»   » ಉಪೇಂದ್ರ ಕಲ್ಪನ ಚಿತ್ರದ ಫೋಟೋ ವಿಶೇಷಗಳು

ಉಪೇಂದ್ರ ಕಲ್ಪನ ಚಿತ್ರದ ಫೋಟೋ ವಿಶೇಷಗಳು

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹಾರರ್ ಹಾಗೂ ಕಾಮಿಡಿ ಪ್ರಧಾನ ಚಿತ್ರ 'ಕಲ್ಪನ'. ಈ ಚಿತ್ರ ಇದೇ ಶುಕ್ರವಾರ (ಸೆ.28) 100ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಉಪೇಂದ್ರ ಈ ಬಾರಿ ವಿಭಿನ್ನ ಗೆಟಪ್ ಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ಕಲ್ಪನ' ಚಿತ್ರ ರೀಮೇಕ್ ಆಗಿರುವ ಕಾರಣ ಕಥೆ, ಚಿತ್ರಕಥೆ ಬಗ್ಗೆ ಅಂತಹ ಕುತೂಹಲವೇನು ಉಳಿದಿಲ್ಲ.

ಕುತೂಹಲ ಇರುವುದು ಏನಿದ್ದರೂ ಉಪೇಂದ್ರ ಅವರ ಪಾತ್ರದ ಬಗೆಗೆ. ಕಲ್ಪನ ಪಾತ್ರವನ್ನು ಅವರು ಎಷ್ಟರ ಮಟ್ಟಿಗೆ ಆವಾಹಿಸಿಕೊಂಡಿದ್ದಾರೆ ಎಂಬ ಸಣ್ಣ ಕುತೂಹಲವೂ ಇದೆ. ಜೊತೆಗೆ ಶರತ್ ಕುಮಾರ್ ಅವರಿಗಿಂತಲೂ ಉಪೇಂದ್ರ ಹೇಗೆ ಭಿನ್ನವಾಗಿ ಅಭಿನಯಿಸಿರಬಹುದು ಎಂಬ ಪ್ರಶ್ನೆಯೂ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಕಲ್ಪನ ಚಿತ್ರ ಪ್ರೇಕ್ಷಕರಿಗೆ ಹಬ್ಬದೂಟ

"ಕಲ್ಪನ ಚಿತ್ರ ಸಂಪೂರ್ಣ ಮನರಂಜನಾತ್ಮಕವಾಗಿರುತ್ತದೆ. ಪ್ರೇಕ್ಷಕರಿಗೆ ಹಬ್ಬದೂಟ" ಎಂದಿದ್ದಾರೆ ಉಪೇಂದ್ರ. ಕನ್ನಡ, ತಮಿಳು, ತೆಲುಗು ಹೀಗೆ 125ಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ಅನುಭವ ರಾಮ್ ನಾರಾಯಣ್ ಅವರದು. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ವಿ. ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಆಗಿ ಮೂಡಿಬಂದಿದ್ದು, ಈಗಾಗಲೆ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿವೆ.

ಕನ್ನಡಕ್ಕೆ ಬೆಳಗಾವಿ ಲಕ್ಷ್ಮಿ ರೈ ರೀ ಎಂಟ್ರಿ

ಅಪ್ಪಟ ಕನ್ನಡತಿ, ಬೆಳಗಾವಿ ಬೆಡಗಿ ಲಕ್ಷ್ಮೀ ರೈ ಮತ್ತೆ ಕನ್ನಡದ ಚಿತ್ರದ ಮೂಲಕ ತೆರೆಯ ಮೇಲೆ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ. 'ಕಲ್ಪನಾ' ಚಿತ್ರದಲ್ಲಿ ಲಕ್ಷ್ಮೀ ರೈ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲಿಗೆ, ಈ ಮೊದಲು ಕನ್ನಡದಲ್ಲಿ 'ಸ್ನೇಹಾನಾ ಪ್ರೀತಿನಾ' ಹಾಗೂ 'ಮಿಂಚಿನ ಓಟ' ಚಿತ್ರದಲ್ಲಿ ನಟಿಸಿ ಮಾಯವಾಗಿದ್ದ ಕನ್ನಡತಿ ಮರಳಿ ಗೂಡಿಗೆ ಬಂದಂತಾಗಿದೆ.

ಮಂಗಳಮುಖಿ ಪಾತ್ರದಲ್ಲಿ ಉಪೇಂದ್ರ

ಇಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿಲ್ಲ. ಎರಡು ಶೇಡ್ ವುಳ್ಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಮಂಗಳಮುಖಿಯಾಗಿ!

