For Quick Alerts
  ALLOW NOTIFICATIONS  
  For Daily Alerts

  ಕಠಾರಿವೀರ ಕನ್ನಡದ 'ಅವತಾರ್' ಎಂದ ಉಪೇಂದ್ರ

  |

  ಬಹಳಷ್ಟು ವಿವಾದಗಳನ್ನು ಅನುಭವಿಸಿ, ಇನ್ನೂ ಕೆಲವು ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ನಾಳೆ (ಮೇ 10, 2012) ಬಿಡುಗಡೆಯಾಗುತ್ತಿದೆ ಸೂಪರ್ ಸ್ಟಾರ್ ಉಪೇಂದ್ರ ನಟನೆ ಹಾಗೂ ಮುನಿರತ್ನ ನಿರ್ಮಾಣದ 'ಕಠಾರಿವೀರ ಸುರಸುಂದರಾಂಗಿ'. ಕನ್ನಡದ ಮೊಟ್ಟಮೊದಲ ಸಂಪೂರ್ಣ '3D' ಚಿತ್ರ ಎಂಬ ಹೆಗ್ಗಳಿಕೆಯ ಕಠಾರಿವೀರ, '2D' ಆವೃತ್ತಿಯಲ್ಲಿಯೂ ಕೂಡ ಬಿಡುಗಡೆಯಾಗಲಿದೆ.

  "ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಇಷ್ಟೊಂದು ಅದ್ಧೂರಿ ಹಾಗೂ '3ಡಿ' ಸಿನಿಮಾ ಬರುತ್ತಿದೆ. ಹೀಗಾಗಿ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರ ಭಾರೀ ಕುತೂಹಲ ಮೂಡಿಸಿದೆ. ಪ್ರೇಕ್ಷಕರ ಬಹುನಿರೀಕ್ಷೆ ಸುಳ್ಳಾಗುವುದಿಲ್ಲ, ಇದು ಕನ್ನಡದ 'ಅವತಾರ್', ನೋಡಿ ಖುಷಿಪಡಿ" ಎಂದಿದ್ದಾರೆ ಉಪೇಂದ್ರ.

  ಅಷ್ಟೇ ಅಲ್ಲ, "ಹಾಲಿವುಡ್‌ನ 3ಡಿ ಸಿನಿಮಾಗಳಿಗಿಂತಲೂ 'ಕಠಾರಿ ವೀರ ಸುರಸುಂದರಾಂಗಿ' ಚೆನ್ನಾಗಿ ಮೂಡಿ ಬಂದಿದೆ. ಕಾರಣ, ಇದರಲ್ಲಿ ಕನ್ನಡದ ಸಿನಿಮಾ ನೆಟಿವಿಟಿ ಇದೆ. ಜೊತೆಗೆ ಇಲ್ಲಿ ಬರೀ ಗ್ರಾಫಿಕ್ಸ್ ಅಥವಾ ಪರಿಸರವನ್ನು ಮಾತ್ರ ತೋರಿಸಿಲ್ಲ. ಈ ಚಿತ್ರದಲ್ಲಿರುವ ಅದ್ದೂರಿ ಸೆಟ್ ಗಳು ಹಾಲಿವುಡ್ ಚಿತ್ರಗಳಲ್ಲಿ ಕಾಣಸಿಗುವುದಿಲ್ಲ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Super Star Upendra starer, Munirathna produced 3 D Movie 'Katari Veera Surasundarangi' releases tomorrow, on May 10 2012. This movie faced lot of problems and going to release with some problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X