ಒಂದು ದೇಶ ಒಂದೇ ತೆರಿಗೆ, ಒಂದು ದೇಹ ಒಂದೇ ವಿಮೆ: ಹೇಗಿದೆ ಐಡಿಯಾ.?
Recommended Video

Upendra Has Come Up With New Master Plan For Health Insurance | Filmibeat Kannada
ಇಡೀ ದೇಶಕ್ಕೆ ಒಂದೇ ತೆರಿಗೆ ಇರಲಿ ಅಂತ 'ಜಿ.ಎಸ್.ಟಿ' ಜಾರಿಗೆ ತರಲಾಗಿದೆ. ಅದೇ ಸೂತ್ರದ ಹಾಗೆ ಒಂದು ದೇಹಕ್ಕೆ ಒಂದೇ ವಿಮೆ ಇದ್ದರೆ ಹೇಗೆ.?
ಇಂತಹ ಐಡಿಯಾ 'ಪ್ರಜೆ'ಗಳಿಗೆ ಹೊಳೆದಿರುವುದರಿಂದ 'ಪ್ರಜಾಕಾರಣಿ' ಉಪೇಂದ್ರ ಅದಕ್ಕೆ ಪ್ರಚಾರ ನೀಡುತ್ತಿದ್ದಾರೆ.

ವಾಹನಗಳಿಗೆ ಅಪಘಾತ ಆಗಲಿ, ಬಿಡಲಿ... ಪ್ರತಿ ವಾಹನಕ್ಕೂ ವಿಮೆ ಹೇಗೆ ಕಡ್ಡಾಯವೋ... ಹಾಗೇ, ಪ್ರತಿ ದೇಹಕ್ಕೂ ವಿಮೆ ಕಡ್ಡಾಯ ಆಗಲೇಬೇಕು ಎಂಬುದು 'ಪ್ರಜೆ'ಗಳ ವಾದ.
''ಈಗ ಇರುವ ಅನೇಕ ವಿಮೆಗಳು ಕೆಲವು ಖಾಯಿಲೆಗಳನ್ನು ಮಾತ್ರ ಕವರ್ ಮಾಡುತ್ತದೆ. ಇನ್ಶೂರೆನ್ಸ್ ನಲ್ಲಿ ಕವರ್ ಆಗುವ ಖಾಯಿಲೆಗಳು ಮಾತ್ರ ನಮಗೆ ಬರಲ್ಲ. ಹೆಲ್ತ್ ಗೆ ಒಂದು, ಆರೋಗ್ಯಕ್ಕೆ ಇನ್ನೊಂದು, ಅಪಘಾತಕ್ಕೆ ಮತ್ತೊಂದು ಅನ್ನೋ ಬದಲು ಎಲ್ಲವಕ್ಕೂ ಸೇರಿ ಒಂದೇ ವಿಮೆ ಮಾಡಿಸಿದರೆ ಹೇಗೆ. ಒಂದು ದೇಹಕ್ಕೆ ಒಂದೇ ವಿಮೆ ಇರಲಿ?'' ಎಂಬುದು 'ಪ್ರಜೆ'ಗಳ ಅಭಿಪ್ರಾಯ.
ಇನ್ಶೂರೆನ್ಸ್ ಕುರಿತು ಪ್ರಜೆ ಕೊಟ್ಟಿರುವ ಈ ಐಡಿಯಾ ಹೇಗಿದೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.
More from Filmibeat
English summary
'Prajaakarani' Upendra has come up with a master plan for Health Insurance.


Click it and Unblock the Notifications











