»   » ದುಡ್ಡು ಪೀಕುತ್ತಿದ್ದವನನ್ನ ಉಪೇಂದ್ರ ಕ್ಷಮಿಸಿದ್ದಾರೆ: ನೀವೇನ್ಮಾಡ್ತೀರಾ.?

ದುಡ್ಡು ಪೀಕುತ್ತಿದ್ದವನನ್ನ ಉಪೇಂದ್ರ ಕ್ಷಮಿಸಿದ್ದಾರೆ: ನೀವೇನ್ಮಾಡ್ತೀರಾ.?

Posted By:
Subscribe to Filmibeat Kannada

'ಪ್ರಜಾಕೀಯ'ದ ಮೂಲಕ ಭ್ರಷ್ಟ ರಹಿತ ಸಮಾಜವನ್ನು ನಿರ್ಮಾಣ ಮಾಡಲು ಉಪೇಂದ್ರ ಹೊರಟಿರುವಾಗ, 'ಪ್ರಜಾಕೀಯ'ದ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಓರ್ವ ವ್ಯಕ್ತಿ ಹಣ ಪೀಕುತ್ತಿದ್ದ. ಈ ಬಗ್ಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ಕೂಡ ವರದಿ ಪ್ರಕಟ ಮಾಡಿತ್ತು.

Real Star Upendra Express His Opinion About GST | Filmibeat Kannada

'ಪ್ರಜಾಕೀಯ' ಹೆಸರಲ್ಲಿ ದುಡ್ಡು ಪೀಕುತ್ತಿದ್ದಾನೆ ಓರ್ವ ವ್ಯಕ್ತಿ: ಮೋಸ ಹೋಗ್ಬೇಡಿ, ಹುಷಾರ್!

ಉಪೇಂದ್ರ ರವರ ಫ್ಯಾನ್ಸ್ ಅಸೋಸಿಯೇಷನ್ ನಲ್ಲಿ ಇದ್ದಾಗಲೂ ಎಲ್ಲರಿಂದಲೂ ದುಡ್ಡು ಪಡೆಯುತ್ತಿದ್ದ ವ್ಯಕ್ತಿ (ಹೆಸರು ಗೊತ್ತಿಲ್ಲ) 'ಪ್ರಜಾಕೀಯ'ದ ಹೆಸರಿನಲ್ಲೂ ಹಣ ಸಂಪಾದನೆ ಮಾಡಿಕೊಳ್ಳಲು ಯತ್ನಿಸಿದ. ಈ ಬಗ್ಗೆ ಉಪ್ಪಿ ಕಿವಿಗೆ ಬಿದ್ಮೇಲೆ, ಆ ವ್ಯಕ್ತಿಯ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡರು.

Upendra forgives the person who was misguiding and collecting money in the name of Prajakeeya

ಇದೀಗ 'ಅದೇ ವ್ಯಕ್ತಿಯನ್ನ ಕ್ಷಮಿಸೋಣ' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ''ಕ್ಷಮೆ ಅನ್ನೋದು ದೊಡ್ಡ ಗುಣ. ಈ ಹುಡುಗನ ತಪ್ಪನ್ನ ನಾವೆಲ್ಲರೂ ಕ್ಷಮಿಸೋಣ. ಮತ್ತೆ ತಪ್ಪು ಮಾಡ್ಬೇಡ ಎಂದು ಎಚ್ಚರಿಸೋಣ. ಮೋಸ ಹೋಗೋರು ಸ್ವಲ್ಪ ಜಾಣರಾಗಿರಿ ಅಂತ ತಿಳಿಸೋಣ. ಏನಂತೀರಾ.?'' ಎಂದು ಉಪೇಂದ್ರ ಟ್ವೀಟಿಸಿದ್ದಾರೆ.

ಉಪೇಂದ್ರ ರವರ ಈ ನಡೆಯನ್ನ ಕೆಲವರು ಸ್ವಾಗತಿಸಿದರೆ, ''ಆತನಿಗೆ ಶಿಕ್ಷೆ ಕೊಡಲೇಬೇಕು'' ಎಂದು ಹಲವರು ಆಗ್ರಹಿಸಿದ್ದಾರೆ.

ತಿಳಿಯದೇ ಮಾಡಿದ ತಪ್ಪಿಗೆ ಕ್ಷಮೆ ಇರಲಿ, ಆದರೆ ತಿಳಿದು ಮಾಡುವ ತಪ್ಪಿಗೆ ಶಿಕ್ಷೆ ಇರಲಿ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಉಪೇಂದ್ರ ರವರ ಈ ನಡೆಗೆ ನೀವೇನಂತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
Upendra forgives the person who was misguiding and collecting money in the name of Prajakeeya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada