Kabzaa Advance Booking: ಬೆಂಗಳೂರು, ಹೈದರಾಬಾದ್, ಮುಂಬೈನಲ್ಲಿ ಟಿಕೆಟ್ ಬುಕಿಂಗ್ ಶುರು.. ಹೇಗಿದೆ ರೆಸ್ಪಾನ್ಸ್?
ಸ್ಯಾಂಡಲ್‌ವುಡ್ ಬತ್ತಳಿಕೆಯಿಂದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇನ್ನೇನು ನಾಲ್ಕು ದಿನ ಉಳಿದಿದೆ ಅನ್ನುವಾಗಲೇ ಚಿತ್ರತಂಡ ನಿಧಾನವಾಗಿ ಒಂದೊಂದು ಕಡೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಅನ್ನು ಓಪನ್ ಮಾಡಿದೆ.
ನಿನ್ನೆ(ಮಾರ್ಚ್ 12) ಸಂಜೆಯಿಂದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಕಾಂಬಿನೇಷನ್ 'ಕಬ್ಜ' ಸಿನಿಮಾಗೆ ಬುಕಿಂಗ್ ಓಪನ್ ಮಾಡಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಭಾರತದಾದ್ಯಂತ ಹಲವೆಡೆ ಮೊದಲ ಹಂತದಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವನ್ನು ನೀಡಲಾಗಿದೆ. ಬುಕ್ ಮೈ ಶೋನಲ್ಲಿ ಈಗಾಗಲೇ ಕಲವು ಚಿತ್ರಮಂದಿರಗಳಲ್ಲಿ ಬುಕಿಂಗ್ ಓಪನ್ ಆಗಿದೆ.

ಟಿಕೆಟ್ ಬುಕಿಂಗ್‌ಗೆ ಹೇಗಿದೆ ರೆಸ್ಪಾನ್ಸ್?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ನೋಡುವುದಕ್ಕೆ ಜನರು ಆಸಕ್ತಿ ತೋರಿಸಿದ್ದಾರೆ. ಟಿಕೆಟ್ ಬುಕಿಂಗ್ ಸೈಟ್‌ನಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೂವರೆಗೂ ಬುಕ್ ಮೈ ಶೋನಲ್ಲಿ ಈ 'ಕಬ್ಜ'ಗೆ ಸುಮಾರು 1 ಲಕ್ಷದ 90 ಸಾವಿರಕ್ಕೂ ಅಧಿಕ ಮಂದಿ ಸಿನಿಮಾ ನೋಡುವುದಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ ಅಡ್ವಾನ್ಸ್ ಬುಕಿಂಗ್ ಮೇಲೆ ವಿತರಕರು ಕಣ್ಣಿಟ್ಟಿದ್ದಾರೆ.
'ಕಬ್ಬ' ಸಿನಿಮಾಗೆ ನಿನ್ನೆ (ಮಾರ್ಚ್ 12) ಸಂಜೆಯಿಂದ ಅಡ್ವಾನ್ಸ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಬೆಂಗಳೂರು, ಮೈಸೂರು, ತುಮಕೂರು, ಹೈದರಾಬಾದ್, ವೈಜಾಗ್, ಮುಂಬೈ ಸೇರಿದಂತೆ ಹಲವೆಡೆ ಈಗತಾನೇ ಬುಕಿಂಗ್ ಓಪನ್ ಆಗಿದೆ. ಇದಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋದು ಇನ್ನು ನಾಲ್ಕು ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಬುಕಿಂಗ್?
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅನ್ನು ಒಂದೇ ಫ್ರೇಮ್‌ನಲ್ಲಿ ನೋಡುವುದಕ್ಕೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಬೆಂಗೂರಿನಲ್ಲಿ ಮೊದಲ ಹಂತದಲ್ಲಿ ಸುಮಾರು 11ಕ್ಕೂ ಹೆಚ್ಚು ಸ್ಕ್ರೀನ್‌ನಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ಇವುಗಳಲ್ಲಿ ಎರಡು ಸ್ಕ್ರೀನ್‌ಗಳು ಫಾಸ್ಟ್ ಫಿಲ್ಲಿಂಗ್ ಆಗುತ್ತಿವೆ. ಇನ್ನು ನಾಲ್ಕು ದಿನಗಳಲ್ಲಿ ಹಂತ ಹಂತವಾಗಿ ಥಿಯೇಟರ್‌ಗಳ ಸಂಖ್ಯೆ ಹೆಚ್ಚಾಗಲಿದೆ.
