For Quick Alerts
  ALLOW NOTIFICATIONS  
  For Daily Alerts

  'ರೈತರ ಭೂಮಿ ಕಬಳಿಸಿದ್ದೀರಿ' ಎಂದವರಿಗೆ ಉತ್ತರ ಕೊಟ್ಟ ಉಪೇಂದ್ರ

  |

  ರಾಜಕೀಯಕ್ಕೆ ಪರ್ಯಾಯವಾಗಿ 'ಪ್ರಕಜಾಕೀಯ'ವನ್ನು ಹುಟ್ಟುಹಾಕುವ ಪ್ರಯತ್ನದಲ್ಲಿ ನಟ ಉಪೇಂದ್ರ ನಿರತವಾಗಿದ್ದಾರೆ. ತಮ್ಮ ಕನಸಿನ ಪ್ರಜಾಕೀಯದ ರೂಪು ರೇಷೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಉಪೇಂದ್ರ.

  ಸಕ್ರಿಯ ರಾಜಕೀಯಕ್ಕೆ ಬಂದ ಯಾರೂ ಸಹ ಆರೋಪಗಳು, ನಿಂದನೆಗಳಿಂದ ಹೊರತಲ್ಲ. ಅಂತೆಯೇ ಉಪೇಂದ್ರ ಸಹ ಹಲವು ಆರೋಪಗಳನ್ನು, ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸಾಮಾನ್ಯ ರಾಜಕಾರಣಿಗಳು ತಮ್ಮ ಮೇಲೆ ಹೇರಲಾಗುತ್ತಿರುವ ಆರೋಪಗಳಿಗೆ, ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ಆದರೆ ಉಪೇಂದ್ರ, ತಮಗೆ ಕೇಳಲಾದ ಕಠಿಣ ಪ್ರಶ್ನೆಗಳನ್ನು ಎದುರಿಸಿ ಉತ್ತರ ನೀಡಿದ್ದಾರೆ. ತಾವು ಹಾಗೂ ತಮ್ಮ ಪಕ್ಷ ಹೇಗೆ, ಏಕೆ ಇತರ ರಾಜಕಾರಣಿಗಿಂತಲೂ ಭಿನ್ನ ಎಂಬುದಕ್ಕೆ ಉದಾಹರಣೆಯೊಂದನ್ನು ನೀಡಿದ್ದಾರೆ.

  ವ್ಯಕ್ತಿಯೊಬ್ಬ ಉಪೇಂದ್ರ ಅವರ 'ರುಪ್ಪೀಸ್' ರೆಸಾರ್ಟ್, ಉಪೇಂದ್ರದ ರಾಜಕೀಯ ವೈಖರಿ, ಪ್ರಜಾಕೀಯದ ಕಾರ್ಯಗಳನ್ನು ಕುರಿತು ಟೀಕೆಗಳನ್ನು ಮಾಡಿ ವಿಡಿಯೋ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಕೇಳಾಗಿದ್ದ ಪ್ರಶ್ನೆಗಳಿಗೆ ಉಪೇಂದ್ರ ಉತ್ತರ ನೀಡಿದ್ದಾರೆ.

  'ರುಪ್ಪೀಸ್' ರೆಸಾರ್ಟ್‌ ಬಗ್ಗೆ ಸ್ಪಷ್ಟನೆ

  'ರುಪ್ಪೀಸ್' ರೆಸಾರ್ಟ್‌ ಬಗ್ಗೆ ಸ್ಪಷ್ಟನೆ

  'ರುಪ್ಪೀಸ್' ರೆಸಾರ್ಟ್‌ ಮಾಡಲು ಕೃಷಿ ಭೂಮಿ ಕಬಳಸಿದ್ದಾರೆ ಉಪೇಂದ್ರ ಎಂದು ವಿಡಿಯೋ ಮಾಡಿರುವ ವ್ಯಕ್ತಿ ಆರೋಪಿಸಿದ್ದಾನೆ. ಇದಕ್ಕೆ ಉತ್ತರಿಸಿರುವ ಉಪೇಂದ್ರ, ನಾನು ಕೊಂಡುಕೊಳ್ಳುವ ಮುಂಚೆ 'ವಿಲೇಜ್' ಹೆಸರಿನ ರೆಸಾರ್ಟ್ ಅಲ್ಲಿ ಇತ್ತು. ಆ ರೆಸಾರ್ಟ್ ಅನ್ನು ಸರ್ಕಾರದಿಂದ ಹರಾಜಿನಲ್ಲಿ ನಾನು ತೆಗೆದುಕೊಂಡೆ. ರೆಸಾರ್ಟ್ ಹಿಂದೆ ಕೃಷಿ ಭೂಮಿ ಇದೆ ಅದನ್ನು ಶಿವಣ್ಣನವರಿಂದ ಖರೀದಿಸಿದೆ ಅಲ್ಲಿ ನಾನು ಕೃಷಿ ಮಾಡುತ್ತಿದ್ದೇನೆ' ಎಂದಿದ್ದಾರೆ ಉಪೇಂದ್ರ.

  ನಾನು ಚುನಾವಣೆಗೆ ಸಹ ನಿಲ್ಲುವುದಿಲ್ಲ: ಉಪೇಂದ್ರ

  ನಾನು ಚುನಾವಣೆಗೆ ಸಹ ನಿಲ್ಲುವುದಿಲ್ಲ: ಉಪೇಂದ್ರ

  ಪ್ರಚಲಿತ ಆಡಳಿತದಲ್ಲಿರುವ ಸರ್ಕಾರದ ಕುಕಾರ್ಯಗಳನ್ನು ಉಪೇಂದ್ರ ಖಂಡಿಸುವುದಿಲ್ಲ, ಉಪೇಂದ್ರ ಬಿಜೆಪಿಯ ಬಿ ಟೀಮ್ ಎಂಬುದು ಎರಡನೇ ಆರೋಪ. ಇದಕ್ಕೆ ಉತ್ತರಿಸಿರುವ ಉಪೇಂದ್ರ, 'ನಾನು ಯಾವ ಪಕ್ಷವನ್ನೂ ಖಂಡಿಸಿಲ್ಲ. ಇಂದೂ ಅಷ್ಟೆ, ಈ ಹಿಂದೆ ಬೇರೆ ಪಕ್ಷ ಇದ್ದಾಗಲೂ ಅಷ್ಟೆ. ಯಾಕೆಂದರೆ ಆ ರಾಜಕೀಯ ನಾಯಕರು ಹೀಗಾಗಲೂ ಜನರೇ ಕಾರಣ ಎಂಬುದು ನನಗೆ ಗೊತ್ತು. ಮೊದಲು ನಾಯಕ ಪದ್ಧತಿ ಹೋಗಬೇಕು ಎಂಬುದು ನನಗೆ ಗೊತ್ತು. ಹಾಗಾಗಿ ನಾನು ಯಾರನ್ನೂ ಖಂಡಿಸಲ್ಲ, ಹೋರಾಟ ಮಾಡಲ್ಲ. ಬದಲಿಗೆ ಜನರಿಗೆ ಜಾಗೃತಿ ಮೂಡಿಸುತ್ತೇನೆ. ನನ್ನಂತೆ ಯೋಚಿಸುವ ಜನರಿಗಾಗಿ ಪಕ್ಷ ಕಟ್ಟಿದ್ದೇನೆ. ಆ ಪಕ್ಷ ಸಹ ನನ್ನದಲ್ಲ ಅದು ಜನರ ಪಕ್ಷ. ನಾನು ಸಹ ನಾಯಕನಲ್ಲ. ನಾನು ಶಾಸಕ ಆಗುವುದಿಲ್ಲ. ಸಿಎಂ ಆಗುವುದಿಲ್ಲ. ಚುನಾವಣೆಗೆ ಸಹ ನಿಲ್ಲುವುದಿಲ್ಲ' ಎಂದಿದ್ದಾರೆ ಉಪೇಂದ್ರ.

