For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಶೂಟಿಂಗ್ ಸೆಟ್‌ನಲ್ಲಿ ನಟ ಉಪೇಂದ್ರ ತಲೆಗೆ ಪೆಟ್ಟು

  |

  'ಕಬ್ಜ' ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ನಟ ಉಪೇಂದ್ರಗೆ ಪೆಟ್ಟಾಗಿದೆ. ಆಕ್ಷನ್ ದೃಶ್ಯವೊಂದನ್ನು ಚಿತ್ರೀಕರಣ ಮಾಡುವಾಗ ರಾಡ್ ಒಂದು ಉಪೇಂದ್ರ ತಲೆಗೆ ಬಡಿದಿದೆ.

  ದೊಡ್ಡ ಅವಘಡದಿಂದ ಪಾರಾದ ರಿಯಲ್ ಸ್ಟಾರ್ ಉಪೇಂದ್ರ | Filmibeat Kannada

  ಮಿನರ್ವಾ ನಲ್ಲಿ ಕಳೆದ ಮೂವತ್ತು ದಿನಗಳಿಂದಲೂ 'ಕಬ್ಜ' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ದೃಶ್ಯದ ಚಿತ್ರೀಕರಣದ ವೇಳೆ, ಫೈಟರ್ ಒಬ್ಬ ಹಿಂದಿನಿಂದ ಉಪೇಂದ್ರ ಅವರ ಮೇಲೆ ರಾಡ್‌ನಿಂದ ಹಲ್ಲೆ ಮಾಡುವ ದೃಶ್ಯದ ಚಿತ್ರೀಕರಣ ಮಾಡುವ ವೇಳೆ, ಫೈಟರ್ ಬೀಸಿದ ರಾಡ್ ನೇರವಾಗಿ ಉಪೇಂದ್ರ ಅವರ ತಲೆಗೆ ತಗುಲಿದೆ. ರಾಡ್ ಹೊಡೆತ ಬಿದ್ದ ಕೂಡಲೇ ಉಪೇಂದ್ರ ಅವರು ನೋವಿನಿಂದ ಕೆಳಗೆ ಕುಸಿಯುವುದು ವಿಡಿಯೋದಲ್ಲಿ ಸೆರೆಯಾಗಿದೆ.

  ಘಟನೆ ಬಗ್ಗೆ ಮಾತನಾಡಿರುವ 'ಕಬ್ಜ' ಸಿನಿಮಾದ ನಿರ್ದೇಶಕ ಆರ್.ಚಂದ್ರು, 'ಉಪೇಂದ್ರ ಅವರಿಗೆ ಪೆಟ್ಟಾಗಿದ್ದು ನಿಜ ಆದರೆ ಕೆಲವೇ ಹೊತ್ತಿನಲ್ಲಿ ಅವರು ಚೇತರಿಸಿಕೊಂಡಿದ್ದಾರೆ. ಜೊತೆಗೆ ಮುಂದಿನ ಶಾಟ್‌ಗೆ ತಯಾರಾಗಿದ್ದಾರೆ' ಎಂದು ಹೇಳಿದ್ದಾರೆ.

  'ಮಿನರ್ವನಲ್ಲಿ ಕಳೆದ ಮೂವತ್ತು ದಿನದಿಂದ ಚಿತ್ರೀಕರಣದಲ್ಲಿದ್ದೇವೆ, ಇನ್ನೂ ಮುವತ್ತು ದಿನ ಇಲ್ಲಿಯೇ ಚಿತ್ರೀಕರಣ ಮಾಡಲಿದ್ದೇವೆ. ಒಟ್ಟು 40 ಸೆಟ್‌ಗಳಲ್ಲಿ ಇಲ್ಲಿ ಹಾಕಿದ್ದೇವೆ. ಈಗಾಗಲೇ 15 ಕ್ಕೂ ಹೆಚ್ಚು ಸೆಟ್‌ಗಳಲ್ಲಿ ಚಿತ್ರೀಕರಣ ಮುಗಿಸಿದ್ದೇವೆ' ಎಂದಿದ್ದಾರೆ ಚಂದ್ರು.

  'ಕಬ್ಜ' ಸಿನಿಮಾವು ದಶಕಗಳ ಹಿಂದಿನ ಕತೆಯಾಗಿದೆ. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಕತೆಯನ್ನು ಖ್ಯಾತ ಕತೆಗಾರ, ರಾಜಮೌಳಿ ಅವರ ತಂದೆ ವಿಜಯೇಂದ್ರ ಅವರು ತಿದ್ದಿ-ತೀಡಿ ಕೊಟ್ಟಿರುವುದು ವಿಶೇಷ. ಇದೇ ಸಿನಿಮಾದಲ್ಲಿ ಉಪೇಂದ್ರ ಸಹ ನಟಿಸುತ್ತಿರುವುದು ವಿಶೇಷ.

  English summary
  Actor Upendra injured during shoot of action scene in Minarva mill. He is shooting for movie Kabza. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X