»   » ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?

ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?

Posted By: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

ತಮಿಳು ನಟ ಸತ್ಯರಾಜ್ ರವರ ಬೇಜವಾಬ್ದಾರಿ ಹೇಳಿಕೆಯಿಂದ ಕನ್ನಡಿಗರು ಸಿಟ್ಟಿಗೆದ್ದಿದ್ರೆ, ಕನ್ನಡ ಪರ ಹೋರಾಟಗಾರರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೆಲುಗು ಸಿನಿ'ಭಕ್ತ'ರು ಗೇಲಿ ಮಾಡಲು ಆರಂಭಿಸಿದ್ದಾರೆ.

''ಬಾಹುಬಲಿ' ತರಹ ಸಿನಿಮಾ ಮಾಡಿ. ಆಗ್ಲಿಲ್ಲ ಅಂದ್ರೆ ಮುಚ್ಕೊಂಡ್ ಕೂತ್ಕೊಳ್ಳಿ. ಸತ್ಯರಾಜ್ ಜೊತೆಗೆ ಸುದೀಪ್ ರವರ ಚಿತ್ರಗಳನ್ನೂ ಬ್ಯಾನ್ ಮಾಡಿ'' ಅಂತೆಲ್ಲ ಫೇಸ್ ಬುಕ್ ನಲ್ಲಿ ಗಹಗಹಿಸಿ ಟ್ರೋಲ್ ಮಾಡುತ್ತಿರುವ ಟಾಲಿವುಡ್ ಮಂದಿ, ಅದೇ 'ಟ್ರೋಲ್ ಟಾಲಿವುಡ್' ಪೇಜ್ ನಲ್ಲಿ ತಮ್ಮ ಉದಾರತನವನ್ನ ಪ್ರದರ್ಶನ ಮಾಡಿಕೊಂಡಿದ್ದಾರೆ.[ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!]

Upendra has got fans in Telugu States - Troll Tollywood

''ಪರಭಾಷೆಯ ಹಲವು ನಟರು ಟಾಲಿವುಡ್ ನಲ್ಲಿ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಆದ್ರೆ, ತೆಲುಗು ಮಂದಿ ಮಾತ್ರ ಪರಭಾಷಾ ನಟರ ವಿರುದ್ಧ ಎಂದೂ ಪ್ರತಿಭಟನೆ ಮಾಡಿಲ್ಲ. ಯಾಕಂದ್ರೆ ನಮಗೆ ಸಿನಿಮಾ ಬಗ್ಗೆ ಪ್ರೀತಿ. ಪ್ರತಿಭೆ ಬಗ್ಗೆ ಗೌರವ ಇದೆ'' ಎಂದು ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

''ಕಲೆಗೆ ಗಡಿ ಇಲ್ಲ'' ಎಂದು ಹೇಳಿರುವ 'ಟ್ರೋಲ್ ಟಾಲಿವುಡ್', ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಪರಭಾಷೆಯಲ್ಲಿ ಜನಪ್ರಿಯತೆ ಗಳಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ರವರನ್ನ ಉಲ್ಲೇಖಿಸಿದೆ. ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ರವರಿಗೆ ಟಾಲಿವುಡ್ ನಲ್ಲೂ ಫ್ಯಾನ್ಸ್ ಇದ್ದಾರೆ ಅಂತ 'ಟ್ರೋಲ್ ಟಾಲಿವುಡ್' ಹೇಳಿಕೊಂಡಿದೆ.['ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!]

ಕನ್ನಡಿಗರೇ... ಇದಕ್ಕೆ ನಿಮ್ಮ ಉತ್ತರವೇನು.? ನಿಮ್ಮ ಪ್ರತಿಕ್ರಿಯೆಯನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Upendra has got fans in Telugu States - Troll Tollywood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada