twitter
    For Quick Alerts
    ALLOW NOTIFICATIONS  
    For Daily Alerts

    ''ಬರಿ ರೀಮೇಕ್ ಮಾಡ್ತೀರಾ ಯಾಕೆ'' ಎಂದಿದ್ದಕ್ಕೆ ಉಪೇಂದ್ರ ಹೇಳಿದ್ದೇನು ಗೊತ್ತಾ.?

    |

    Recommended Video

    ರಿಮೇಕ್ ಹಾಗೂ ಡಬ್ಬಿಂಗ್ ಚಿತ್ರಗಳ ಬಗ್ಗೆ ಮೌನ ಮುರಿದ ಉಪ್ಪಿ..! | FILMIBEAT KANNADA

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕೆಲವು ಉಪೇಂದ್ರ ಭಕ್ತರ ನಡುವೆ ಇತ್ತೀಚಿಗೆ ಕೆಲವು ವಿಷ್ಯಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿವೆ. 'ಪ್ರಜಾಕೀಯ ಮಾಡೋಕೆ ಹೋಗಿ, ಅಭಿಮಾನಿಗಳನ್ನ ಮರೆತುಬಿಟ್ಟರು, ಡೈರೆಕ್ಷನ್ ಮಾಡಿ, ಬರಿ ರೀಮೇಕ್ ಸಿನಿಮಾಗಳನ್ನೇ ಮಾಡ್ತೀರಾ' ಎಂದು ಕಿಡಿಕಾರಿದ್ದರು.

    ಇದು ಸಹಜವಾಗಿ ಉಪೇಂದ್ರ ಅವರಿಗೆ ಬೇಸರ ತರಿಸಿದೆ. ಹೀಗಾಗಿ, ಆರಂಭದಲ್ಲಿ ಟ್ವಿಟ್ಟರ್ ಮೂಲಕವೇ ಇದಕ್ಕೆ ಉತ್ತರ ನೀಡಲು ಪ್ರಯತ್ನ ಪಟ್ಟರು. ಬಟ್, ಅದು ಅಭಿಮಾನಿಗಳು ಸಮಾಧಾನವಾಗಿಲ್ಲ..

    'ಕೆಜಿಎಫ್' ಟ್ರೈಲರ್ ನೋಡಿ ಉಪೇಂದ್ರ ಕಾಲೆಳೆದ ಅಭಿಮಾನಿ 'ಕೆಜಿಎಫ್' ಟ್ರೈಲರ್ ನೋಡಿ ಉಪೇಂದ್ರ ಕಾಲೆಳೆದ ಅಭಿಮಾನಿ

    ಹೀಗಾಗಿ, ವಿಡಿಯೋ ಮೂಲಕ ತಮ್ಮ ಪ್ರಶ್ನೆಗಳಿಗೆ, ತಮ್ಮ ಅನುಮಾನಗಳಿಗೆ ಉತ್ತರಿಸಿದ್ದಾರೆ. ಆದ್ರೆ, ಈ ಉತ್ತರಗಳ ಮೂಲಕವೇ ಮತ್ತಷ್ಟು ಪ್ರಶ್ನೆಗಳನ್ನ ಕೇಳಿರುವುದು ನಿಜಕ್ಕೂ ಈ ಚರ್ಚೆಯನ್ನ ಮತ್ತೆ ಮುಂದುವರಿಸುವಂತೆ ಮಾಡಿದೆ. ಅಷ್ಟಕ್ಕೂ, ರೀಮೇಕ್ ಬಗ್ಗೆ ಕೇಳಿದ್ದಕ್ಕೆ ಉಪ್ಪಿ ಏನಂದ್ರು.? ಅದಕ್ಕೆ ಏನು ಉತ್ತರ ನೀಡಿದ್ದಾರೆ.? ಮುಂದೆ ಓದಿ.....

    ಡಬ್ಬಿಂಗ್ ಓಕೆ, ರೀಮೇಕೆ ಯಾಕೆ ಬೇಡ.?

    ಡಬ್ಬಿಂಗ್ ಓಕೆ, ರೀಮೇಕೆ ಯಾಕೆ ಬೇಡ.?

    ರೀಮೇಕ್ ಬಗ್ಗೆ ಉಪೇಂದ್ರ ಭಕ್ತರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ಅವರನ್ನ ಮತ್ತೆ ಪ್ರಶ್ನಿಸಿದ್ದಾರೆ. ''ಡಬ್ಬಿಂಗ್ ಬೇಕು ಅಂತಾರೆ, ರೀಮೇಕ್ ಬೇಡ ಅಂತಾರೆ. ಬೇರೆ ಭಾಷೆಯ ಚಿತ್ರಗಳು ಡಬ್ ಆಗಿ ಬರಬಹುದು. ಆದ್ರೆ, ರೀಮೇಕ್ ಆಗಿ ಬರಬಾರದು ಎನ್ನುವುದು ಎಷ್ಟು ಸರಿ.?'' ಎಂದು ಪ್ರಶ್ನಿಸಿದ್ದಾರೆ.

    ಕನಸಿನ 'ಪ್ರಜಾಕೀಯ'ವನ್ನೇ ಬಿಡಲು ಸಿದ್ಧವಾದ ಉಪೇಂದ್ರ.? ಕಾರಣ ಯಾರು.?ಕನಸಿನ 'ಪ್ರಜಾಕೀಯ'ವನ್ನೇ ಬಿಡಲು ಸಿದ್ಧವಾದ ಉಪೇಂದ್ರ.? ಕಾರಣ ಯಾರು.?

    ರೀಮೇಕ್ ಮಾಡೋದು ಸರಿ ಅಂದ್ರಾ ಉಪ್ಪಿ.!

    ರೀಮೇಕ್ ಮಾಡೋದು ಸರಿ ಅಂದ್ರಾ ಉಪ್ಪಿ.!

    ನಾನು ಕೇಳುವ ಪ್ರಶ್ನೆಯಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿದ್ದೀನಿ, ಸರಿಯಾಗಿ ಯೋಚನೆ ಮಾಡಿ ನೋಡಿ ಎಂದು ಸುಳಿವು ನೀಡಿದ್ದ ಉಪೇಂದ್ರ, ರೀಮೇಕ್ ಮಾಡೋದನ್ನ ಸಮರ್ಥಿಸಿಕೊಂಡಿದ್ದಾರೆ ಎನ್ನಬಹುದು. ''ಬೇರೆ ಕಲಾವಿದರು, ಬೇರೆ ನಿರ್ಮಾಪಕರು ಮಾಡಿದ ಚಿತ್ರವನ್ನ ಕನ್ನಡ ಭಾಷೆ ಬಳಸಿ ತರಬಹುದು, ರೀಮೇಕ್ ಮಾಡಿದ್ರೆ ಬೇಡ ಅಂತಾರೆ'' ಎಂದಿರುವುದರ ಅರ್ಥ, ಡಬ್ಬಿಂಗ್ ಗಿಂತ ರೀಮೇಕ್ ಮಾಡುವುದು ಉತ್ತಮ ಎಂಬ ಅರ್ಥ ನೀಡುತ್ತಿರಬಹುದು.

    ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!

    ಡಬ್ಬಿಂಗ್ ಬಗ್ಗೆ ಉಪ್ಪಿ ಅಭಿಪ್ರಾಯ.?

    ಡಬ್ಬಿಂಗ್ ಬಗ್ಗೆ ಉಪ್ಪಿ ಅಭಿಪ್ರಾಯ.?

