For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ, ಇಂದ್ರಜಿತ್ ಜುಗಲ್ಬಂದಿಯ ಕನ್ನಡ ಕಿಕ್

  |

  ರವಿತೇಜ ಹಾಗೂ ಇಲಿಯಾನಾ ಜೋಡಿಯ ಸೂಪರ್ ಹಿಟ್ ತೆಲುಗು ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಲು ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು ಪ್ರಯತ್ನಿಸಿ ಕೈಚೆಲ್ಲಿದ್ದಾರೆ. ನಿರ್ಮಾಪಕ ಎನ್ ಕುಮಾರ್ ಕೈಯಿಂದ ತಪ್ಪಿಸಿಕೊಂಡು ಮತ್ತೆ ಕುಮಾರ್ ಕೈಗೇ ಬಂದು, ಮತ್ತೆ ಅವರ ಕೈತಪ್ಪಿ ಗಾಡ್ ಫಾದರ್ ನಿರ್ಮಾಪಕ ಕೆ ಮಂಜು ಕೈಗೆ ಬಂದು ಕುಳಿತಿರುವ 'ಕಿಕ್' ಚಿತ್ರದ ಕಿಕ್ ಕತೆ ಓದಿ...

  ಕಿಕ್ ರಿಮೇಕ್‌ಗೆ ಕೈ ಹಾಕಿದ ಎನ್. ಕುಮಾರ್ ಅವರಿಗೆ ನಿರ್ದೇಶಕ ಪಿ ಎನ್ ಸತ್ಯ ಜೊತೆ ಜಗಳವಾಗಿ ಅವರಿಂದ ಸಮಸ್ಯೆಯಾಗಿ ಅವರು ಸೈಡ್ ಗೆ ಸರಿದರು ಎನ್ನಲಾಯಿತು. ನಂತರ ಬಂದವರು 'ಜಸ್ಟ್ ಮಾತ್ ಮಾತಲ್ಲಿ' ನಿರ್ಮಾಪಕ ಆರ್. ಶಂಕರ್. ಅವರಿಗೆ ಅದೇನಾಯ್ತೋ, ಅವರ ಹೆಸರೂ ಕಿಕ್ ನಿಂದ ದೂರವಾಯ್ತು! ಮತ್ತೆ ಕೆಸಿಎನ್ ಕುಮಾರ್, ಸುದೀಪ್ ನಟನೆ, ಚಿಂಗಾರಿ ಹರ್ಷ ನಿರ್ದೇಶನದಲ್ಲಿ ನಾನೇ ನಿರ್ಮಿಸುತ್ತೇನೆ ಎಂದಿದ್ದರು.

  ಆದರೆ ಈಗ ಅದು 'ಗಾಡ್‌ಫಾದರ್' ನಿರ್ಮಾಪಕ ಕೆ. ಮಂಜು ಅವರ ಕೈಸೇರಿದೆ. ಅವರಿಗೆ ರಿಮೇಕ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಮಂಜು 'ಗಾಡ್‌ಫಾದರ್' ಗೆದ್ದರೆ ಮಾತ್ರ 'ಕಿಕ್' ರಿಮೇಕ್ ಮಾಡುವ ಮೂಡಿನಲ್ಲಿದ್ದಾರೆ. ಇಲ್ಲದಿದ್ದರೆ ಇಲ್ಲ. ಸದ್ಯದ ಸುದ್ದಯ ಪ್ರಕಾರಮಂಜು ಕಿಕ್ ನಿರ್ಮಿಸಿದರೆ ನಿರ್ದೇಶಕರಾಗಿ ಇಂದ್ರಜಿತ್ ಲಂಕೇಶ್ ಹಾಗೂ ನಟರಾಗಿ ಉಪೇಂದ್ರ ಬರಲಿದ್ದಾರೆ. ಈ ಸುದ್ದಿಯೂ ಬದಲಾದರೆ ಆಶ್ಚರ್ಯವೇನೂ ಇಲ್ಲ. (ಒನ್ ಇಂಡಿಯಾ ಕನ್ನಡ)

  English summary
  According to the recent news, Super Star Upendra acts in Telugu Remake Kannada Movie 'Kick'. Indrajith Lankesh directs this and K Manju Produces this as upcoming movie after the release of God Father. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X