For Quick Alerts
  ALLOW NOTIFICATIONS  
  For Daily Alerts

  ಸಾಯಿಪ್ರಕಾಶ್ ಆಕ್ಷನ್ ಕಟ್ ನಲ್ಲಿ ಉಪೇಂದ್ರ

  By Rajendra
  |
  ಇದೇ ಮೊಟ್ಟ ಮೊದಲ ಬಾರಿಗೆ ಸೆಂಟಿಮೆಂಟ್ ಚಿತ್ರಗಳಿಗೆ ಹೆಸರುವಾಸಿಯಾದ ಸಾಯಿಪ್ರಕಾಶ್ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಉಪೇಂದ್ರ ಅವರ ಜೊತೆ ಏನಾದರೂ ಸೆಂಟಿಮೆಂಟ್ ಚಿತ್ರ ಮಾಡುತ್ತಿದ್ದಾರೆಯೇ?

  ಹೌದು ಇದು ಅಣ್ಣ ತಂಗಿ ಹಾಗೂ ತಂದೆ ತಾಯಿ ಸಂಬಂಧಗಳ ಚಿತ್ರ. ತೆಲುಗಿನಲ್ಲಿ ಸೂಪರ್ ಹಿಟ್ ಆದ 'ಲಕ್ಷ್ಮಿ' ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡುತ್ತಿದ್ದಾರೆ ಸಾಯಿಪ್ರಕಾಶ್. ಮೂಲ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಅವರು ನಾಯಕನಟನಾಗಿ ಅಭಿನಯಿಸಿದ್ದರು.

  ಆದರೆ ಈಗಾಗಲೆ 'ಲಕ್ಷ್ಮಿ' ಹೆಸರಲ್ಲಿ ಶಿವರಾಜ್ ಕುಮಾರ್ ಚಿತ್ರ ಬಂದಿದೆ. ಹಾಗಾಗಿ ಚಿತ್ರದ ಹೆಸರನ್ನು 'ಗೌರಿ' ಎಂದಿಡಲಾಗುತ್ತಿದೆ ಎನ್ನುತ್ತವೆ ಮೂಲಗಳು. ಚಿತ್ರದಲ್ಲಿ ಉಪೇಂದ್ರ ಅವರ ಹೆಸರು ಗೌರಿಶಂಕರ್. ಅವರನ್ನು ಶಾರ್ಟ್ ಅಂಡ್ ಸ್ವೀಟ್ ಆಗಿ ಎಲ್ಲರೂ ಗೌರಿ ಎಂದು ಕರೆಯುತ್ತಾರೆ.ಐಂದ್ರಿತಾ ರೇ ಹಾಗೂ ಪರುಲ್ ಯಾದವ್ ಚಿತ್ರದ ನಾಯಕಿಯರು.

  ಸದ್ಯಕ್ಕೆ ಉಪೇಂದ್ರ ಅವರು 'ಬ್ರಹ್ಮ' ಹಾಗೂ 'ಬಸವಣ್ಣ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಎರಡೂ ಚಿತ್ರಗಳ ಬಳಿಕ ಅವರ 'ಗೌರಿ' ಚಿತ್ರ ಆರಂಭವಾಗಲಿದೆ. ಸಾಯಿಪ್ರಕಾಶ್ ಅವರೂ 'ಕಲಿಗಾಲ' ಎಂಬ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇದಕ್ಕೂ ಮುನ್ನ ಅವರು ಶಿವರಾಜ್ ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಚಿತ್ರವನ್ನು ಮಾಡಬೇಕಾಗಿದೆ. (ಏಜೆನ್ಸೀಸ್)

  English summary
  Sentiment films fame director Saiprakash all set to direct Real Star Upendra. Telugu film 'Lakshmi' to remade in Kannada as Gowri. Aindritha Ray and Parul Yadav are considered for the role of the heroines.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X