    ಇನ್ನು ಕನ್ನಡದಲ್ಲಿ ಡಬ್ಬಿಂಗ್ ಬೇಕಾ ಅಥವಾ ಬೇಡ ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ ಅವರು, 'ಬೇರೆ ಎಲ್ಲ ಭಾಷೆಗಳ ಚಿತ್ರಗಳು ಬರಿ ಡಬ್ಬಿಂಗ್ ಮೂಲಕವೇ ಕರ್ನಾಟಕದಲ್ಲಿ ಬರಬೇಕಾ ಅಥವಾ ಪರಭಾಷೆಯಲ್ಲೂ ತೆರೆಕಂಡು, ಕನ್ನಡದಲ್ಲೂ ಡಬ್ ಆಗಿ ಬರಬೇಕಾ...? ಎಂದು ಪ್ರಶ್ನಿಸಿದ್ದಾರೆ. ಎರಡನೇ ಆಯ್ಕೆ ಗಮನಿಸಿದ್ರೆ, ಪರಭಾಷೆಯಲ್ಲೂ ಬಂದು, ಕನ್ನಡದಲ್ಲೂ ಡಬ್ಬಿಂಗ್ ಆಗಿ ಬಂದ್ರೆ ನಮ್ಮ ಕನ್ನಡ ಸಿನಿಮಾಗೆ ಸಮಸ್ಯೆಯಾಗಲ್ವಾ.? ಎಂದಿದ್ದಾರೆ.

    ಡಾ ರಾಜ್ ಗಾಗಿ ಉಪೇಂದ್ರ ಬರೆದಿದ್ದ ಹಾಡು ನಿಂತು ಹೋದ ಕಥೆಡಾ ರಾಜ್ ಗಾಗಿ ಉಪೇಂದ್ರ ಬರೆದಿದ್ದ ಹಾಡು ನಿಂತು ಹೋದ ಕಥೆ

    ಡಬ್ಬಿಂಗ್ ವಿರೋಧಿಸಿದ್ರಾ ಉಪ್ಪಿ.?

    ಡಬ್ಬಿಂಗ್ ವಿರೋಧಿಸಿದ್ರಾ ಉಪ್ಪಿ.?

    ಉಪೇಂದ್ರ ಅವರ ಈ ಮಾತುಗಳನ್ನ ಗಮನಿಸಿದ್ರೆ ಡಬ್ಬಿಂಗ್ ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಕುತೂಹಲ ಇಲ್ಲಿ ಕಾಡುತ್ತೆ. ಯಾಕಂದ್ರೆ, ಡಬ್ಬಿಂಗ್ ಮಾಡೋದಾದರೇ, ಪರಭಾಷೆಯಲ್ಲಿ ಸಿನಿಮಾ ಬರಬಾರದು ಎಂಬುದು ಉಪ್ಪಿ ವಾದ. ಪರಬಾಷೆಯಲ್ಲೂ ಸಿನಿಮಾ ಬರುತ್ತೆ ಎನ್ನುವುದಾದರೇ ಡಬ್ಬಿಂಗ್ ಬೇಡ ಬಿಡಿ ಎನ್ನುವುದು ರಿಯಲ್ ಸ್ಟಾರ್ ರಿಯಲ್ ಅಭಿಪ್ರಾಯ ಎನ್ನುವುದನ್ನ ಗಮನಿಸಬೇಕಾಗಿದೆ.

    ಮತ್ತೆ ಡೈರೆಕ್ಷನ್ ಗೆ ಸಿದ್ಧವಾದ ಉಪ್ಪಿ, ಸಂಕ್ರಾಂತಿಗೆ ಕೊಡ್ತಾರೆ ಬಂಪರ್.!ಮತ್ತೆ ಡೈರೆಕ್ಷನ್ ಗೆ ಸಿದ್ಧವಾದ ಉಪ್ಪಿ, ಸಂಕ್ರಾಂತಿಗೆ ಕೊಡ್ತಾರೆ ಬಂಪರ್.!

    English summary
    Kannada actor, director Upendra has give clarification about remake movies. ಕ
    Monday, November 19, 2018, 10:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X