ಪತ್ನಿಯ ಸಿನಿಮಾ ನೋಡಿ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದು ಹೀಗೆ
Recommended Video
ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅಭಿನಯದ ದೇವಕಿ ಸಿನಿಮಾ ಸದ್ಯ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ಇದೆ ತಿಂಗಳು 5ಕ್ಕೆ ಅಂದ್ರೆ ನಾಳೆ ಚಿತ್ರ ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ. ಟೀಸರ್ ಮತ್ತು ಟ್ರೈಲರ್ ಗಳ ಮೂಲಕ ಸದ್ದು ಮಾಡುತ್ತಿರುವ ದೇವಕಿ ಸಿನಿಮಾ ಚಿತ್ರಾಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ಇತ್ತೀಚಿಗಷ್ಟೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಯಾಂಡಲ್ ವುಡ್ ನ ಅನೇಕ ಸೆಲೆಬ್ರೆಟಿಗಳು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅಭಿನಯ ಮತ್ತು ಲೋಹಿತ್ ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಪತ್ನಿಯ ಸಿನಿಮಾ ನೋಡಿ ರಿಯಲ್ ಸ್ಟಾರ್ ಕೂಡ ಹಾಡಿ ಹೊಗಳಿದ್ದಾರೆ.
"ದೇವಕಿ ಚಿತ್ರ ನೋಡಿದೆ, ಅದ್ಭುತವಾಗಿದೆ. ಇದೇ ತಿಂಗಳು 5 ನೇ ತಾರೀಖು ಬಿಡುಗಡೆ ಆಗುತ್ತಿರುವ ಈ ಚಿತ್ರ ನೀವೆಲ್ಲರೂ ಖಂಡಿತ ನೋಡಲೇಬೇಕು. ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು" ಎಂದು ಹೇಳುತ್ತ ಎಲ್ಲರು ನೋಡಲೆ ಬೇಕಾದ ಸಿನಿಮಾ ಎಂದು ಅಭಿಮಾನಿಗಳಿಗೆ ಸಿನಿಮಾ ನೋಡುವಂತೆ ಕೇಳಿಕೊಂಡಿದ್ದಾರೆ.

ಅಂದ್ಹಾಗೆ ದೇವಕಿ ಸಿನಿಮಾಗೆ 'ಮಮ್ಮಿ' ಖ್ಯಾತಿಯ ನಿರ್ದೇಶಕ ಲೋಹಿತ್ ಅಕ್ಷನ್ ಕಟ್ ಹೇಳಿದ್ದಾರೆ. 'ದೇವಕಿ' ಮೂಲಕ ಎರಡನೆ ಬಾರಿ ಪ್ರಿಯಾಂಕಾ ಮತ್ತು ಲೋಹಿತ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ನೋಬಿನ್ ಪೌಲ್ ಸಂಗೀತ, ಹೆಚ್ ಸಿ ವೇಣು ಕ್ಯಾಮರಾ ಸಿನಿಮಾಗೆ ಬಲ ತುಂಬಿದೆ. ಮದನ್ ಬೆಳ್ಳಿಸಾಲು ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ.


Click it and Unblock the Notifications











