»   » ಉಪೇಂದ್ರ 'ಮಹಾ ಕನಸಿನ' ಬಗ್ಗೆ ನಟ ಯಶ್ ಮಾಡಿದ ಕಾಮೆಂಟ್ ಇದು.!

ಉಪೇಂದ್ರ 'ಮಹಾ ಕನಸಿನ' ಬಗ್ಗೆ ನಟ ಯಶ್ ಮಾಡಿದ ಕಾಮೆಂಟ್ ಇದು.!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ 'ರಾಜಕೀಯ'ಕ್ಕೆ ಧುಮುಕುವ ಮನಸ್ಸು ಮಾಡಿದ್ದಾರೆ. 'ಪ್ರಜಾಪ್ರಭುತ್ವ'ವನ್ನ ಎತ್ತಿಹಿಡಿಯಲು 'ಪ್ರಜಾಕೀಯ'ದ ದಾರಿ ಅನುಸರಿಸಿರುವ ಉಪೇಂದ್ರ, ಪ್ರಜೆಗಳನ್ನ 'ಮಹಾಪ್ರಭು' ಸ್ಥಾನದಲ್ಲಿ ಕೂರಿಸಿ, 'ಪ್ರಜಾನೀತಿ' ಬಗ್ಗೆ ಮಾತನಾಡಿದ್ದಾರೆ.

ಸಮಾಜದ ವ್ಯವಸ್ಥೆಯನ್ನ ಬದಲಾಯಿಸುವ 'ಮಹಾ ಕನಸನ್ನು' ಹೊತ್ತಿರುವ ಉಪೇಂದ್ರ ರವರ ನಡೆ ಬಗ್ಗೆ ರಾಜಕೀಯ ರಂಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರಬಹುದು. ಉಪ್ಪಿ ಆಯ್ದುಕೊಂಡಿರುವ ದಾರಿ 'ಮುಳ್ಳಿನ ಹಾದಿ' ಎಂದು ಹಲವರು ವ್ಯಾಖ್ಯಾನ ಮಾಡಬಹುದು. ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿರಬಹುದು. ಇದು ಸಿನಿಮಾ ಮಾಡುವಷ್ಟು ಸುಲಭ ಅಲ್ಲ ಅಂತಲೂ ಕೆಲವರು ಕಾಲೆಳೆಯಬಹುದು.

ಯಾರು ಏನೇ ಅಂದರೂ, ರಾಕಿಂಗ್ ಸ್ಟಾರ್ ಯಶ್ ಮಾತ್ರ ಉಪೇಂದ್ರ ರವರಿಗೆ ಬೆಂಬಲ ನೀಡಿದ್ದಾರೆ. ಉಪೇಂದ್ರ ರವರ ಕನಸು ನನಸಾಗಲಿ ಎಂದು ಯಶ್ ಹಾರೈಸಿದ್ದಾರೆ. ಉಪೇಂದ್ರ ರವರ ರಾಜಕೀಯ ಪ್ರವೇಶ ಹಾಗೂ ಸಮಾಜವನ್ನು ಬದಲಾಯಿಸುವ ಕನಸಿನ ಬಗ್ಗೆ ನಟ ಯಶ್ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಹೀಗೆ....

ಉಪೇಂದ್ರ ಸ್ವಲ್ಪ ಲೇಟ್ ಮಾಡಿದರು

''ಉಪೇಂದ್ರ ರವರಿಂದ ಸ್ಫೂರ್ತಿ ಪಡೆದು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವನು ನಾನು. ನನ್ನ ಪ್ರಕಾರ ರಾಜಕೀಯಕ್ಕೆ ಬರಲು ಉಪೇಂದ್ರ ಅವರು ಸ್ವಲ್ಪ ಲೇಟ್ ಮಾಡಿದ್ರು. ರಾಜಕೀಯಕ್ಕೆ ಬಂದು ತುಂಬಾ ಬದಲಾವಣೆ ಮಾಡಬೇಕು ಎಂದು ಬಹಳಷ್ಟು ದಿನಗಳಿಂದ ಅವರು ಕನಸು ಇಟ್ಟುಕೊಂಡಿದ್ದಾರೆ. ಅದು ಎಲ್ಲರಿಗೂ ಗೊತ್ತು'' - ಯಶ್, ನಟ

ಉಪೇಂದ್ರ ಕನಸು ನನಸಾಗಬೇಕು

''ಲೀಡರ್ ಆದವನು ವರ್ಕ್ ಮಾಡಬೇಕು. ವರ್ಕ್ ಮಾಡುವುದಕ್ಕೂ ಲೀಡರ್ ಶಿಪ್ ಕ್ವಾಲಿಟಿ ಇರಬೇಕು. 'ಗೋ' ಅನ್ನೋರು ಯಾವತ್ತೂ ಲೀಡರ್ ಆಗಲ್ಲ. 'ಲೆಟ್ಸ್ ಗೋ' ಅನ್ನೋರು ಮಾತ್ರ ಲೀಡರ್ ಆಗಲು ಸಾಧ್ಯ. ಉಪೇಂದ್ರ ಅವರಿಗೆ ತುಂಬಾ ಕನಸುಗಳಿವೆ. ಅವರ ಕನಸುಗಳು ನನಸಾಗಲು ನಾವು ಬಿಡಬೇಕು. ಬದಲಾವಣೆ ತರಲು ಎಲ್ಲರೂ ಕೈಜೋಡಿಸಬೇಕು'' - ಯಶ್, ನಟ

ಉಪ್ಪಿ ಮೇಲೆ ನಂಬಿಕೆ ಇದೆ

''ಸಿನಿಮಾ ತರಹ ಅಂದುಕೊಳ್ಳಬೇಡಿ ಇದು ಅಂತಾರೆ. ಸಿನಿಮಾಗೂ ಲೈಫ್ ಗೂ ಅಷ್ಟು ವ್ಯತ್ಯಾಸ ಏನೂ ಇಲ್ಲ. ನಮ್ಮ ಸಮಾಜದ ವ್ಯವಸ್ಥೆಯಲ್ಲಿ ಉಪೇಂದ್ರ ಬದಲಾವಣೆ ತರುತ್ತಾರೆ ಎಂಬ ನಂಬಿಕೆ ನನಗಿದೆ'' - ಯಶ್, ನಟ

ಉಪೇಂದ್ರ ಆಯ್ಕೆ ಪರ್ಫೆಕ್ಟ್

''ಪ್ರಜಾಕೀಯ' ಅಂತ ಬಹಳ ಒಳ್ಳೆಯ ಹೆಸರನ್ನೂ ಉಪೇಂದ್ರ ಕೊಟ್ಟಿದ್ದಾರೆ. ಉಪೇಂದ್ರ ಅವರು ಹೋಗುತ್ತಿರುವ ದಾರಿ ನನ್ನ ಪ್ರಕಾರ ಪರ್ಫೆಕ್ಟ್ ಆಗಿದೆ. ಅವರಿಗೆ ಒಳ್ಳೆಯದ್ದಾಗಲಿ.. ಉಪೇಂದ್ರ ಅವರಿಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ'' - ಯಶ್, ನಟ

English summary
Rocking Star Yash supports Real Star Upendra for his decision of entering into Politics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada