For Quick Alerts
  ALLOW NOTIFICATIONS  
  For Daily Alerts

  ರೈತನಾದ ನಟ ಉಪೇಂದ್ರ: ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ ರಿಯಲ್ ಸ್ಟಾರ್

  |

  ಕಿಲ್ಲರ್ ಕೊರೊನಾ ವೈರಸ್ ಹಿನ್ನಲೆ ಭಾರತ ಲಾಕ್ ಡೌನ್ ಆಗಿದೆ. ಯಾರು ಸಹ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ. ರೈತರು ಹೊಲಗಳಲ್ಲಿ ಕೃಷಿ ಚಟುವಟಿಗಳನ್ನು ಮಾಡುತ್ತಿದ್ದಾರೆ. ಈ ಸಾಲಿಗೆ ಈಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸೇರಿಕೊಂಡಿದ್ದಾರೆ. ಲಾಕ್ ಡೌನ್ ನಲ್ಲಿ ಉಪ್ಪಿ ರೈತನಾಗಿ ಬದಲಾಗಿದ್ದಾರೆ.

  ಉಪೇಂದ್ರ ಮೈಸೂರು ರಸ್ತೆಯ ರಾಮೋಹಳ್ಳಿಯಲ್ಲಿಯ ಅವರ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಸಿನಿ ಸೆಲೆಬ್ರಿಟಿಗಳು ಈಗ ಮನೆಯಲ್ಲಿಯೆ ಇದ್ದು, ಕುಟುಂಬದ ಜೊತೆ ಕಾಲಕಳೆಯುತ್ತ, ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಆಗಾಗ ಅಭಿಮಾನಿಗಳ ಜೊತೆ ಮಾತುಕಥೆ ಮಾಡುತ್ತಿರುತ್ತಾರೆ. ಆದರೆ ರಿಯಲ್ ಸ್ಟಾರ್ ಮಾತ್ರ ರೈತನಾಗಿ ಹೊಲದಲ್ಲಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮುಂದೆ ಓದಿ...

  ಏನೆಲ್ಲ ಬೆಳೆಯುತ್ತಾರೆ ಉಪ್ಪಿ ಜಮೀನಿನಲ್ಲಿ

  ಏನೆಲ್ಲ ಬೆಳೆಯುತ್ತಾರೆ ಉಪ್ಪಿ ಜಮೀನಿನಲ್ಲಿ

  ಟೊಮ್ಯೊಟೋ, ಬಾಳೆ ಸೇರಿದಂತೆ ಇತರ ಬೆಳೆಗಳನ್ನು ಸಾವಯವ ಕೃಷಿ ಮಾದರಿಯಲ್ಲಿ ನಾಟಿ ಮಾಡಿದ್ದಾರೆ‌. ಇಷ್ಟೇ ಅಲ್ಲದೇ ತಮ್ಮ ಜಮೀನಿನಾದ್ಯಂತ ಹಲವು ಬಗೆಯ ಹಣ್ಣಿನ ಮರಗಳು, ನೆರಳು ನೀಡುವ ಮರಗಳನ್ನು ನೆಡುತಿದ್ದಾರೆ.

  ನೀರಿನ ಮಿತ ಬಳಕೆಯ ಬಗ್ಗೆ ಪ್ರಯೋಗ

  ನೀರಿನ ಮಿತ ಬಳಕೆಯ ಬಗ್ಗೆ ಪ್ರಯೋಗ

  ಕೃಷಿಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವಂತಹವ ಉಪೇಂದ್ರ ವೈಜ್ಞಾನಿಕವಾಗಿ ಹೇಗೆ ನೀರನ್ನು ಸಮರ್ಪಕವಾಗಿ ಬಳಸಬಹುದು, ಬೆಳೆಗಳಿಗೆ ನೀರಿನ ಮಿತಬಳಕೆ ಹೇಗೆ, ಅಂತರ್ಜಾಲದ ಮಟ್ಟವನ್ನು ಕೃಷಿಯ ಮೂಲಕ ಹೇಗೆ ಏರಿಕೆ ಮಾಡಬಹುದು, ಕೃಷಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಹೇಗೆ ಮಾಡಬಹುದು ಎಂದು ಪ್ರಯೋಗ ಸಹ ಮಾಡುತ್ತಿದ್ದಾರೆ.

  ಸಾವಯವ ಕೃಷಿ ಮಾಡುತ್ತಿರುವ ಉಪೇಂದ್ರ

  ಸಾವಯವ ಕೃಷಿ ಮಾಡುತ್ತಿರುವ ಉಪೇಂದ್ರ

  ಅಂತರ್ಜಲ ಮಟ್ಟವನ್ನು ಹೇಗೆ ಏರಿಕೆ ಮಾಡುವುದು, ಯಾವುದೇ ಕೆಮಿಕಲ್ ಗೊಬ್ಬರ ಬಳಸದೇ, ನೈಸರ್ಗಿಕವಾಗಿ ಹೇಗೆ ಕೃಷಿ ಮಾಡುವುದು ಎನ್ನುವುದನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡುತಿದ್ದಾರೆ. ಸದ್ಯ ಉಪೇಂದ್ರ ಮೆಣಸಿನ ಗಿಡಗಳನ್ನು ನೆಡುತ್ತಿದ್ದಾರೆ.

  ಪ್ರಜಾಕೀಯ ಮತ್ತು ಸಿನಿಮಾದಲ್ಲಿ ಬ್ಯುಸಿ

  ಕೆಲಸಗಾರರಿಗೆಲ್ಲ ರಜೆ ಕೊಟ್ಟಿರುವ ಉಪೇಂದ್ರ ಮನೆಯವರೊಂದಿಗೆ ಹಾಗೂ ಆತ್ಮೀಯ ಗೆಳೆಯರೊಂದಿಗೆ ಕೃಷಿ ಚಟುವಟಿಗಳನ್ನು ಮಾಡುತ್ತಿದ್ದಾರೆ. ಉಪೇಂದ್ರ ಸದ್ಯ ಪ್ರಜಾಕೀಯದ ಜೊತೆಗೆ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಉಪ್ಪಿ ಕಬ್ಜ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರು.

  English summary
  Real star Upendra working his farm amid lock down.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X