ವಿಶ್ವದ ಟಾಪ್ 50 ನಿರ್ದೇಶಕರ ಪೈಕಿ ಸ್ಥಾನ ಪಡೆದ ರಿಯಲ್ ಡೈರೆಕ್ಟರ್
ಉಪೇಂದ್ರ ಬಳಿ ಪದೇ ಪದೇ ಬರುವ ಪ್ರಶ್ನೆ ''ನಿಮ್ಮ ಮುಂದಿನ ನಿರ್ದೇಶನದ ಸಿನಿಮಾ ಯಾವಾಗ?''. ಹೌದು, ಉಪೇಂದ್ರ ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡ ಸಿನಿಮಾ ಪ್ರೇಕ್ಷಕರು ಯಾವಾಗಲೂ ಉಪೇಂದ್ರ ನಿರ್ದೇಶಕದ ಸಿನಿಮಾಗಾಗಿ ಕಾಯುತ್ತಿರುತ್ತಾರೆ.
ಉಪೇಂದ್ರ ಡೈರೆಕ್ಷನ್ ಪವರ್ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಈಗ ಮತ್ತೆ ಸಾಬೀತು ಆಗಿದೆ. IMDBಯ ವಿಶ್ವದ ಟಾಪ್ 50 ನಿರ್ದೇಶಕರ ಪಟ್ಟಿಯಲ್ಲಿ ರಿಯಲ್ ಡೈರೆಕ್ಟರ್ ಉಪೇಂದ್ರ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ನಿರ್ದೇಶಕ ಇವರಾಗಿದ್ದಾರೆ.
ಭಾರತದ ಮೂರು ನಿರ್ದೇಶಕರು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ನಿರ್ದೇಶಕ ರಾಜ್ ಕುಮಾರ್ ಇರಾನಿ, ಶ್ರೇಷ್ಟ ನಿರ್ದೇಶಕ ಸತ್ಯ ಜೀತ್ ರೇ ಹಾಗೂ ಕನ್ನಡದ ಉಪೇಂದ್ರ ಈ ಪಟ್ಟಿಯಲ್ಲಿ ಇದ್ದಾರೆ. ಸೌತ್ ಇಂಡಿಯಾದಿಂದ ಉಪೇಂದ್ರ ಮಾತ್ರ ಈ ಪಟ್ಟಿಗೆ ಆಯ್ಕೆ ಆಗಿದ್ದಾರೆ.

ರಾಜ್ ಕುಮಾರ್ ಇರಾನಿ 'ಮುನ್ನಾಭಾಯಿ ಎಂ ಬಿ ಬಿ ಎಸ್', 'ತ್ರೀ ಈಡಿಯಟ್ಸ್', 'ಪಿಕೆ' ಸಿನಿಮಾಗಳ ಮೂಲಕ ದೊಡ್ಡ ಯಶಸ್ಸು ಪಡೆದಿದ್ದಾರೆ.
ಉಪೇಂದ್ರ ಈವರೆಗೆ 9 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ತರ್ಲೆ ನನ್ ಮಗ', 'ಓಂ' 'ಎ' 'ಉಪೇಂದ್ರ' 'ಸೂಪರ್' ಸೂಪರ್ ಹಿಟ್ ಆಗಿವೆ.
ಸತ್ಯಜೀತ್ ರೇ ಭಾರತ ಚಿತ್ರರಂಗ ಕಂಡ ಶ್ರೇಷ್ಟ ನಿರ್ದೇಶಕರಾಗಿದ್ದಾರೆ.


Click it and Unblock the Notifications