ನೂತನ ಮುಖ್ಯಮಂತ್ರಿ ಕುಮಾರಣ್ಣ ಬಗ್ಗೆ ಉಪೇಂದ್ರ ಟ್ವೀಟ್
Recommended Video

ರಿಯಲ್ ಸ್ಟಾರ್ ಉಪ್ಪಿ ರಾಜಕೀಯದಲ್ಲಿ ಸಣ್ಣ ಬ್ರೇಕ್ ಪಡೆದುಕೊಂಡು ಸದ್ಯ ಸಿನಿಮಾರಂಗದಲ್ಲಿ ಬ್ಯುಸಿ ಆಗಿದ್ದಾರೆ. ಆದರೂ ಕೂಡ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಉಪ್ಪಿ ಗಮನ ಹರಿಸುತ್ತಿದ್ದಾರೆ. ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಕುಮಾರಸ್ವಾಮಿ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
"ಶುಭಾಶಯಗಳು ಕುಮಾರಣ್ಣ, ಬೆಸ್ಟ್ ಆಫ್ ಲಕ್" ಎಂದು ಟ್ವಿಟ್ಟರ್ ಮೂಲಕವೇ ನೂತನ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣೆ ಮುಗಿದು ಮತ ಎಣಿಕೆಯ ದಿನ ಬಿಜೆಪಿ ಬಹುಮತ ಗಳಿಸಿದ್ದಾಗ ಉಪ್ಪಿ ಆ ಪಕ್ಷದವರಿಗೂ ಅಭಿನಂದನೆ ತಿಳಿಸಿದ್ದರು.

ಒಟ್ಟಾರೆ ಇದರಿಂದ ಉಪ್ಪಿ ಅವರ ಅಭಿಮಾನಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಅರ್ಥವಾಗುವುದು ಉಪ್ಪಿ ಯಾರ ಪರವೂ ಅಲ್ಲ, ವಿರೋಧವೂ ಅಲ್ಲ. ಆದರೆ ಸಿನಿಮಾರಂಗದಲ್ಲಿಯೂ ಸಾಕಷ್ಟು ವರ್ಷ ಸೇವೆ ಸಲ್ಲಿಸಿರುವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಿರುವುದು ರಿಯಲ್ ಸ್ಟಾರ್ ಗೆ ಖುಷಿ ಕೊಟ್ಟಿದೆ.
ಅದೇ ರೀತಿಯಲ್ಲಿ ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಏನೆಲ್ಲಾ ಕೆಲಸಗಳು ಆಗುತ್ತವೆ ಎನ್ನುವುದನ್ನು ನೋಡಲು ಕಾತುರರಾಗಿದ್ದಾರಂತೆ.


Click it and Unblock the Notifications











