ಕರುನಾಡ ಚಕ್ರವರ್ತಿ, ಅಭಿನಯ ಚಕ್ರವರ್ತಿ ಬಳಿಕ ಮತ್ತೊಬ್ಬ 'ಚಕ್ರವರ್ತಿ'!
Recommended Video
ಕರುನಾಡ ಚಕ್ರವರ್ತಿ ಎಂದ ತಕ್ಷಣ ನೆನಪಾಗುವುದು ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಎಂದ ತಕ್ಷಣ ಕಣ್ಣು ಮುಂದೆ ಬರುವುದು ಕಿಚ್ಚ ಸುದೀಪ್. ಆದರೆ, ಈಗ ಈ ಇಬ್ಬರು ಸ್ಟಾರ್ ಗಳ ಜೊತೆಗೆ ಮತ್ತೊಬ್ಬ ಸ್ಟಾರ್ ಗೆ 'ಚಕ್ರವರ್ತಿ' ಬಿರುದು ಸಿಕ್ಕಿದೆ.
ಶಿವರಾಜ್ ಕುಮಾರ್ ಹಾಗೂ ಸುದೀಪ್ ಚಕ್ರವರ್ತಿ ಬಿರುದು ಪಡೆದರೆ, ನಟ ದರ್ಶನ್ 'ಚಕ್ರವರ್ತಿ' ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಆದರೆ, ಈಗ ಈ ಎಲ್ಲ ನಟರುಗಳ ಬಳಿಕ ಮತ್ತೊಬ್ಬ ನಟನಿಗೆ 'ಚಕ್ರವರ್ತಿ' ಬಿರುದನ್ನು ನೀಡಲಾಗಿದೆ.
'ಚಕ್ರವರ್ತಿ' ಬಿರುದು ಪಡೆದ ಆ ನಟ ಯಾರು ಎನ್ನುವ ಕುತೂಹಲ ನಿಮಗೂ ಮೂಡಬಹುದು. ಆ ನಟ ಬೇರೆ ಯಾರು ಅಲ್ಲ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ...

ಅಭಿಮಾನಿಗಳ ಚಕ್ರವರ್ತಿ ಉಪೇಂದ್ರ
ನಟ ಉಪೇಂದ್ರ, ರಿಯಲ್ ಸ್ಟಾರ್ ಉಪೇಂದ್ರ, ಸೂಪರ್ ಸ್ಟಾರ್ ಉಪೇಂದ್ರ ಎಂದು ಕರೆಸಿಕೊಳ್ಳುತ್ತಿದ್ದರು. ಆದರೆ, ಈಗ ಉಪೇಂದ್ರರಿಗೆ ಮತ್ತೊಂದು ಹೊಸ ಬಿರುದು ಸಿಕ್ಕಿದೆ, ಅದೇ 'ಅಭಿಮಾನಿಗಳ ಚಕ್ರವರ್ತಿ ಉಪೇಂದ್ರ'. ಅಂದಹಾಗೆ, ಈ ಬಿರುದನ್ನು ಉಪ್ಪಿಯ ಹೊಸ ಸಿನಿಮಾ 'ಐ ಲವ್ ಯೂ' ಚಿತ್ರತಂಡ ನೀಡಿದೆ.

ಪೋಸ್ಟರ್ ನಲ್ಲಿ ಕಂಡ ಬಿರುದು
'ಐ ಲವ್ ಯೂ' ಸಿನಿಮಾದ ಪೋಸ್ಟರ್ ನಲ್ಲಿ ಗಮನಿಸಿದರೆ, ಉಪೇಂದ್ರ ಅವರಿಗೆ ನೀಡಿರುವ ಬಿರುದು ಕಾಣಿಸುತ್ತದೆ. 'ಅಭಿಮಾನಿಗಳ ಚಕ್ರವರ್ತಿ ಉಪೇಂದ್ರ' ಎಂದು ಪೋಸ್ಟರ್ ನಲ್ಲಿ ಹಾಕಲಾಗಿದೆ. ನಿರ್ದೇಶಕ ಆರ್ ಚಂದ್ರು ಮತ್ತು ತಂಡ ಸೇರಿ ಉಪೇಂದ್ರರಿಗೆ ಈ ಬಿರುದು ನೀಡಿದೆ.

ನೈಜತಾರೆ ಉಪೇಂದ್ರ
ಇತ್ತೀಚಿಗಷ್ಟೆ ನಿರ್ದೇಶಕ ಶಶಾಂಕ್ ಸಹ ಉಪೇಂದ್ರರಿಗೆ ಮತ್ತೊಂದು ಹೆಸರಿನಲ್ಲಿ ಕರೆದಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಎನ್ನುವುದನ್ನು ಕನ್ನಡದಲ್ಲಿ ನೈಜತಾರೆ ಉಪೇಂದ್ರ ಎಂದು ಕರೆದು ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು. ಉಪ್ಪಿಗೆ ಶಶಾಂಕ್ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಪೋಸ್ಟರ್ ನಲ್ಲಿ ನೈಜ ತಾರೆ ಎಂದು ಹಾಕಲಾಗಿದೆ.

ಜೂನ್ 14 ರಂದು 'ಐ ಲವ್ ಯೂ' ಬಿಡುಗಡೆ
ಮತ್ತೊಂದು ಕಡೆ 'ಐ ಲವ್ ಯೂ' ಚಿತ್ರದ ಬಿಡುಗಡೆ ದಿನಾಂಕವೂ ಪ್ರಕಟವಾಗಿದೆ. ಜೂನ್ 14 ರಂದು ಉಪ್ಪಿ 'ಐ ಲವ್ ಯೂ' ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿದೆಯಂತೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ರಚಿತಾ ರಾಮ್ ಹಾಗೂ ಸೋನು ಗೌಡ ಸಿನಿಮಾದ ನಾಯಕಿಯರಾಗಿದ್ದಾರೆ.


Click it and Unblock the Notifications











