For Quick Alerts
  ALLOW NOTIFICATIONS  
  For Daily Alerts

  ಹೊಸ ಕಲಾವಿದರ ಬೆನ್ನಿಗೆ ನಿಂತ ರಿಯಲ್ ಸ್ಟಾರ್

  By Pavithra
  |

  ರಿಯಲ್ ಸ್ಟಾರ್ ಉಪ್ಪಿ ತಾನಾಯ್ತು ತನ್ನ ಕೆಲಸವಾಯ್ತು ಎಂದು ಇದ್ದಂತ ನಿರ್ದೇಶಕ ಹಾಗೂ ನಟ. ಆದ್ರೆ 'ಪ್ರಜಾಕೀಯ' ಶುರು ಮಾಡಿದ ನಂತರ ಉಪ್ಪಿ ಜನರ ಜೊತೆಯಲ್ಲಿ ಬೆರೆಯುವುದಕ್ಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾರಂಗದವರ ಜೊತೆಯಲ್ಲಿಯೂ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದಾರೆ.

  ವಿಭಿನ್ನ ನಿರ್ದೇಶಕ ಎಂದು ಹೆಸರು ಗಳಿಸಿರುವ ರಿಯಲ್ ಸ್ಟಾರ್ ಸ್ಪೆಷಲ್ ಎನ್ನಿಸುವ ಚಿತ್ರಗಳನ್ನ ನೋಡುವುದು ಹಾಗೂ ಅವರುಗಳನ್ನ ಕರೆದು ಅಭಿನಂದಿಸುವುದು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. 'ಪ್ರಜಾಕೀಯ' ಜೊತೆಯಲ್ಲಿ ಸಿನಿಮಾರಂಗದಲ್ಲಿಯೂ ತೊಡಗಿಸಿಕೊಂಡಿರುವ ಉಪೇಂದ್ರ ಹೊಸ ತಂತ್ರಜ್ಞರು ಹಾಗೂ ಕಲಾವಿದರ ಬೆನ್ನಿಗೆ ನಿಂತಿದ್ದಾರೆ.

  ಈ ದಿನ ಸಿನಿತಾರೆಯರ ಟ್ವಿಟ್ಟರ್ ಲೋಕದಲ್ಲಿ ಏನೆಲ್ಲಾ ಆಗಿದೆಈ ದಿನ ಸಿನಿತಾರೆಯರ ಟ್ವಿಟ್ಟರ್ ಲೋಕದಲ್ಲಿ ಏನೆಲ್ಲಾ ಆಗಿದೆ

  ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ಸಿನಿಮಾಗಳ ಪ್ರಚಾರಕ್ಕೆ ರಿಯಲ್ ಸ್ಟಾರ್ ಕೈ ಜೋಡಿಸಿದ್ದಾರೆ. ಹಾಗಾದರೆ ಉಪ್ಪಿ ಸಪೋರ್ಟ್ ಮಾಡುತ್ತಿರುವ ಆ ಸಿನಿಮಾಗಳು ಯಾವುದು? ಚಿತ್ರದ ಬಗ್ಗೆ ಉಪ್ಪಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

  ಅಥರ್ವ ಚಿತ್ರಕ್ಕೆ ಉಪ್ಪಿ ಅಭಿನಂದನೆ

  ಅಥರ್ವ ಚಿತ್ರಕ್ಕೆ ಉಪ್ಪಿ ಅಭಿನಂದನೆ

  'ಅಥರ್ವ'.. ಪವನ್ ತೇಜ್ ಅಭಿನಯದ ಚೊಚ್ಚಲ ಸಿನಿಮಾ. ಅರುಣ್ ಚಿತ್ರವನ್ನ ನಿರ್ದೇಶನ ಮಾಡಿದ್ದು ವಿನಯ್ ಕುಮಾರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಸನಂ ಶೆಟ್ಟಿ ನಾಯಕಿಯಾಗಿ ನಟಿಸಿರುವ 'ಅಥರ್ವ' ಚಿತ್ರದ ಟ್ರೇಲರ್ ವೈರಲ್ ಆಗಿದೆ. ಸಿನಿಮಾ ಟೀಸರ್ ಮತ್ತು ಟ್ರೇಲರ್ ನೋಡಿದ ರಿಯಲ್ ಸ್ಟಾರ್ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

  'ಫೇಸ್ ಟು ಫೇಸ್' ಜೊತೆ ಉಪ್ಪಿ

  'ಫೇಸ್ ಟು ಫೇಸ್' ಜೊತೆ ಉಪ್ಪಿ

  ದಿವ್ಯ ಉರುಡುಗ ಹಾಗೂ ರೋಹಿತ್ ಭಾನು ಪ್ರಕಾಶ್ ಅಭಿನಯದ 'ಫೇಸ್ ಟು ಫೇಸ್' ಚಿತ್ರತಂಡ ಕೂಡ ಇತ್ತೀಚಿಗಷ್ಟೆ ರಿಯಲ್ ಸ್ಟಾರ್ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಟೀಸರ್ ಮತ್ತು ಹಾಡನ್ನು ತೋರಿಸಿದೆ. ಹೊಸಬರ ಪ್ರಯೋಗವನ್ನು ಮೆಚ್ಚಿರುವ ಉಪ್ಪಿ ಆದಷ್ಟು ಬೇಗ ಚಿತ್ರವನ್ನು ತೋರಿಸುವಂತೆ ತಿಳಿಸಿದ್ದಾರೆ.

  'ಆದಿ ಪುರಾಣ' ಕೇಳಿದ ರಿಯಲ್ ಸ್ಟಾರ್

  'ಆದಿ ಪುರಾಣ' ಕೇಳಿದ ರಿಯಲ್ ಸ್ಟಾರ್

  ನವ ನಾಯಕ ಶಶಾಂಕ್ ಅಭಿನಯದ ಮೋಹನ್ ಕಾಮಾಕ್ಷಿ ನಿರ್ದೇಶನದ 'ಆದಿ ಪುರಾಣ' ಚಿತ್ರದ ಟ್ರೇಲರ್ ನೋಡಿ ನಿರ್ದೇಶಕ ಉಪ್ಪಿ ಆಲ್ ದ ಬೆಸ್ಟ್ ಹೇಳಿದ್ದಾರೆ. ಚಿತ್ರ ಯಶಸ್ವಿ ಆಗಲಿ ಅಂತ ಶುಭಕೋರಿದ್ದಾರೆ.

  ಉಪ್ಪಿ ಮೂಲಕ ಪ್ರಚಾರ

  ಉಪ್ಪಿ ಮೂಲಕ ಪ್ರಚಾರ

  ಕನ್ನಡ ಸಿನಿಮಾರಂಗಕ್ಕೆ ಬರುತ್ತಿರುವ ಹೊಸ ಕಲಾವಿದರು, ತಂತ್ರಜ್ಙರು ಆರಂಭದಲ್ಲೇ ಚಿತ್ರರಂಗದಲ್ಲಿ ಬುದ್ದಿವಂತ ಎಂದು ಹೆಸರು ಗಳಿಸಿರುವ ರಿಯಲ್ ಸ್ಟಾರ್ ಅನ್ನು ಭೇಟಿ ಮಾಡುತ್ತಿರುವುದು ವಿಶೇಷ.

  English summary
  kannada actor Upendra liked kannada films Adi Purana, Atharva and Face to Face Trailers . Adi Purana, Atharva and Face to Face these are newcomers films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X