For Quick Alerts
  ALLOW NOTIFICATIONS  
  For Daily Alerts

  ಯುವ ನಿರ್ದೇಶಕನಿಗೆ ಸಿಕ್ತು ರಿಯಲ್ ಸ್ಟಾರ್ ಉಪೇಂದ್ರ ಕಾಲ್ ಶೀಟ್.!

  By Harshitha
  |
  ಉಪ್ಪಿಯಿಂದ ನಿರ್ದೇಶಕನಿಗೆ ಸಿಕ್ತು ದೊಡ್ಡ ಚಾನ್ಸ್ | Filmibeat Kannada

  ಕೆ.ಪಿ.ಜೆ.ಪಿ ಪಕ್ಷದಿಂದ ಹೊರಗೆ ಬಂದ್ಮೇಲೆ, 'ಪ್ರಜಾಕೀಯ' ಪಕ್ಷ ಕಟ್ಟುವಲ್ಲಿ ಉಪೇಂದ್ರ ನಿರತರಾಗಿದ್ದಾರೆ. ಈ ನಡುವೆ ಚಿತ್ರರಂಗಕ್ಕೆ ಮರಳಿ ಬಂದಿರುವ ಉಪೇಂದ್ರ ಸಾಲು ಸಾಲು ನಿರ್ಮಾಪಕರಿಗೆ ತಮ್ಮ ಕಾಲ್ ಶೀಟ್ ನೀಡಿದ್ದಾರೆ.

  ಆರ್.ಚಂದ್ರು ನಿರ್ದೇಶನ ಮಾಡುತ್ತಿರುವ 'ಐ ಲವ್ ಯು' ಚಿತ್ರದಲ್ಲಿ ಉಪೇಂದ್ರ ಅಭಿನಯಿಸುತ್ತಿರುವುದು ನಿಮಗೆಲ್ಲ ಗೊತ್ತಿದೆ. ಇದರ ಜೊತೆಗೆ 'ಡಾ ಮೋದಿ' ಸೇರಿದಂತೆ ಎರಡ್ಮೂರು ಚಿತ್ರಗಳಿಗೂ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  'ಐ ಲವ್ ಯು' ಚಿತ್ರ ಮುಗಿದ ಬಳಿಕ 'ಅಧೀರ' ಚಿತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. 'ಅಧೀರ' ಎಂಬ ಚಿತ್ರಕ್ಕೆ ಯುವ ನಿರ್ದೇಶಕ ಸಂತು ಆಕ್ಷನ್ ಕಟ್ ಹೇಳಲಿದ್ದಾರೆ. ಹಾಗ್ನೋಡಿದ್ರೆ, ಸಂತು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರ ಈ 'ಅಧೀರ'.

  ರಾಜಕೀಯ ಬ್ರೇಕ್ ಆರು ಜನರಿಗೆ ಸಿಕ್ತು ಉಪ್ಪಿ ಕಾಲ್ ಶೀಟ್ರಾಜಕೀಯ ಬ್ರೇಕ್ ಆರು ಜನರಿಗೆ ಸಿಕ್ತು ಉಪ್ಪಿ ಕಾಲ್ ಶೀಟ್

  'ಅಧೀರ' ಚಿತ್ರದ ಸಣ್ಣ ತುಣುಕು ರೆಡಿ ಮಾಡಿಕೊಂಡು ಉಪೇಂದ್ರ ರವರ ಜೊತೆ ಸಂತು ಮಾತುಕತೆ ನಡೆಸಿದ್ದರಂತೆ. ಸಂತು ಅವರ ಶ್ರದ್ಧೆ ಹಾಗೂ ಸೃಜನಶೀಲತೆಗೆ ಕ್ಲೀನ್ ಬೌಲ್ಡ್ ಆದ ಉಪೇಂದ್ರ ಹಿಂದು ಮುಂದು ನೋಡದೆ ಸಂತುಗೆ ಕಾಲ್ ಶೀಟ್ ಕೊಟ್ಟಿದ್ದಾರೆ.

  ಆರ್.ಚಂದ್ರು ರವರ 'ಐ ಲವ್ ಯು' ಚಿತ್ರೀಕರಣ ಕಂಪ್ಲೀಟ್ ಆದ ಬಳಿಕ 'ಅಧೀರ' ಶೂಟಿಂಗ್ ಶುರುವಾಗಲಿದೆ. ಉಪೇಂದ್ರ ಸಿನಿಮಾಗಳ ಬಗ್ಗೆ ಹೆಚ್ಚಿನ ಅಪ್ಡೇಟ್ಸ್ ಕೊಡ್ತಾಯಿರ್ತೀವಿ, ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

  English summary
  Kannada Director Upendra gives call sheet for debutant director Santhu for 'Adheera'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X