RGV: ಮುತ್ತಪ್ಪ ರೈ ಜೀವನ ಕಥೆಗೆ ಉಪೇಂದ್ರ ಹೀರೋ, ಮೊದಲ ಪ್ರತಿಕ್ರಿಯೆ ಇಲ್ಲಿದೆ!

ನಟ ಉಪೇಂದ್ರ ತಮ್ಮ ನಿರ್ದೇಶನದ ಮುಂದಿನ ಚಿತ್ರದ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದ್ದಾರೆ. ಗ್ಯಾಪ್ ನಂತರ ಮತ್ತೆ ಉಪೇಂದ್ರ ನಿರ್ದೇಶನಕ್ಕೆ ಇಳಿದಿರುವು ಕುತೂಹಲ ಮೂಡಿಸಿದೆ. ಇದರೊಂದಿಗೆ ಉಪೇಂದ್ರ ಅವರ ಮತ್ತೊಂದು ಸಿನಿಮಾ ಪ್ರಕಟ ಆಗಿದೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊತೆಗೆ ನಟ ಉಪೇಂದ್ರ ಕೈ ಜೋಡಿಸಿದ್ದಾರೆ. ಇತ್ತೀಚೆಗಷ್ಟೇ ಈ‌ ವಿಚಾರವನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ವತಃ ತಾವೇ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ.

ಈ ಚಿತ್ರದ ಬಗ್ಗೆ ನಟ ಉಪೇಂದ್ರ ಫಿಲ್ಮಿ ಬೀಟ್ ಜೊತೆಗೆ ಮಾತನಾಡಿದ್ದಾರೆ. ಸಿನಿಮಾ ಓಕೆ ಆಗಿದ್ದು, ಶೂಟಿಂಗ್ ಆರಂಭಿಸಬೇಕು ಎಂದಿದ್ದಾರೆ. ಈ ಬಗ್ಗೆ ನಟ ಉಪೇಂದ್ರ ಏನೆಲ್ಲಾ ಹೇಳಿದ್ರು ಎನ್ನುವ ಬಗ್ಗೆ ಮುಂದೆ ಓದಿ.

Upendra First Reaction On Upcoming Movie With Ram Gopal Varma

ನಟ ಉಪೇಂದ್ರ ಮತ್ತು ರಾಮ್ ಗೋಪಾಲ್ ವರ್ಮ ಸಿನಿಮಾ ಮಾಡುತ್ತಿರುವುದು ನಿಜ‌. ಈಗಾಗಲೇ ಚಿತ್ರದ‌ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಉಪ್ಪಿ ಸಿನಿಮಾ ಒಪ್ಪಿದ್ದು, ಪಾತ್ರಕ್ಕಾಗಿ ಫಸ್ಟ್ ಲುಕ್ ಟೆಸ್ಟ್ ಕೂಡ ಮಾಡಿಸಲಾಗಿದೆ. " ರಾಮ್ ಗೋಪಾಲ್ ವರ್ಮಾ ಜೊತೆಗೆ ಸಿನಿಮಾ ಮಾಡುತ್ತಿರುವುದು ನಿಜ. ಮಾತು ಕಥೆ ಮುಗಿದಿದೆ. ಸಣ್ಣದೊಂದು ಲುಕ್ ಟೆಸ್ಟ್ ಮಾಡಿದ್ದೇವೆ. ಅದನ್ನೇ ಟೀಸರ್ ರೂಪದಲ್ಲಿ ರಿಲೀಸ್ ಮಾಡಿದ್ದಾರೆ‌." ಎಂದು ನಟ ಉಪೇಂದ್ರ ಹೇಳಿಕೊಂಡಿದ್ದಾರೆ.

ಮುತ್ತಪ್ಪ ರೈ ಜೀವನವನ್ನು ಸಿನಿಮಾ ಮಾಡುವುದಾಗಿ ಕೆಲ ವರ್ಷಗಳ ಹಿಂದೆಯೇ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದರು. ಮುತ್ತಪ್ಪ ರೈ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ನಟಿಸುವುದು ನಿಶ್ಚಯವಾಗಿತ್ತು. ಅದ್ಧೂರಿ ಕಾರ್ಯಕ್ರಮ ಮಾಡಿ ಸಿನಿಮಾ ಲಾಂಚ್ ಕೂಡ ಮಾಡಲಾಯಿತು. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ. ಈಗ ಮುತ್ತಪ್ಪ ರೈ ಪಾತ್ರ ಉಪೇಂದ್ರ ಪಾಲಾಗಿದೆ. ಉಪ್ಪಿ ಕೂಡ ಇದಕ್ಕೆ ಓಕೆ ಎಂದಿದ್ದಾರೆ.

ಉಪೇಂದ್ರ-ವರ್ಮಾ ಸಿನಿಮಾ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡು ಬಿಡುಗಡೆ ಆಗಲಿದೆ. ಭೂಗತ ಲೋಕದ ಕತೆಗಳನ್ನು ತೆರೆ ಮೇಲೆ ತರುವುದರಲ್ಲಿ ರಾಮ್ ಗೋಪಾಲ್ ವರ್ಮಾ ಸೂಪರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಹಲವು ಕಲ್ಟ್ ಕ್ಲಾಸಿಕ್ ಅಂಡರ್‌ವರ್ಲ್ಡ್‌ ಸಿನಿಮಾಗಳನ್ನು ಅವರು ನೀಡಿದ್ದಾರೆ. ಈ ಸಿನಿಮಾ ಸಹ ಅದೇ ಸಾಲಿಗೆ ಸೇರಲಿದೆ. ಇನ್ನು ಈ ಪಾತ್ರದಲ್ಲಿ ಉಪ್ಪಿ ಹೇಗೆ ಅಬ್ಬರಿಸಲಿದ್ದಾರೆ ಎನ್ನುವುದನ್ನು ನೋಡಬೆಕಿದೆ.

Recommended Video

RRR ಮುಗಿತು ಈಗ ಉಪ್ಪಿ R ಸ್ಟಾರ್ಟ್ ಆಯ್ತು

More from Filmibeat

English summary
Upendra First Reaction On Upcoming Movie With Ram Gopal Varma Which Is Bacesd On Muttappa Rai Life Story,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X