'ಪ್ರಜಾಕೀಯ'ದತ್ತ ಹೆಜ್ಜೆ ಹಾಕಿದ ಪಾಕಿಸ್ತಾನಕ್ಕೆ ಉಪ್ಪಿ ಪ್ರಚಾರ: ಜನರಿಂದ ಟೀಕೆ

By Bharath Kumar

Recommended Video

ಪ್ರಜಾಕೀಯ ಅಲ್ಲ ಹೊಲಸು ರಾಜಕೀಯ ಎಂದು ಗರಂ ಆದ ನೆಟ್ಟಿಗರು..! | Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು 'ಪ್ರಜಾಕೀಯ' ಕಲ್ಪನೆಗೆ ಕನ್ನಡ ನಾಡಿನ ಜನರಿಂದ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿತ್ತು. ಉಪ್ಪಿಯ ಈ ಯೋಜನೆಗಳು ಜಾರಿಯಾದ್ರೆ ಹೊಸ ರೀತಿಯ ಸಮಾಜ ಹುಟ್ಟಿಕೊಳ್ಳುತ್ತೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಸದ್ಯದ ರಾಜಕೀಯದ ಮಧ್ಯೆ ಈ ಪ್ರಜಾಕೀಯದ ಮಾತು ಸಾಧ್ಯವೇ ಎಂಬ ಅನುಮಾನ ಕಾಡಿರುವುದಂತೂ ಸುಳ್ಳಲ್ಲ.

ಉಪ್ಪಿಯ ಪ್ರಜಾಕೀಯದ ಬಗ್ಗೆ ಚರ್ಚೆಯಾಗುತ್ತಿರುವಾಗಲೇ, ಪಾಕಿಸ್ತಾನದಲ್ಲಿ ಅದನ್ನ ಅಳವಡಿಸಿಕೊಂಡಿದ್ದಾರೆ ಎನ್ನುವುದಕ್ಕೆ ವಿಡಿಯೋವೊಂದು ಸಾಕ್ಷಿಯಾಗಿದೆ. ಪಾಕಿಸ್ತಾನದ ನೂತನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಪಾಕಿಸ್ತಾನದ ಕುರಿತು ಮತ್ತು ಆ ದೇಶದ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನ ಶೇರ್ ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ, ಪಾಕಿಸ್ತಾನ ಪ್ರಜಾಕೀಯದ ಕಡೆ ಹೆಜ್ಜೆ ಹಾಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಒಂದು ಕಡೆ ಮೆಚ್ಚುಗೆಗೆ ಪಾತ್ರವಾಗಿದ್ದರೇ, ಮತ್ತೊಂದೆಡೆ ಶತ್ರುರಾಷ್ಟ್ರದ ಪರವಾಗಿ ಪ್ರಚಾರ ಮಾಡುವುದು ಸರಿಯಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಏನು ಹೇಳಿದ್ದಾರೆ ಎಂದು ಮುಂದೆ ಓದಿ......

ಪಾಕಿಸ್ತಾನದ ವ್ಯವಸ್ಥೆ ಬದಲಿಸುವ ಮಾತು

ಪಾಕಿಸ್ತಾನದ ವ್ಯವಸ್ಥೆ ಬದಲಿಸುವ ಮಾತು

''ಪ್ರಧಾನಮಂತ್ರಿ ನಿವಾಸ, ರಾಜ್ಯಪಾಲರ ನಿವಾಸ, ಕಮಿಷನರ್ ಗಳ ನಿವಾಸ, ಅವರು ಬಳುಸವ ಬುಲೆಟ್ ಪ್ರೋಫ್ ಕಾರ್, ದುಬಾರಿ ಕಾರ್, ಅದಕ್ಕೆ ಮಾಡಲಾಗುವ ಖರ್ಚು ವೆಚ್ಚ ತುಂಬಾ ಹೆಚ್ಚಾಗಿದೆ. ಇಲ್ಲಿ ಇಷ್ಟೊಂದು ಹಣ ನಷ್ಟವಾಗುತ್ತಿದೆ. ಹೀಗಿದ್ದರೇ ಸಾಮಾನ್ಯ ಜನರಿಗಾಗಿ ಹೇಗೆ ಕೆಲಸ ಮಾಡಲು ಸಾಧ್ಯ.? ಇದು ಬದಲಾಗಬೇಕಿದೆ. ಇದರಲ್ಲಿ ಹಣ ಉಳಿಸಬೇಕಾಗಿದೆ. ಈ ಹಣದಿಂದ ಒಂದು ವಿಶ್ವವಿದ್ಯಾಲಯ ನಿರ್ಮಾಣ ಮಾಡೋಣ ಎಂದು ಇನ್ನು ಅನೇಕ ವಿಷ್ಯಗಳ ಬಗ್ಗೆ ಪಾಕಿಸ್ತಾನದ ಪ್ರಧಾನಮಂತ್ರಿ ತಮ್ಮ ಚೊಚ್ಚಲ ಭಾಷಣದಲ್ಲಿ ಅಭಿವೃದ್ಧಿಯ ಮಂತ್ರ ಜಪಿಸಿದ್ದಾರೆ.

ಬಡಿದೆಬ್ಬಿಸುತ್ತಿರುವ ಉಪೇಂದ್ರ

ಬಡಿದೆಬ್ಬಿಸುತ್ತಿರುವ ಉಪೇಂದ್ರ

ಎಲ್ಲರಿಗೂ ತಿಳಿದಿರುವಾಗೆ ನಟ ಉಪೇಂದ್ರ ಅವರ ಪ್ರಜಾಕೀಯದ ಉದ್ದೇಶವೂ ಬಹುತೇಕ ಇದೇ ಆಗಿದೆ. ಹೀಗಾಗಿ, ಉಪೇಂದ್ರ ಅವರು ಈ ವಿಡಿಯೋವನ್ನ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನ ಪ್ರಜಾಕೀಯದ ಕಡೆಗೆ ಸಾಗಿದೆ ಎಂದು ಬಡಿದೆಬ್ಬಿಸುತ್ತಿದ್ದಾರೆ.

ಉಪ್ಪಿ ವಿರುದ್ಧ ಕೆಲವರು ಆಕ್ರೋಶ

ಉಪ್ಪಿ ವಿರುದ್ಧ ಕೆಲವರು ಆಕ್ರೋಶ

ನಟ ಉಪೇಂದ್ರ ಅವರು ಈ ವಿಡಿಯೋ ಪೋಸ್ಟ್ ನೋಡಿ ಕೆಲವರು ಉಪ್ಪಿ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಭಾರತೀಯ ಸೈನ್ಯ ಪ್ರತಿದಿನ ಪಾಕ್ ಸೈನ್ಯದೊಂದಿಗೆ ಯುದ್ಧ ಮಾಡುತ್ತಿದೆ. ಸಾವಿರಾರು ಸೈನಿಕರು ಸಾಯುತ್ತಿದ್ದಾರೆ. ಹೀಗಿರುವಾಗ, ಪಾಕಿಸ್ತಾನದ ಕುರಿತು ಪೋಸ್ಟ್ ಪ್ರಮೋಟ್ ಮಾಡುವುದು ಸರಿಯಿಲ್ಲ ಎಂದು ಟೀಕಿಸುತ್ತಿದ್ದಾರೆ.

ಪಾಕ್ ಡಬಲ್ ಗೇಮ್ ಆಡುತ್ತೆ

ಪಾಕ್ ಡಬಲ್ ಗೇಮ್ ಆಡುತ್ತೆ

ಅವರ ಅಭಿವೃದ್ಧಿಯ ಯೋಜನೆ ಚೆನ್ನಾಗಿದೆ. ಆದ್ರೆ, ಪಾಕಿಸ್ತಾನ ಡಬಲ್ ಗೇಮ್ ಆಡುತ್ತೆ. ಒಂದು ಕಡೆ ಅಭಿವೃದ್ದಿಗೆ ಮಾತನಾಡುತ್ತೆ, ಮತ್ತೊಂದೆಡೆ ಭಯೋತ್ಪಾದಕರಿಗೆ ನೆರವು ನೀಡುತ್ತೆ. ಅದರಿಂದ ಎಷ್ಟು ಜನ ಸೈನಿಕರನ್ನ ನಾವು ಕಳೆದುಕೊಂಡಿದ್ದೇವೆ ಎಂಬುದರ ಬಗ್ಗೆ ಅರವಿರಲಿ'' ಎಂದು ರೀ-ಟ್ವೀಟ್ ಮಾಡಿದ್ದಾರೆ.

ಇದೆಲ್ಲಾ ಪ್ರಚಾರ ಅಷ್ಟೇ

ಇದೆಲ್ಲಾ ಪ್ರಚಾರ ಅಷ್ಟೇ

''ಅಂದು Prajakeeya,

ಇಂದು Pracharakeeya,

ನಾಳೆ ಅದೇ ಹೊಲಸು Rajakeeya.

ಅಲ್ಲಿ ಇಮ್ರಾನ್ ಖಾನ್

ಇಲ್ಲಿ ನಮ್ಮ ಉಪೇಂದ್ರ

ಕೊನೆಗೂ ಬಡವರಿಗೆ ಗತಿ ಆ ಹರಿಶ್ಚಂದ್ರ '' ಎಂದು ವ್ಯಂಗ್ಯ ಮಾಡಿದ್ದಾರೆ.

More from Filmibeat

English summary
Kannada actor Upendra has Promote pakistan Prime minister imran khan speech in twitter and facebook account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X