ಮಿಂಚಿನ ವೇಗದಲ್ಲಿ ಹೆಚ್ಚಾಗುತ್ತಿದೆ ಉಪೇಂದ್ರ ಫಾಲೋವರ್ಸ್ ಸಂಖ್ಯೆ
ನಟ ಉಪೇಂದ್ರ ಸಿನಿಮಾ ಬಿಟ್ಟು ಪ್ರಜಾಕೀಯ ಶುರು ಮಾಡಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಇದರಿಂದ ಉಪೇಂದ್ರ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗುತ್ತಿದೆ. ಉಪೇಂದ್ರ ಅವರ ಟ್ವಿಟ್ಟರ್ ಖಾತೆಯ ಫಾಲೋವರ್ಸ್ ಸಂಖ್ಯೆ ಮಿಂಚಿನ ವೇಗದಲ್ಲಿ ಹೆಚ್ಚಾಗುತ್ತಿದೆ.
ಉಪ್ಪಿ ಟ್ವಿಟ್ಟರ್ ಖಾತೆಯ ಫಾಲೋವರ್ಸ್ ಸಂಖ್ಯೆ ಈಗ 5 ಲಕ್ಷ ಗಡಿ ದಾಟಿದೆ. ಟ್ವಿಟ್ಟರ್ ನಲ್ಲಿ ಸದಾ ಸಕ್ರೀಯರಾಗಿರುವ ಉಪ್ಪಿ ಟ್ವಿಟ್ಟರ್ ನಲ್ಲಿ ತಮ್ಮ ಪ್ರಜಾಕೀಯದ ಯೋಜನೆಗಳು ಸೇರಿದಂತೆ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇದ್ದಾರೆ. ಇನ್ನು ತಮ್ಮ 'ಕೆಪಿಜೆಪಿ' ಪಕ್ಷ ಮುಖ್ಯವಾಗಿ ಸಾಮಾಜಿಕ ಜಾಲತಾಣದ ಮೂಲಕ ಚುನಾವಣೆ ಪ್ರಚಾರ ಮಾಡಲಿದೆ ಎಂದು ಹೇಳಿದ್ದ ಉಪ್ಪಿಗೆ ಜನ ಕೂಡ ಸಾಥ್ ನೀಡಿದ್ದಾರೆ.

ನಟ ಸುದೀಪ್ ಟ್ವಿಟ್ಟರ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಕನ್ನಡ ನಟರ ಪೈಕಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟನಾಗಿದ್ದಾರೆ. ಆದರೆ ಉಪೇಂದ್ರ ಅವರ ಫಾಲೋವರ್ಸ್ ಸಂಖ್ಯೆ ಕೂಡ ಇದೀಗ ಗಣನೀಯವಾಗಿ ಹೆಚ್ಚಾಗುತ್ತಿದೆ. ಉಳಿದಂತೆ ಸದ್ಯ ಉಪೇಂದ್ರ ಅನೇಕ ಜಿಲ್ಲೆಗಳಿಗೆ ಬೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ನೇರವಾಗಿ ಕೇಳುತ್ತಿದ್ದಾರೆ. ಅಲ್ಲದೆ 'ಕೆಪಿಜೆಪಿ' ಪಕ್ಷಕ್ಕೆ ಉಪೇಂದ್ರ ಆಟೋ ಚಿಹ್ನೆ ಯನ್ನು ಇಟ್ಟು ಕೊಂಡಿದ್ದಾರೆ.


Click it and Unblock the Notifications