ದರ್ಶನ್, ಸುದೀಪ್ ಬಳಿಕ ಈಗ ರಿಯಲ್ ಸ್ಟಾರ್ ಕಾರುಬಾರು ಶುರು!
ಕನ್ನಡ ಸಿನಿಮಾದ ಹಾಡುಗಳು, ಟ್ರೇಲರ್, ಟೀಸರ್ ಈಗ ಯೂಟ್ಯೂಬ್ ನಲ್ಲಿ ದೊಡ್ಡ ಸದ್ದು ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್, ಸುದೀಪ್ ನಂತರ ಈಗ ನಟ ಉಪೇಂದ್ರ ದರ್ಬಾರ್ ಶುರುವಾಗಿದೆ.
ಉಪೇಂದ್ರ ನಟನೆಯ 'ಉಪೇಂದ್ರ ಮತ್ತೆ ಬಾ' ಸಿನಿಮಾದ ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ ಸಂಚಲನ ಉಂಟು ಮಾಡಿದೆ. ಚಿತ್ರದ ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ ನಂಬರ್ 2 ಟ್ರೆಂಡಿಂಗ್ ನಲ್ಲಿದೆ. ಜೊತೆಗೆ ಟ್ರೇಲರ್ ಈಗ 2 ಲಕ್ಷ ಹಿಟ್ಸ್ ಪಡೆಯುವ ಹತ್ತಿರದಲ್ಲಿದೆ.

ಇಲ್ಲಿ ಉಪ್ಪಿ ಎರಡು ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾವಾಗಿದ್ದು, ಟ್ರೇಲರ್ ಸಖತ್ ಕಲರ್ ಫುಲ್ ಆಗಿ ಮೂಡಿ ಬಂದಿದೆ. ಅಂದಹಾಗೆ, 'ಉಪೇಂದ್ರ ಮತ್ತೆ ಬಾ.. ಇಂತಿ ನಿನ್ನ ಪ್ರೇಮಾ' ಚಿತ್ರ ತೆಲುಗಿನ 'ಸೊಗ್ಗಾಡೆ ಚಿನ್ನ ನಾಯನ' ಚಿತ್ರದ ರಿಮೇಕ್ ಆಗಿದೆ.
ಪ್ರೇಮಾ, ಶ್ರುತಿ ಹರಿಹರನ್, 'ಕೋಮಾ' ಚಿತ್ರದ ಖ್ಯಾತಿಯ ಶೃತಿ, ಹರ್ಷಿಕಾ ಪೂಣಚ್ಚ, ದೀಪ್ತಿ ಕಾಪ್ಸೆ ಚಿತ್ರದಲ್ಲಿ ನಟಿಸಿದ್ದಾರೆ. ಉಪ್ಪಿ ಶಿಷ್ಯ ಅರುಣ್ ಲೋಕನಾಥ್ 'ಹೆಚ್ ಟು ಒ' ಚಿತ್ರದ ನಂತರ ಮತ್ತೆ ಉಪೇಂದ್ರ ಅವರಿಗೆ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











