»   » ಜಕಾರ್ತಾದಲ್ಲಿ ಉಪೇಂದ್ರ ಲ್ಯಾಂಬೋರ್ಗಿನಿ ರೈಡ್

ಜಕಾರ್ತಾದಲ್ಲಿ ಉಪೇಂದ್ರ ಲ್ಯಾಂಬೋರ್ಗಿನಿ ರೈಡ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಬೈಕ್ ಮತ್ತು ಕಾರ್ ಕ್ರೇಜ್ ಇಂದು ನಿನ್ನೆಯದ್ದಲ್ಲ. 'ಉಪ್ಪಿ-2' ಚಿತ್ರದಲ್ಲೇ ನೋಡಿ, ಅರಿಷಡ್ವರ್ಗಗಳನ್ನ ಪ್ರತಿನಿಧಿಸುವುದಕ್ಕೆ ಉಪೇಂದ್ರ ಆರು ಬೈಕ್ ಗಳನ್ನ ಸ್ಪೆಷಲ್ ಆಗಿ ರೆಡಿ ಮಾಡಿಸಿದ್ದರು.

ಉಪ್ಪಿಗೆ ಕಾರ್ ಗಳೆಂದ್ರೆ ಪಂಚಪ್ರಾಣ ಅಂತ ಗೊತ್ತಾದ ಮೇಲೆಯೇ ಪತ್ನಿ ಪ್ರಿಯಾಂಕಾ ಉಪೇಂದ್ರ, ಉಪ್ಪಿ ಹುಟ್ಟುಹಬ್ಬಕ್ಕೆ ಕಾರ್ ಗಿಫ್ಟ್ ಮಾಡಿದ್ದರು. ಈಗ ಉಪೇಂದ್ರ ಮತ್ತು ಕಾರ್ ಕ್ರೇಜ್ ಬಗ್ಗೆ ನಾವು ಹೇಳುತ್ತಿರುವುದಕ್ಕೆ ಕಾರಣ ಉಪೇಂದ್ರ ಅವರ ಇಂಡೋನೇಶಿಯಾ ಟ್ರಿಪ್.

ರಿಯಲ್ ಸ್ಟಾರ್ ಉಪೇಂದ್ರ ಇಂಡೋನೇಶಿಯಾದ ಜಕಾರ್ತಾಗೆ ಪ್ರಯಾಣ ಬೆಳೆಸಿದ್ದಾರೆ. ಅದು ಅಲ್ಲಿನ ಲ್ಯಾಂಬೋರ್ಗಿನಿ ಟ್ರ್ಯಾಕ್ ಈವೆಂಟ್ ನಲ್ಲಿ ಅತಿಥಿಯಾಗಿ ಭಾಗವಹಿಸುವುದಕ್ಕೆ. [ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]

upendra

ಅಷ್ಟಕ್ಕೂ ಉಪೇಂದ್ರ ಅವರಿಗೆ ಇಂತಹ ಅವಕಾಶ ಕಲ್ಪಿಸಿದ್ದು ಬೆಂಗಳೂರಿನ ಲ್ಯಾಂಬೋರ್ಗಿನಿ ಸಂಸ್ಥೆಯ ಅಧ್ಯಕ್ಷ ಟಿ.ಎಸ್.ಸತೀಶ್. 'ಉಪ್ಪಿ-2' ಚಿತ್ರವನ್ನ ಟಿ.ಎಸ್.ಸತೀಶ್ ಮತ್ತು ಕುಟುಂಬ ನೋಡಿ ಮೆಚ್ಚಿಕೊಂಡು, ಜಕಾರ್ತಾದಲ್ಲಿ ನಡೆಯುವ ಅವರ ಸಂಸ್ಥೆಯ ಟ್ರ್ಯಾಕ್ ರೇಸ್ ಗೆ ಉಪೇಂದ್ರ ಅವರಿಗೆ ಆಹ್ವಾನ ನೀಡಬೇಕು ಅಂದುಕೊಂಡರಂತೆ. [ಉಪೇಂದ್ರ ಅವರ ಮುಂದಿನ ಚಿತ್ರ ಯಾವುದು ಗೊತ್ತಾ?]

ಅದರಂತೆ, ಉಪೇಂದ್ರ ಅವರಿಗೆ ಟಿ.ಎಸ್.ಸತೀಶ್ ಆಹ್ವಾನ ನೀಡಿದರು. ಅದಕ್ಕೆ ಜೈ ಅಂದ ಉಪ್ಪಿ ಜಕಾರ್ತಾಗೆ ಫ್ಲೈಟ್ ಹತ್ತಿದ್ದಾರೆ. ಅಲ್ಲಿ ಲ್ಯಾಂಬೋರ್ಗಿನಿ ಕಾರ್ ಗಳ ಜೊತೆ ಉಪೇಂದ್ರ ಕೊಟ್ಟಿರುವ ಪೋಸ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದ ಲಭ್ಯವಾಗಿದೆ.

English summary
Kannada Actor Upendra has been invited to be a guest for Lamborghini Track Event which will be held in Jakarta, Indonesia.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada