»   »  ಉಪ್ಪಿ ಪಾರ್ಟಿಯ ಧ್ಯೇಯ ಮತ್ತು ಉದ್ದೇಶ ಬಿಡುಗಡೆ

ಉಪ್ಪಿ ಪಾರ್ಟಿಯ ಧ್ಯೇಯ ಮತ್ತು ಉದ್ದೇಶ ಬಿಡುಗಡೆ

Posted By: Pavithra
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗಷ್ಟೆ ಸುದ್ದಿಗೋಷ್ಟಿ ಮಾಡಿ ತಮ್ಮ ಪಕ್ಷದ ಹೆಸರು ಹಾಗೂ ತಮ್ಮ ಪಕ್ಷಕ್ಕೆ ಆಯ್ಕೆ ಮಾಡಿಕೊಂಡಿರುವ ಚಿಹ್ನೆಯ ಬಗ್ಗೆ ಮಾತನಾಡಿದರು. ಅದರ ಬೆನ್ನಲ್ಲೇ ಉಪ್ಪಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಇರಬೇಕಾದ ಧ್ಯೇಯ ಹಾಗೂ ಉದ್ದೇಶವೇನು ಅನ್ನೋದನ್ನ ಜನರಿಗೆ ತಿಳಿಸಿದ್ದಾರೆ.

ಪ್ರತಿಯೊಂದು ಪಕ್ಷಕ್ಕೆ ತನ್ನದೆ ಆದ ಉದ್ದೇಶ ಮತ್ತು ನಿಲುವು ಇರಬೇಕಾಗುತ್ತೆ. ಉಪ್ಪಿ ರಾಜಕೀಯ ಪಕ್ಷ ಮಾಡ್ತಾರೆ ಅಂತ ಅನೌನ್ಸ್ ಆದಾಗ ಮಾಧ್ಯಮದವರು ನಿಮ್ಮ ಪಕ್ಷದ ಉದ್ದೇಶ ಮತ್ತು ಧ್ಯೇಯವನ್ನ ತಿಳಿಸಿ ಎಂದು ಪ್ರಶ್ನೆ ಮಾಡಿದ್ರು. ಎಲ್ಲವನ್ನು ಇನ್ನು ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದ ಉಪ್ಪಿ ಈಗ ಸಕಲ ತಯಾರಿ ಮಾಡಿಕೊಂಡು ಮತದಾರರ ಮುಂದೆ ಬರಲು ಸಜ್ಜಾಗಿದ್ದಾರೆ. ಮುಂದೆ ಓದಿರಿ....

ಎಲ್ಲರೂ ಕಾರ್ಯಕರ್ತರು

ಪ್ರಾರಂಭದಿಂದಲೂ ಹೇಳಿರುವಂತೆ ಕೆಪಿಜೆಪಿ ಪಕ್ಷದಲ್ಲಿ ಎಲ್ಲರೂ ಸಮಾನರು ಮತ್ತು ಪ್ರತಿಯೊಬ್ಬರೂ ಕಾರ್ಯಕರ್ತರು. ಪಕ್ಷದಲ್ಲಿ ಎಲ್ಲರೂ ಸಮಾಜದ ಬದಲಾವಣೆಗಾಗಿ ಕೆಲಸ ಮಾಡಬೇಕು. ಅಷ್ಟೇ ಅಲ್ಲದೆ ಯಾರದ್ದೇ ಪ್ರೇರಣೆ ಇಲ್ಲದೆ ಸ್ವಯಂ ಪ್ರೇರಿತರಾಗಿ ಕಾರ್ಯ ನಿರ್ವಹಿಸಬೇಕು ಅನ್ನೋದು ಉಪ್ಪಿ ಮಾತು.

ಸಲಹೆ ಸೂಚನೆಗಳಿಗೆ ಆಹ್ವಾನ

ರಿಯಲ್ ಸ್ಟಾರ್ ನಂತೆಯೇ ಅವರ ಉದ್ದೇಶವೂ ಪ್ಲಾನ್ ಆಗಿದೆ. ಯಾವುದೇ ಸಮಸ್ಯೆಯನ್ನ ನಾನೊಬ್ಬನೇ ಬಗೆಹರಿಸುತ್ತೇನೆ ಅನ್ನೋ ನಿರ್ಧಾರವನ್ನ ಮಾಡಬೇಡಿ. ಸಮಸ್ಯೆಯನ್ನ ಚರ್ಚಿಸಿ ಬಗೆಹರಿಸಿ. ಅದರ ಜೊತೆಗೆ ಎಲ್ಲರಿಂದಲೂ ಸಲಹೆ ಸೂಚನೆ ಪಡೆದುಕೊಳ್ಳಿ, ಸಲಹೆ ಪಡೆದುಕೊಳ್ಳಲು ಚಿಕ್ಕವರು ದೊಡ್ಡವರು ಅನ್ನೋ ಅಂತರ ಇಲ್ಲ ಎಂದಿದ್ದಾರೆ.

ಲಂಚ ಬೇಡ-ಎಲ್ಲಾ ಸ್ವಚ್ಛವಾಗಿರಲಿ

ಲಂಚ ನಿರ್ಮೂಲನ ಸಮಾಜ ಬೇಕು ಅಂತ ಪಟ್ಟು ಹಿಡಿದಿರುವ ಉಪ್ಪಿ ಅಂಡ್ ಟೀಂ ಯಾವುದೇ ಸರ್ಕಾರಿ ಕಛೇರಿಯಲ್ಲಿ ಲಂಚ ನೀಡೋದಕ್ಕೆ ಬಿಡೋದಿಲ್ವಂತೆ. ಮನೆ ಮನೆಗೆ ತಲುಪಿ ಮತದಾರರಿಗೆ ನಿಮ್ಮ ಅಭ್ಯರ್ಥಿ ಹೇಗಿರಬೇಕು ಅನ್ನೋ ಪಾಠ ಮಾಡ್ತಾರಂತೆ.

ಬೇರೆ ಪಕ್ಷಕ್ಕೆ ಡೋಂಟ್ ಕೇರ್

ಕೆಪಿಜೆಪಿ ಪಕ್ಷದ ಕಾರ್ಯಕರ್ತರಾದವರು ಯಾವುದೇ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳುವ ಹಾಗಿಲ್ವಂತೆ. ಜನರ ಬಳಿ ಮೊದಲಿಗೆ ನಂಬಿಕೆಯನ್ನ ಗಳಿಸಿಕೊಳ್ಳುವುದೇ ಮುಖ್ಯ ಉದ್ದೇಶವಾಗಿಟ್ಟುಕೊಳ್ಳಬೇಕಂತೆ. ಇನ್ನು ಬೇರೆ ಪಕ್ಷ ಏನ್ ಮಾಡ್ತಿದ್ದಾರೆ ಅನ್ನೋದನ್ನ ಬಿಟ್ಟು ನಾವ್ ಏನ್ ಮಾಡ್ಬೇಕು ಅನ್ನೋದನ್ನ ಯೋಚನೆ ಮಾಡಿ ಅಂತಿದ್ದಾರೆ ಉಪ್ಪಿ.

ಜನರ ಸೇವೆ, ದೇಶಸೇವೆಯೊಂದು ಕಾಯಕ

ಉಪ್ಪಿಯಂತೆ ಉಪ್ಪಿ ಪಾರ್ಟಿಯ ಧ್ಯೇಯ ಮತ್ತು ಉದ್ದೇಶಗಳು ಡಿಫರೆಂಟ್ ಆಗಿವೆ. ಇಷ್ಟು ವರ್ಷಗಳ ಕಾಲ ಎಲ್ಲಾ ರೀತಿಯ ರಾಜಕೀಯ ನೋಡಿರೋ ಉಪ್ಪಿ ಬದಲಾವಣೆಯನ್ನ ಬಯಸಿದ್ದಾರೆ. ಜನರು ಅವ್ರ ಜೊತೆ ಕೈ ಜೋಡಿಸಿದರೆ ಏನು ಬೇಕಾದರೂ ಸಾಧಿಸುತ್ತೇನೆ ಎನ್ನುವ ಧೈರ್ಯ ಮತ್ತು ಆತ್ಮ ಸ್ಥೈರ್ಯ ಅವರದ್ದು. ಎಲ್ಲರೂ ಒಟ್ಟಾಗಿ ಬನ್ನಿ ದೇಶ ಸೇವೆ ಮಾಡೋಣ ಅಂತ ಸಕಲ ತಯಾರಿ ಮಾಡಿಕೊಂಡಿರುವ ಉಪ್ಪಿ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಯ ಬಾಗಿಲಿಗೂ ಬಂದು ಮತಯಾಚನೆ ಮಾಡ್ತಾರೆ.

English summary
Upendra has released his party (KPJP) mission and purpose list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X