  ಸುಳ್ಳು ಭರವಸೆಯ ಪ್ರಣಾಳಿಕೆ ನೀಡುವುದಿಲ್ಲ ನಾವು: ಉಪ್ಪಿ

  ಸುಳ್ಳು ಭರವಸೆಯ ಪ್ರಣಾಳಿಕೆ ನೀಡುವುದಿಲ್ಲ ನಾವು: ಉಪ್ಪಿ

  ನಿಮ್ಮ ಪಕ್ಷಕ್ಕೆ ಪ್ರಣಾಳಿಕೆಯೇ ಇಲ್ಲ. ಹಾಗಿದ್ದ ಮೇಲೆ ಜನರಿಗೆ ಏನು ಭರವಸೆ ಕೊಡುತ್ತೀರಿ? ಚುನಾವಣೆ ಹೇಗೆ ಎದುರಿಸುತ್ತೀರಿ? ಎಂಬುದು ಮೂರನೇ ಪ್ರಶ್ನೆ. ಇದಕ್ಕೆ ಉತ್ತರಿಸಿರುವ ಉಪೇಂದ್ರ, ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ಈಡೇರಿಸದಿದ್ದರೆ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಕಾನೂನು ಬರಲಿ ಆವಾಗ ನಾವು ಪ್ರಣಾಳಿಕೆ ಕೊಡುತ್ತೇವೆ. ಸುಳ್ಳು ಭರವಸೆಗಳಿಂದ ತುಂಬಿದ ಪ್ರಣಾಳಿಕೆ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ಜನರ ಅವಶ್ಯಕತೆಯೇ ನಮ್ಮ ಪ್ರಣಾಳಿಕೆ. ಜನರಿಗೆ ಏನು ಬೇಕೊ ಅದನ್ನು ಅವರಿಂದಲೇ ಕೇಳಿ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ' ಎಂದಿದ್ದಾರೆ ಉಪೇಂದ್ರ.

  ಮಕ್ಕಳ ಜವಾಬ್ದಾರಿ ಏನು ಅನ್ನೋದನ್ನ ತೋರಿಸಿಕೊಟ್ರು Duniya Vijay | Filmibeat Kannada
  ಜಾತಿ ಬಗ್ಗೆ ಉಪೇಂದ್ರ ಮಾತು

  ಜಾತಿ ಬಗ್ಗೆ ಉಪೇಂದ್ರ ಮಾತು

  'ನೀವು ಬ್ರಾಹ್ಮಣ್ಯದ ಮುಖ ಅಷ್ಟೆ ಅದನ್ನು ನಮ್ಮ ಮೇಲೆ ಹೇರಲು ಬರಬೇಡಿ' ಎಂದು ವಿಡಿಯೋದಲ್ಲಿರುವ ವ್ಯಕ್ತಿ ಟೀಕಿಸಿದ್ದಾರೆ, ಇದಕ್ಕೆ ಉತ್ತರಿಸಿರುವ ಉಪೇಂದ್ರ, 'ಜಾತಿ ಬಗ್ಗೆ ಮಾತನಾಡುವುದೇ ಜಾತಿಯನ್ನು ಬೆಳಸಿದಂತೆ ಹಾಗಾಗಿ ನಾನು ಅದರ ಬಗ್ಗೆ ಮಾತನಾಡುವುದಿಲ್ಲ' ಎಂದಿದ್ದಾರೆ. ಜಾತಿ ವಿಷಯವನ್ನು ಮುಂದು ಮಾಡಿ ಹೇಗೆ ರಾಜಕೀಯ ನಾಯಕರು ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬುದಕ್ಕೆ ಉಪೇಂದ್ರ ಅವರು ಕತೆಯೊಂದನ್ನು ಉದಾಹರಣೆಯಾಗಿ ನೀಡಿದ್ದ ಹಳೆಯ ವಿಡಿಯೋ ತುಣುಕೊಂದನ್ನು ಜಾತಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರದ ರೂಪದಲ್ಲಿ ನೀಡಲಾಗಿದೆ.

  English summary
  Actor Upendra gave answers to who criticize him and his Prajakeeya party. He said i won't contest election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X