Kabzaa Box Office Prediction: 'ಕಬ್ಜ' ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರವೇನು? ಏನಿದೆ ರಿಪೋರ್ಟ್?

By ಫಿಲ್ಮಿಬೀಟ್ ಡೆಸ್ಕ್

2023ರಲ್ಲಿ ರಿಲೀಸ್ ಆಗುತ್ತಿರುವ ಸ್ಯಾಂಡಲ್‌ವುಡ್‌ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'. ಈ ಸಿನಿಮಾ ನಾಳೆ(ಮಾರ್ಚ್ 17) ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಮೂವರು ದಿಗ್ಗಜರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದರಿಂದ 'ಕಬ್ಜ' ನಿರೀಕ್ಷೆ ದುಪ್ಪಟ್ಟಿದೆ. ಸ್ಯಾಂಡಲ್‌ವುಡ್‌ನ ಮೂವರು ಸೂಪರ್‌ಸ್ಟಾರ್‌ಗಳು ಬಾಕ್ಸಾಫೀಸ್‌ನಲ್ಲಿ ಹೇಗೆ ಮೋಡಿ ಮಾಡುತ್ತಾರೆ ಅನ್ನೋದನ್ನು ಭಾರತದ ಬೇರೆ ಬೇರೆ ಚಿತ್ರರಂಗವೇ ಎದುರು ನೋಡುತ್ತಿದೆ.

Upendra Kichcha Sudeep Shivarajkumar Starrer Kabzaa Day 1 Box Office Prediction Report

'ಕಬ್ಜ' ಸಿನಿಮಾ ಬಗ್ಗೆ ಹೇಗಿದೆ ಹವಾ?

'ಕಬ್ಜ' ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರೋದೇನೋ ನಿಜ. 'ಕೆಜಿಎಫ್ 2' ಸಿನಿಮಾದಂತೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಬಹುದಾ? ಅನ್ನೋ ಕುತೂಹಲವಿದೆ. 'ಕೆಜಿಎಫ್' ಸಿನಿಮಾವನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಆರ್‌.ಚಂದ್ರು ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಾರಾ? ಈ ಪ್ರಶ್ನೆಗೆ ಇನ್ನೊಂದು ದಿನದಲ್ಲಿ ಉತ್ತರ ಸಿಗಲಿದೆ.

ನಾಲ್ಕು ದಶಕಗಳ ಅಂಡರ್‌ವರ್ಲ್ಡ್ ಕಥೆಯನ್ನು ಅದ್ಧೂರಿಯಾಗಿ ತೆರೆಮೇಲೆ ತಂದಿದೆ. ಹೀಗಾಗಿ 'ಕಬ್ಜ' ತಂಡ ಮಲಯಾಳಂ ಬಿಟ್ಟು ಉಳಿದ ನಾಲ್ಕು ಭಾಷೆಗಳಲ್ಲೂ ಭರ್ಜರಿಯಾಗಿ ಪ್ರಚಾರ ಮಾಡಿದೆ. ಸದ್ಯಕ್ಕಿರೋ ಭಾರತದಲ್ಲಿ 'ಕಬ್ಜ'ಗಿರೋ ಕ್ರೇಜ್ ಹೇಗಿದೆ ಅನ್ನೋದು ಇನ್ನೊಂದು ದಿನದಲ್ಲಿ ರಿವೀಲ್ ಆಗಲಿದೆ. ಆದರೆ, ಅದಕ್ಕೂ ಮುನ್ನ 'ಕಬ್ಜ' ಪ್ಯಾನ್ ಇಂಡಿಯಾ ಲೆವ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಲೆಕ್ಕಾ ಹಾಕಿದ್ದಾರೆ.

Upendra Kichcha Sudeep Shivarajkumar Starrer Kabzaa Day 1 Box Office Prediction Report

'ಕಬ್ಜ' ಫಸ್ಟ್ ಡೇ ಕಲೆಕ್ಷನ್ ಲೆಕ್ಕಾಚಾರವೇನು?

ಸ್ಯಾಂಡಲ್‌ವಡ್‌ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ನಿರೀಕ್ಷೆಯಂತೂ ಇದೆ. ಈ ಕಾರಣಕ್ಕೆ ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು, ಸುಮಾರು 4 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ.

ವಿತರಕರ ವಲಯದಲ್ಲಿ 'ಕಬ್ಜ' ಬಗ್ಗೆ ಸದ್ಯಕ್ಕೆ ಪಾಸಿಟಿವ್ ಒಪಿನಿಯನ್ ಇದೆ. ಅಡ್ವಾನ್ಸ್ ಬುಕಿಂಗ್ ನಿರೀಕ್ಷೆ ಮಾಡದಷ್ಟು ಪ್ರತಿಕ್ರಿಯೆ ಬಾರದೇ ಹೋದರೂ, ಈಗ ಸಿಕ್ಕಿರೋ ರೆಸ್ಪಾನ್ಸ್ ಖುಷಿಕೊಟ್ಟಿದೆ. 'ಕಬ್ಜ' ದೊಡ್ಡ ಸಿನಿಮಾ ಆಗಿರೋದ್ರಿಂದ ಮೊದಲ ದಿನ ಭಾರತದಾದ್ಯಂತ ಸುಮಾರು 15 ರಿಂದ 20 ಕೋಟಿ ರೂ. ಕಲೆಕ್ಷನ್ ಆಗಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಲೆಕ್ಕಾಚಾರಗಳು ಹಾಕುತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ 10 ಕೋಟಿ ರೂ. ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ.

'ಕಬ್ಜ' ಬಾಕ್ಸಾಫೀಸ್ ಪ್ರಿಡಿಕ್ಷನ್ ಏನು?

ಕೇವಲ ಭಾರತದಲ್ಲಷ್ಟೇ ಅಲ್ಲ. 'ಕಬ್ಜ' ಸಿನಿಮಾ ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಹೀಗಾಗಿ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ವಿದೇಶದಲ್ಲಿಯೂ ಸಿನಿಮಾವನ್ನು ನೋಡಬಹುದಾಗಿದೆ. ಹೀಗಾಗಿ 'ಕಬ್ಜ' ಕಲೆಕ್ಷನ್ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಮೊದಲ ಮೂರು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 60 ರಿಂದ 70 ಕೋಟಿ ರೂ. ದಾಟಲೇ ಬೇಕು. ಅಲ್ಲದೆ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ದುಪ್ಪಟ್ಟಾಗುವ ನಿರೀಕ್ಷೆಯಿದೆ.

'ಕಬ್ಜ'ಗೆ ಮೊದಲ ದಿನವೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೆ. ಉಳಿದ ಎರಡು ದಿನ ಕಲೆಕ್ಷನ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹಾಗೇ ಮುಂದಿನ ವಾರ ಯುಗಾದಿ ಹಬ್ಬ ಇರುವುದರಿಂದ ಅಲ್ಲೂ ಒಂದೊಳ್ಳೆ ಕಲೆಕ್ಷನ್ ಆಗುವ ಸಾಧ್ಯತೆಯಿದೆ.

More from Filmibeat

English summary
Upendra Kichcha Sudeep Shivarajkumar Starrer Kabzaa Day 1 Box Office Prediction Report, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X