»   » 'ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ನಡೆದ್ದೇನು? ಉಪೇಂದ್ರಗೆ ಏನಾಯ್ತು?

'ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ನಡೆದ್ದೇನು? ಉಪೇಂದ್ರಗೆ ಏನಾಯ್ತು?

Posted By:
Subscribe to Filmibeat Kannada

ಇದಕ್ಕೆ ಭಯ ಪಡಬೇಕೋ, ಮೂಢನಂಬಿಕೆ ಅಂತ ಅಸಡ್ಡೆ ಮಾಡಬೇಕೋ, ಇಲ್ಲಾ ಜಸ್ಟ್ ಆಕ್ಸಿಡೆಂಟ್ ಅಂತ ಸುಮ್ಮನಾಗಬೇಕೋ, ಗೊತ್ತಿಲ್ಲ. ಒಟ್ನಲ್ಲಿ, ನಟ ಉಪೇಂದ್ರ 'ಕಲ್ಪನಾ-2' ಚಿತ್ರದ ಚಿತ್ರೀಕರಣದಲ್ಲಿ ಎರಡೆರಡು ಬಾರಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

ಮೊನ್ನೆ ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ 'ಕಲ್ಪನಾ-2' ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಕಬಡ್ಡಿ ಪಂದ್ಯಾವಳಿ ಇರುವ ಹಾಡಿನ ಸನ್ನಿವೇಶ ಅದು. [ರಿಯಲ್ ಉಪ್ಪಿ ಅವರ ಹಾರರ್ ಚಿತ್ರದಲ್ಲಿ ನಾಡಗೀತೆ ಕಂಪು]

Upendra injured on the sets of Kannada Movie 'Kalpana-2'

ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ, ಕಬಡ್ಡಿ ಆಟ ಆಡುವ ಸಂಭ್ರಮದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡರು. ಉಪೇಂದ್ರ ರವರ ಎಡಗಾಲು ಉಳುಕಿತ್ತು. ತಕ್ಷಣ ಸ್ವಲ್ಪ ಹೊತ್ತು ಬ್ರೇಕ್ ತೆಗೆದುಕೊಂಡರು.

ನೋವು ಕೊಂಚ ಕಡಿಮೆ ಆಗುತ್ತಿದ್ದಂತೆ, ಶೂಟಿಂಗ್ ಗೆ ಅಡ್ಡಿ ಮಾಡಬಾರದೆಂಬ ಕಾರಣಕ್ಕೆ, ಎಡಗಾಲಿಗೆ ಕ್ರೇಪ್ ಬ್ಯಾಂಡ್ ಸುತ್ತಿಕೊಂಡು ಅದೇ ಹುಮ್ಮಸ್ಸಿನಲ್ಲಿ ಉಪ್ಪಿ ಹಾಜರಾದರು. [ಫೋಟೋ ಗ್ಯಾಲರಿ: ರಿಯಲ್ ಉಪ್ಪಿ 'ಕಲ್ಪನಾ 2' ಶೂಟಿಂಗ್ ಸ್ಟಿಲ್ಸ್]

ಇಂಥದ್ದೇ ಘಟನೆ, ಜನವರಿಯಲ್ಲೂ ನಡೆದಿತ್ತು. ಆಗಲೂ, ಉಪೇಂದ್ರ ರವರ ಕಾಲು ಉಳುಕಿತ್ತು. ಹೇಳಿ ಕೇಳಿ 'ಕಲ್ಪನಾ-2' ಹಾರರ್-ಥ್ರಿಲ್ಲರ್ ಸಿನಿಮಾ. 'ಕಾಂಚನಾ-2' ಚಿತ್ರದ ರೀಮೇಕ್ ಸಿನಿಮಾ. ದೆವ್ವ-ಭೂತ ಚಿತ್ರಗಳ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಅನಾಹುತ ಸಂಭವಿಸಿರುವ ಅದೆಷ್ಟೋ ಸುದ್ದಿಗಳನ್ನ ಕೇಳಿರುವ ಉಪ್ಪಿ ಅಭಿಮಾನಿಗಳು, ಈಗ ಈ ಸುದ್ದಿ ಕೇಳಿ ಕೊಂಚ ಮಂಕಾಗಿರುವುದಂತೂ ಸತ್ಯ.

ಅನಂತ್ ರಾಜು ನಿರ್ದೇಶನದ 'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್ ಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

'ಕಲ್ಪನಾ-2' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಉಪೇಂದ್ರ ಕಾಲಿಗೆ ಪೆಟ್ಟು

'ಕಲ್ಪನಾ-2' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಉಪೇಂದ್ರ ಕಾಲಿಗೆ ಪೆಟ್ಟು

ಕಬಡ್ಡಿ ಪಂದ್ಯಾವಳಿ ಸನ್ನಿವೇಶಕ್ಕೆ ತಯಾರಾಗುತ್ತಿರುವ ಉಪೇಂದ್ರ

ಕಬಡ್ಡಿ ಪಂದ್ಯಾವಳಿ ಸನ್ನಿವೇಶಕ್ಕೆ ತಯಾರಾಗುತ್ತಿರುವ ಉಪೇಂದ್ರ

'ಕಲ್ಪನಾ-2' ಚಿತ್ರದ ಹಾಡಿನ ಸನ್ನಿವೇಶದಲ್ಲಿ ಕಬಡ್ಡಿ ಪಂದ್ಯಾವಳಿ

'ಕಲ್ಪನಾ-2' ಚಿತ್ರದ ಹಾಡಿನ ಸನ್ನಿವೇಶದಲ್ಲಿ ಕಬಡ್ಡಿ ಪಂದ್ಯಾವಳಿ

ಮಲ್ಲೇಶ್ವರಂ ಆಟದ ಮೈದಾನದಲ್ಲಿ 'ಕಲ್ಪನಾ-2' ಹಾಡಿನ ಚಿತ್ರೀಕರಣ

ಮಲ್ಲೇಶ್ವರಂ ಆಟದ ಮೈದಾನದಲ್ಲಿ 'ಕಲ್ಪನಾ-2' ಹಾಡಿನ ಚಿತ್ರೀಕರಣ

ಕಬಡ್ಡಿ ಪಂದ್ಯಾವಳಿಯಲ್ಲಿ ತೊಡೆ ತಟ್ಟಿ ನಿಂತ ಉಪೇಂದ್ರ

ಕಬಡ್ಡಿ ಪಂದ್ಯಾವಳಿಯಲ್ಲಿ ತೊಡೆ ತಟ್ಟಿ ನಿಂತ ಉಪೇಂದ್ರ

ಕರ್ನಾಟಕ v/s ಬಿಹಾರ ಕಬಡ್ಡಿ ಪಂದ್ಯ

ಕರ್ನಾಟಕ v/s ಬಿಹಾರ ಕಬಡ್ಡಿ ಪಂದ್ಯ

ಕಬಡ್ಡಿ ಆಡಲು ಹೋಗಿ ಕಾಲು ಉಳುಕಿಸಿಕೊಂಡ ಉಪೇಂದ್ರ

ಕಬಡ್ಡಿ ಆಡಲು ಹೋಗಿ ಕಾಲು ಉಳುಕಿಸಿಕೊಂಡ ಉಪೇಂದ್ರ

'ಕಲ್ಪನಾ-2' ಚಿತ್ರದ ಮತ್ತೊಂದು ಹಾಡಿನ ಚಿತ್ರೀಕರಣ

'ಕಲ್ಪನಾ-2' ಚಿತ್ರದ ಮತ್ತೊಂದು ಹಾಡಿನ ಚಿತ್ರೀಕರಣ

ಒರಾಯಿನ್ ಮಾಲ್ ನಲ್ಲಿ 'ಕಲ್ಪನಾ-2' ಸಾಂಗ್ ಶೂಟಿಂಗ್

ಒರಾಯಿನ್ ಮಾಲ್ ನಲ್ಲಿ 'ಕಲ್ಪನಾ-2' ಸಾಂಗ್ ಶೂಟಿಂಗ್

ಕನ್ನಡ ಚಿತ್ರರಂಗದ ದಿಗ್ಗಜರ ಕಟೌಟ್ ಮುಂದೆ ಉಪ್ಪಿ ಡ್ಯಾನ್ಸ್

ಕನ್ನಡ ಚಿತ್ರರಂಗದ ದಿಗ್ಗಜರ ಕಟೌಟ್ ಮುಂದೆ ಉಪ್ಪಿ ಡ್ಯಾನ್ಸ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

ರಿಯಲ್ ಸ್ಟಾರ್ ಉಪೇಂದ್ರ ಜೊತೆ ಪ್ರಿಯಾಮಣಿ ಡ್ಯುಯೆಟ್

ರಿಯಲ್ ಸ್ಟಾರ್ ಉಪೇಂದ್ರ ಜೊತೆ ಪ್ರಿಯಾಮಣಿ ಡ್ಯುಯೆಟ್

ಅದ್ಧೂರಿ ಸೆಟ್ ನಲ್ಲಿ ಉಪ್ಪಿ-ಪ್ರಿಯಾಮಣಿ ಸ್ಟೆಪ್

ಅದ್ಧೂರಿ ಸೆಟ್ ನಲ್ಲಿ ಉಪ್ಪಿ-ಪ್ರಿಯಾಮಣಿ ಸ್ಟೆಪ್

ಉಪೇಂದ್ರ ಜೊತೆ ನಟಿ ಆವಂತಿಕಾ ಶೆಟ್ಟಿ ರೋಮ್ಯಾನ್ಸ್

ಉಪೇಂದ್ರ ಜೊತೆ ನಟಿ ಆವಂತಿಕಾ ಶೆಟ್ಟಿ ರೋಮ್ಯಾನ್ಸ್

'ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ಉಪೇಂದ್ರ

'ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಜೊತೆ ಪ್ರಿಯಾಮಣಿ ಡ್ಯುಯೆಟ್

ರಿಯಲ್ ಸ್ಟಾರ್ ಉಪೇಂದ್ರ ಜೊತೆ ಪ್ರಿಯಾಮಣಿ ಡ್ಯುಯೆಟ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

'ಕಲ್ಪನಾ-2' ಚಿತ್ರದ ಮೇಕಿಂಗ್ ಸ್ಟಿಲ್

English summary
Kannada Actor Upendra has sprained his ankle on the sets of 'Kalpana-2'. This is the second such incident that has happened during the shooting of the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada