Kabzaa Advance Booking: ಈ ನಗರದಿಂದಲೇ 'ಕಬ್ಜ' ಟಿಕೆಟ್ ಬುಕಿಂಗ್ ಆರಂಭ.. ಉಳಿದೆಡೆ ಯಾವಾಗ?

By ಫಿಲ್ಮಿಬೀಟ್ ಡೆಸ್ಕ್

ಯಶ್ ಆಯ್ತು.. ಕಿಚ್ಚ ಸುದೀಪ್ ಆಯ್ತು.. ರಕ್ಷಿತ್ ಶೆಟ್ಟಿ ಆಯ್ತು.. ರಿಷಬ್ ಶೆಟ್ಟಿ ಆಯ್ತು.. ಈಗ ರಿಯಲ್ ಸ್ಟಾರ್ ಉಪೇಂದ್ರ. 'ಕಬ್ಜ' ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಈಗಾಗಲೇ ಮುಂಬೈನಲ್ಲಿ ಉಪ್ಪಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಆ ಮಟ್ಟಿಗೆ 'ಕಬ್ಜ' ಟ್ರೈಲರ್ ಸೆನ್ಸೇಷನ್ ಹುಟ್ಟಾಕಿದೆ.

'ಕಬ್ಜ' ರಿಲೀಸ್‌ಗೆ ಇನ್ನು ಸರಿಯಾಗಿ ಏಳು ದಿನಗಳು ಬಾಕಿ ಉಳಿದಿವೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಈ ಸಿನಿಮಾ ರಿಲೀಸ್ ಮಾಡಲಿದೆ ಚಿತ್ರತಂಡ. ಹೀಗಾಗಿ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಯಾವಾಗ ಶುರುವಾಗುತ್ತೆ ಅನ್ನೋ ಕುತೂಹಲವಿತ್ತು. ನಿನ್ನೆ(ಮಾರ್ಚ್ 9) ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಡ್ವಾನ್ಸ್ ಬುಕಿಂಗ್ ಬಗ್ಗೆ ಸುಳಿವು ನೀಡಲಾಗಿತ್ತು.

Upendra Kichcha Sudeep Started Kabzaa Movie Advance Ticket Booking Started In Hyderabad

ಹೈದರಾಬಾದ್‌ನಲ್ಲಿ ಟಿಕೆಟ್ ಬುಕಿಂಗ್ ಓಪನ್

'ಕಬ್ಜ' ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಒಂದು ವಾರ ಮುನ್ನವೇ ಅಡ್ವಾನ್ಸ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಬೆಂಗಳೂರಿನಲ್ಲಿ ಮೊದಲು ಟಿಕೆಟ್ ಬುಕಿಂಗ್ ಆರಂಭ ಆಗುತ್ತೆ ಅಂತ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ರೇಸ್‌ನಲ್ಲೀಗ ಹೈದರಾಬಾದ್ ಮುಂದಿದೆ.

ಮಾರ್ಚ್ 10ರಂದು ಹೈದರಾಬಾದ್‌ನ ಒಂದು ಥಿಯೇಟರ್ ಬುಕಿಂಗ್ ಓಪನ್ ಮಾಡಿದೆ. ಕುಕಟ್‌ಪಲ್ಲಿಯ ವಿಶ್ವನಾಥ 70 ಎಂ ಎಂ ಥಿಯೇಟರ್‌ನಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಸದ್ಯಕ್ಕೆ ಮಾರ್ಚ್ 17ರಂದು ನಾಲ್ಕು ಶೋಗಳನ್ನು ಓಪನ್ ಮಾಡಲಾಗಿತ್ತು. ಟಿಕೆಟ್ ಬುಕಿಂಗ್ ಪಾಸಿಟಿವ್ ಆಗಿದೆ. ನಾಳೆ(ಮಾರ್ಚ್ 11)ಯಿಂದ ಒಂದೊಂದೇ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Upendra Kichcha Sudeep Started Kabzaa Movie Advance Ticket Booking Started In Hyderabad

ಕರ್ನಾಟಕ, ಹಿಂದಿ ಬೆಲ್ಟ್‌ಗಳಲ್ಲಿ ಬುಕಿಂಗ್ ಯಾವಾಗ?

