ಉಪ್ಪಿ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಉಪೇಂದ್ರ ಮತ್ತೆ ಬಾ' ಟ್ರೇಲರ್
'ಉಪೇಂದ್ರ ಮತ್ತೆ ಬಾ.. ಇಂತಿ ನಿನ್ನ ಪ್ರೇಮಾ' ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಉಪೇಂದ್ರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ.
ಟ್ರೇಲರ್ ನಲ್ಲಿ ಎರಡು ಗೆಟಪ್ ಗಳಲ್ಲಿ ಉಪೇಂದ್ರ ಮಿಂಚಿದ್ದಾರೆ. ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾವಾಗಿದ್ದು, ಟ್ರೇಲರ್ ಸಖತ್ ಕಲರ್ ಫುಲ್ ಆಗಿ ಮೂಡಿ ಬಂದಿದೆ. ಅಂದಹಾಗೆ, 'ಉಪೇಂದ್ರ ಮತ್ತೆ ಬಾ.. ಇಂತಿ ನಿನ್ನ ಪ್ರೇಮಾ' ಚಿತ್ರ ತೆಲುಗಿನ 'ಸೊಗ್ಗಾಡೆ ಚಿನ್ನ ನಾಯನ' ಚಿತ್ರದ ರಿಮೇಕ್ ಆಗಿದೆ.

ಉಪೇಂದ್ರ ಅವರ ಈ ಸಿನಿಮಾದಲ್ಲಿ ನಾಯಕಿಯರ ದೊಡ್ಡ ದಂಡು ಇದೆ. ಪ್ರೇಮಾ, ಶ್ರುತಿ ಹರಿಹರನ್, 'ಕೋಮಾ' ಚಿತ್ರದ ಖ್ಯಾತಿಯ ಶೃತಿ, ಹರ್ಷಿಕಾ ಪೂಣಚ್ಚ, ದೀಪ್ತಿ ಕಾಪ್ಸೆ ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಒಂದು ಹಾಡಿನಲ್ಲಿ ನಟಿ ಚಾಂದಿನಿ ಕಾಣಸಿಕೊಂಡಿದ್ದು, 'ಎ' ಚಿತ್ರದ ಜೋಡಿ 19 ವರ್ಷದ ಬಳಿಕ ಮತ್ತೆ ಒಂದಾಗಿದೆ.
ಉಪ್ಪಿ ಶಿಷ್ಯ ಅರುಣ್ ಲೋಕನಾಥ್ 'ಹೆಚ್ ಟು ಒ' ಚಿತ್ರದ ನಂತರ ಮತ್ತೆ ಉಪೇಂದ್ರ ಅವರಿಗೆ ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