ನಿರ್ಣಾಯಕ ಪಾತ್ರದಲ್ಲಿ ಶ್ರುತಿ

ಮೂಲ ಚಿತ್ರದಲ್ಲಿ ದೇವದರ್ಶಿನಿ ಹಾಗೂ ಕೋವೈ ಸರಳ ಪೋಷಿಸಿದ್ದ ಪಾತ್ರಗಳನ್ನು ಕಲ್ಪನ ಚಿತ್ರದಲ್ಲಿ ಉಮಾಶ್ರೀ ಹಾಗೂ ಶ್ರುತಿ ಪೋಷಿಸಿದ್ದಾರೆ. ಚಿತ್ರದಲ್ಲಿ ಶ್ರುತಿ ಅವರದು ನಿರ್ಣಾಯಕ ಪಾತ್ರ.

ಉಪೇಂದ್ರ, ಲಕ್ಷ್ಮಿ ರೈ ಕೆಮಿಸ್ಟ್ರಿ ಚೆನ್ನಾಗಿದೆ

ಈ ಫೋಟೋ ನೋಡಿದರೇನೇ ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿದೆ ಎನ್ನಿಸುತ್ತದೆ. ಇವರಿಬ್ಬರೂ ಒಟ್ಟಿಗೆ ಅಭಿನಯಿಸಿರುವ ಮೊದಲ ಚಿತ್ರ ಇದಾಗಿದೆ. ಲಾರೆನ್ಸ್ ಜೊತೆ ಲೀಲಾಜಾಲವಾಗಿ ಅಭಿನಯಿಸಿದ್ದ ಲಕ್ಷ್ಮಿ ರೈ, ಉಪ್ಪಿ ಜೊತೆ ಕೂಡ ಅಷ್ಟೇ ಸರಾಗವಾಗಿ ಅಭಿನಯಿಸಿದ್ದಾರೆ.


ತಲೆಗೆ ಎಣ್ಣೆಹಚ್ಚಿದ, ದಪ್ಪಕನ್ನಡಕ ಹಾಕಿಕೊಂಡ ಉಪೇಂದ್ರ ಅವರ ಪೋಸ್ಟರ್ ಗಳು ಮೂಲ ಚಿತ್ರಕ್ಕಿಂತಲೂ ಭಿನ್ನವಾಗಿ ಇವೆ. ಆದರೆ ಚಿತ್ರವೂ ಅದೇ ರೀತಿ ಇದೆಯಾ? ಉತ್ತರ ಸೆಪ್ಟೆಂಬರ್ 28ರಂದು ಸಿಗಲಿದೆ.

ಈ ಚಿತ್ರದ ಪಾತ್ರವರ್ಗದಲ್ಲಿ ಲಕ್ಷ್ಮಿ ರೈ, ಸಾಯಿಕುಮಾರ್, ಶ್ರುತಿ ಹಾಗೂ ಉಮಾಶ್ರೀ ಅಭಿನಯಿಸಿದ್ದಾರೆ. ಸುದೀರ್ಘ ಸಮಯದ ಬಳಿಕ ಈ ಚಿತ್ರದ ಮೂಲಕ ಸಾಯಿಕುಮಾರ್ ಮತ್ತೊಮ್ಮೆ ಕನ್ನಡಕ್ಕೆ ಆಗಮಿಸಿದ್ದಾರೆ. ಚಿತ್ರದಲ್ಲಿ ಅವರದು ಹೆಣ್ಣು ಅಲ್ಲದ ಗಂಡು ಅಲ್ಲದ ಪಾತ್ರ.

ತೆಲುಗು, ತಮಿಳಿನಲ್ಲಿ ಸೂಪರ್ ಹಿಟ್ ದಾಖಿಸಿದ 'ಕಾಂಚನಾ' ಚಿತ್ರದ ರೀಮೇಕ್ ಇದು. ಮೂಲದ ಚಿತ್ರದಲ್ಲಿ ಸಾಯಿಕುಮಾರ್ ಪಾತ್ರವನ್ನು ಶರತ್ ಕುಮಾರ್ ಪೋಷಿಸಿದ್ದರು. ಕಲ್ಪನ ಚಿತ್ರದಲ್ಲಿನ ಉಪೇಂದ್ರ ಅವರ ವಿಭಿನ್ನ ಗೆಟಪ್ ಗಳು ನಿಮಗಾಗಿ. (ಒನ್ಇಂಡಿಯಾ ಕನ್ನಡ ಸಿನೆಮಾ)

English summary
Special photo feature of Kannada comedy, horror film Kalpana that stars Upendra and Lakshmi Rai in the lead roles. The film is slated for september 28,2012 release. The film is the Kannada version of the 2011 Tamil-Telugu blockbuster Kanchana.
Please Wait while comments are loading...