ಮುಂಬೈನಲ್ಲಿ ನೀಡಿದ ಸುಳಿವಿನ ಪ್ರಕಾರ, 'ಕಬ್ಜ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇಂದಿನಿಂದ (ಮಾರ್ಚ್ 10) ಆರಂಭ ಆಗಬೇಕಿತ್ತು. ಆದರೆ, ಒಂದು ತಡವಾಗಿ ಆರಂಭ ಆಗಲಿದೆ ಎನ್ನಲಾಗುತ್ತಿದೆ. ನಾಳೆಯಿಂದ ಹಿಂದಿ ಬೆಲ್ಟ್‌ಗಳಲ್ಲಿ ಟಿಕೆಟ್ ಬುಕಿಂಗ್‌ಗೆ ಅವಕಾಶ ನೀಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ತಮಿಳುನಾಡು ಹಾಗೂ ಆಂಧ್ರ, ತೆಲಂಗಾಣದಲ್ಲಿ ಟಿಕೆಟ್ ಬುಕಿಂಗ್ ಸಂಪೂರ್ಣವಾಗಿ ಓಪನ್ ಆದ ಬಳಿಕ ಸಿನಿಮಾಗಿರೋ ಕ್ರೇಜ್ ಎಷ್ಟು ಅನ್ನೋದು ಗೊತ್ತಾಗಲಿದೆ. ಕರ್ನಾಟಕದಲ್ಲಂತೂ 'ಕಬ್ಜ' ಹೌಸ್‌ಫುಲ್ ಆಗೇ ಆಗುತ್ತೆ. ಹಾಗಾಗಿ ಇಲ್ಲಿ ಬುಕಿಂಗ್ ಬಗ್ಗೆ ಹೆಚ್ಚು ಚಿತ್ರತಂಡ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಎಲ್ಲೆಲ್ಲಿ? ಯಾವಾಗ? ಸಂಪೂರ್ಣವಾಗಿ ಟಿಕೆಟ್ ಬುಕಿಂಗ್ ಓಪನ್ ಆಗುತ್ತೆ ಅನ್ನೋ ವಿಚಾರದ ಬಗ್ಗೆ ಇನ್ನೊಂದು ದಿನದಲ್ಲಿ ಸ್ಪಷ್ಟತೆ ಸಿಗಲಿದೆ.

ಎಷ್ಟು ಥಿಯೇಟರ್‌ಗಳಲ್ಲಿ 'ಕಬ್ಜ' ರಿಲೀಸ್?

ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಮೂವರು ದಿಗ್ಗಜರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರೋದ್ರಿಂದ ಕ್ರೇಜ್ ಹೆಚ್ಚಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಎಲ್ಲಾ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, 'ಕಬ್ಜ' ಸಿನಿಮಾ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

'ಕಬ್ಜ' ಕೇವಲ ಭಾರತದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಹಿಂದಿ,ತೆಲುಗು ಹಾಗೂ ಕನ್ನಡದಲ್ಲಿ ರಿಲೀಸ್ ಆಗೋದು ಖಾತ್ರಿಯಾಗಿದೆ. ಅಲ್ಲದೇ ವಿದೇಶದ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೊದಲ ದಿನ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಎಲ್ಲದಕ್ಕೂ ಅಡ್ವಾನ್ಸ್ ಬುಕಿಂಗ್‌ಗೆ ಸಿಗುವ ಪ್ರತಿಕ್ರಿಯೆ ಮೇಲೆ ಎಲ್ಲಾ ನಿರ್ಧಾರ ಆಗಿದೆ.

More from Filmibeat

English summary
Upendra, Kichcha Sudeep Started Kabzaa Movie Advance Ticket Booking Started In Hyderabad, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X