'ಕೆಜಿಎಫ್' ಸಿನಿಮಾ ಓಡಬೇಕು ಇದು ಉಪ್ಪಿ ಆಸೆ
Recommended Video

KGF Kannada Movie : ಕೆಜಿಎಫ್ ಸಿನಿಮಾದ ಬಗ್ಗೆ ಉಪೇಂದ್ರ ಹೇಳಿದ್ದು ಹೀಗೆ | FILMIBEAT KANNADA
'ಕೆಜಿಎಫ್' ಸಿನಿಮಾ ಬಗ್ಗೆ ಮಾತನಾಡದವರೆ ಇಲ್ಲ. ಈಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸಿನಿಮಾದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಇತ್ತೀಚಿಗಷ್ಟೆ 'ಬೀರ್ ಬಲ್' ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಉಪೇಂದ್ರ ಆಗಮಿಸಿದ್ದು, ಈ ವೇಳೆ 'ಕೆಜಿಎಫ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ''ಕೆಜಿಎಫ್' ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ನಾನು ಆ ಸಿನಿಮಾ ಬಗ್ಗೆ ಬಹಳ ಉತ್ಸುಕನಾಗಿದ್ದೇನೆ. ಇಂತಹ ದೊಡ್ಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಓಡಬೇಕು'' ಎಂದಿದ್ದಾರೆ ಉಪೇಂದ್ರ.
ಚಾಪ್ಟರ್ ಒನ್, ಚಾಪ್ಟರ್ ಟು ಈ ರೀತಿಯ ಟ್ರೆಂಡ್ ಕನ್ನಡದಲ್ಲಿ ಶುರುವಾಗಿದ್ದು, ಇದು ಒಳ್ಳೆಯದು ಎಂದು ಉಪೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲಕ ಯಶ್ ಗೆ ಉಪ್ಪಿ ಶುಭ ಹಾರೈಸಿದ್ದಾರೆ.

ಅಂದಹಾಗೆ, ಡಿಸೆಂಬರ್ 21ಕ್ಕೆ 'ಕೆಜಿಎಫ್' ಸಿನಿಮಾ ಭಾರತದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಮೊದಲ ದಿನದ ಟಿಕೆಟ್ ಬಹುತೇಕ ಚಿತ್ರಮಂದಿರಗಳಲ್ಲಿ ಸೋಲ್ಡ್ ಔಟ್ ಆಗಿದೆ. ಸಿನಿಮಾ ಇಡೀ ಭಾರತ ಚಿತ್ರರಂಗದಲ್ಲಿ ದೊಡ್ಡ ಸದ್ದು ಆಡುತ್ತಿದೆ.
More from Filmibeat
English summary
Real Star Upendra excited to watch Rocking star Yash starrer 'KGF' kannada movie.


Click it and Unblock the Notifications











