ಉಸಿರಾಟದ ಸಮಸ್ಯೆ, ನಟ ಉಪೇಂದ್ರ ಆಸ್ಪತ್ರೆಗೆ ದಾಖಲು
ನಟ ಉಪೇಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದಲ್ಲಿ ತೊಂದರೆ ಕಂಡು ಬಂದಿದ್ದರಿಂದ ಅವರನ್ನು ಹಠಾತ್ತನೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಉಪೇಂದ್ರ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಉಪೇಂದ್ರ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇಲ್ಲ ಎನ್ನಲಾಗುತ್ತಿದೆ.
ಉಪೇಂದ್ರ ಅವರನ್ನು ನೆಲಮಂಗಲದ ಬಳಿಕ ಹರ್ಷಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಚಾಲ್ತಿಯಲ್ಲಿದೆ. ಅಭಿಮಾನಿಗಳು ಆತಂಕ ಪಡುವಂಥಹದ್ದೇನೂ ಆಗಿಲ್ಲ ಎನ್ನಲಾಗುತ್ತಿದೆ.

ಉಪೇಂದ್ರ ಅವರು ತಮ್ಮದೇ ನಿರ್ದೇಶನದ 'ಯುಐ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಸಿನಿಮಾದ ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಪೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಚಿತ್ರೀಕರಣದ ವೇಳೆ ಬಳಸಿದ ಧೂಳಿನಿಂದಾಗಿ ಡಸ್ಟ್ ಅಲರ್ಜಿ ಆಗಿ ಉಪೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
More from Filmibeat
English summary
Actor, director Upendra addmitted to Hospital. He encountered breating problem while shooting a fight sequens for his upcoming movie UI.


Click it and Unblock the Notifications











