿರುವ ಉತ್ತರ ''ಗೊತ್ತಿಲ್ಲ''. ಅಚಾನಕ್ಕಾಗಿ ಬೆಟ್ಟದ ಮೇಲಿಂದ ಕಲ್ಲು ಬಿತ್ತೋ? ಇಲ್ಲಾ ಅದನ್ನ ಯಾರಾದರು ಎಸೆದರಾ ಅನ್ನುವ ಅನುಮಾನಗಳಿಗೆ ಉಪ್ಪಿ ಸೊಪ್ಪು ಹಾಕಿಲ್ಲ.

  ''ನಂದಿ ಬೆಟ್ಟದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿರುವುದರಿಂದ ಕೋತಿಗಳಿಗೆ ಕಲ್ಲು ಎಸೆವುದಕ್ಕೆ ಹೋಗಿ ಯಾರೋ ಹೀಗೆ ಮಾಡಿರ್ಬೇಕು'', ಅಂತ ಉಪ್ಪಿ ಸುಮ್ಮನಾಗಿದ್ದಾರೆ. ಉಪ್ಪಿ-2 ಚಿತ್ರವನ್ನು ತಲೆಕೆಡಿಸಿಕೊಂಡು ನಿರ್ಮಾಣ, ನಿರ್ದೇಶನ ಮಾಡುತ್ತಿರುವ ಉಪ್ಪಿ, ಇಂತಹ ವಿಷಯಗಳಿಗೆಲ್ಲಾ ತಲೆಕೆಡಿಸಿಕೊಳ್ಳುವ ಜಾಯಮಾನದವರಲ್ಲ ಬಿಡಿ! (ಏಜೆನ್ಸೀಸ್)

  English summary
  Real Star Upendra, who is back to direction through his Productional Venture Uppi-2, had a mishap recently on the set of his film at Nandi Hills. Luckily, Upendra escaped with minor injuries.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X