ವಿಡಿಯೋ : ಉಪೇಂದ್ರ ಹುಟ್ಟುಹಬ್ಬಕ್ಕೆ ಉದಯವಾಯ್ತು UPP ಪಕ್ಷ
''ಸೋತೆ ಎಂದು ಕುಗ್ಗುವುದಿಲ್ಲ. ನಾನು ಒಂದು ಹೆಜ್ಜೆ ಇಟ್ಟಿದ್ದೇನೆ. ಇದೇ ನನ್ನ ಗೆಲುವು. ಪ್ರಜಾಕೀಯ ವ್ಯವಸ್ಥೆ ಒಂದಲ್ಲ ಒಂದು ದಿನ ಬರುತ್ತದೆ ಎಂಬ ನಂಬಿಕೆ ನನಗೆ ಇದೆ'' ಹೀಗೆ ಹೇಳುತ್ತ ನಟ ಉಪೇಂದ್ರ ತಮ್ಮ ಹೊಸ ಪಕ್ಷ UPP (ಉತ್ತಮ ಪ್ರಜಾಕೀಯ ಪಾರ್ಟಿ) ಯನ್ನು ಇಂದು ಲೋಕಾರ್ಪಣೆ ಮಾಡಿದ್ದಾರೆ.
ಉಪೇಂದ್ರ ಸಮಾಜದಲ್ಲಿ ರಾಜಕೀಯ ಬಿಟ್ಟು ಪ್ರಜಾಕೀಯ ಕಲ್ಪನೆ ಬರಬೇಕು ಎಂಬ ದೃಷ್ಟಿಯಿಂದ ಕೆಪಿಜೆಪಿ ಪಕ್ಷವನ್ನು ಕಟ್ಟಿದ್ದರು. ಆ ಪಕ್ಷದಲ್ಲಿ ಆದ ಭಿನ್ನಭಿಪ್ರಾಯಗಳ ಬಳಿಕ ದೂರವಾಗಿದ್ದ ಉಪೇಂದ್ರ ತಮ್ಮದೆ ಹೊಸ ಪಕ್ಷವನ್ನು ಶುರು ಮಾಡಿದ್ದರು.

ಕೆಲವು ತಿಂಗಳ ಹಿಂದೆ ಉತ್ತಮ ಪ್ರಜಾಕೀಯ ಪಾರ್ಟಿವನ್ನು ರಿಜೆಸ್ಟರ್ ಮಾಡಿಸಿದ್ದ ಉಪ್ಪಿ ಇಂದು ಅದನ್ನು ಲಾಂಚ್ ಮಾಡಿದ್ದಾರೆ. ಇಂದು ಬೆಂಗಳೂರಿನ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಪಕ್ಷಕ್ಕೆ ಚಾಲನೆ ನೀಡಿದ್ದಾರೆ.
ಅಂದಹಾಗೆ, ತಮ್ಮ ಉತ್ತಮ ಪ್ರಜಾಕೀಯ ಪಾರ್ಟಿಯ ಉದ್ದೇಶ, ಅದರ ಮುಂದಿನ ಯೋಜನೆಗಳು ಹಾಗೂ ಎಪಿ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ.

ಉತ್ತಮ ಪ್ರಜಾಕೀಯ ಪಾರ್ಟಿ' ಉದ್ಘಾಟನೆಯ ಕಾರ್ಯಕ್ರಮ ವಿಡಿಯೋ ಇಲ್ಲಿದೆ ವೀಕ್ಷಿಸಿ..


Click it and Unblock the Notifications