ಬೆಂಗಳೂರು ಜೊತೆ ಕರ್ನಾಟಕ ಪ್ರಮುಖ ನಗರಗಳಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಮೈಸೂರಿನಲ್ಲಿ ಎರಡು ಚಿತ್ರಮಂದಿರಗಳಲ್ಲಿ 'ಕಬ್ಜ' ಟಿಕೆಟ್ ನೀಡಲಾಗುತ್ತಿದೆ. ಡಿಆರ್‌ಸಿ ಥಿಯೇಟರ್‌ನಲ್ಲಿ ಈಗಾಗಲೇ ಎರಡು ಶೋಗಳು ಹೌಸ್‌ಫುಲ್ ಆಗುತ್ತಿವೆ. ಹಾಗೇ ರಾಜ್‌ಕಮಲ್‌ನಲ್ಲೂ ಬುಕಿಂಗ್ ಓಪನ್ ಮಾಡಲಾಗಿದೆ. ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲೂ ಬುಕಿಂಗ್ ಓಪನ್ ಇದೆ. ಆದರೆ, ಮಂಗಳೂರು ಸೇರಿದಂತೆ ಇನ್ನೂ ಹಲವೆಡೆ ಬುಕಿಂಗ್ ಓಪನ್ ಆಗಿಲ್ಲ.
ಪರಭಾಷೆಯಲ್ಲೂ ಬುಕಿಂಗ್ ಓಪನ್ ಆಗಿದ್ಯಾ?
'ಕಬ್ಜ' ಸಿನಿಮಾ ಪರಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಹೈದರಾಬಾದ್‌ನಲ್ಲಿ 5 ಸ್ಕ್ರೀನ್ ಹಾಗೂ ವೈಜಾಗ್‌ನಲ್ಲಿ 1 ಸ್ಕ್ರೀನ್‌ನಲ್ಲಿ ಟಿಕೆಟ್ ವಿತರಣೆ ಮಾಡುವುದಕ್ಕೆ ಆರಂಭ ಮಾಡಲಾಗಿದೆ. ಆದೇ ತಮಿಳುನಾಡಿನಲ್ಲಿ ಇನ್ನೂ ಬುಕಿಂಗ್ ಓಪನ್ ಆಗಬೇಕಿದೆ. ಕೇರಳದಲ್ಲಿ ಇಂದಿನಿಂದ (ಮಾರ್ಚ್ 13) ಅಡ್ವಾನ್ಸ್ ಬುಕಿಂಗ್ ಓಪನ್ ಆಗುತ್ತಿದೆ. ಹಾಗೇ ಮುಂಬೈನಲ್ಲಿ ಒಂದು ಚಿತ್ರಮಂದಿರ ಟಿಕೆಟ್ ಓಪನ್ ಮಾಡಲಾಗಿದೆ. ಬಹುಶ: ಇನ್ನು ಎರಡು ದಿನಗಳ ಒಳಗೆ ಎಲ್ಲಾ ಭಾಷೆಯಲ್ಲೂ ಕಂಪ್ಲೀಟ್ ಆಗಿ ಬುಕಿಂಗ್ ಓಪನ್ ಆಗುವ ಸಾಧ್ಯತೆಯಿದೆ.
ನಿರ್ದೇಶಕ ಆರ್ ಚಂದ್ರ, ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶ್ರಿಯಾ ಶರಣ್ ನಾಲ್ಕು ಮಂದಿಗೆ ಪ್ಯಾನ್ ಇಂಡಿಯಾ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಪರಭಾಷೆಯಲ್ಲಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಿಡುಗಡೆಗೆ ಅಂತಿಮ ತಯಾರಿ ಮಾಡಿಕೊಳ್ಳಲಾಗುತ್ತೆ.


Click it and Unblock the Notifications











